ಚಿತ್ರೀಕರಣ ಮುಗಿಸಿದ ಕಾಮಿಡಿ, ಸಸ್ಪೆನ್ಸ್ ಸಿನಿಮಾ “ನಿಮ್ದೆ ಕಥೆ”

ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾದ ಪಟ್ಟಿಯಲ್ಲಿ ಈಗ “ನಿಮ್ದೆ ಕಥೆ” ಮತ್ತೊಂದು ಸೇರ್ಪಡೆಯಾಗಿದೆ. ಲವ್ ಮಾಕ್ಟೇಲ್ ಚಿತ್ರದಲ್ಲಿ ನಟಿಸಿದ್ದ ಅಭಿಲಾಷ ಧಳಪತಿ ಮತ್ತು ರಾಷಿಕಾ ಶೆಟ್ಟಿ ಮುಖ್ಯ ಭೂಮಿಕೆಯ ಚಿತ್ರ ಇದು.

ಚಿತ್ರದಲ್ಲಿ ಸಿಹಿ ಕಹಿ ಚಂದ್ರು, ಕಾಮಿಡಿ ಕಿಲಾಡಿಯ ಕೋಳಿ ಕಳ್ಳ ಮನೋಹರ್ ಗೌಡ, ಕೆ ವಿ ಮಂಜಯ್ಯ, ಜ್ಯೋತಿ ಮರೂರ್ ಸೇರಿದಂತೆ ಮತ್ತಿತರ ಕಲಾವಿದರ ದಂಡು ಚಿತ್ರದಲ್ಲಿದೆ.
ಇದೊಂದು ಹಾಸ್ಯ ತುಂಬಿದ, ಎಮೋಷನ್ ಹಾಗೂ ಸ್ವಲ್ಪ ಸಸ್ಪೆನ್ಸ್ ಕೂಡ ಒಳಗೊಂಡು ಪ್ರೇಕ್ಷಕರಿಗೆ ರಂಜಿಸಲು ಬೇಕಾದ ಬಹಳಷ್ಟು ಅಂಶಗಳು ನಿಮ್ದೆ ಕಥೆ ಚಿತ್ರದಲ್ಲಿ ನಾವು ನೋಡಬಹುದು ಎಂದು ನಿರ್ದೇಶಕರು ಹೇಳಿದ್ದಾರೆ.

ಬೆಂಗಳೂರು ಮತ್ತು ಮೈಸೂರು ಸುತ್ತ ಮುತ್ತ 40 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು ಈಗ ನಿಮ್ದೆ ಕಥೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸವು ಮುಕ್ತಾಯ ಹಂತದಲ್ಲಿ ಇದ್ದು, ಇದೇ ವರ್ಷ ಅಂದ್ರೆ 2024 ನವೆಂಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗಲು ಎಲ್ಲಾ ಸಿದ್ಧತೆ ನಡೆಯುತ್ತಿದೆ.
ನಿಮ್ದೆ ಕಥೆ ಚಿತ್ರದ ದ್ವನಿ ಸುರುಳಿ ಬ್ಲೂ ಸ್ಕೈ ಸ್ಟುಡಿಯೋಸ್ ಆಡಿಯೋದಲ್ಲಿ ಬಿಡುಗಡೆಗೊಳಿಸಲು ತಯಾರಿ ನೆಡೆಸಿದ್ದು ಹಾಡುಗಳು ನಿಮ್ಮನ್ನು ರಂಜಿಸಲಿವೆ. ಸದ್ಯದಲ್ಲೇ ಚಿತ್ರದ ಮೊಷನ್ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರದ ಪ್ರಚಾರದ ಕೆಲಸಗಳಿಗೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ.

ಶ್ರೀನಿವಾಸ ರೆಡ್ಡಿ ಮತ್ತು ಅರವಿಂದ್ ಯು ಎಸ್ ಜಂಟಿಯಾಗಿ ನಿಮ್ದೆ ಕಥೆ ಚಿತ್ರ ನಿರ್ಮಾಣ ಮಾಡಿದ್ದಾರೆ, ಸಿ ಎಸ್ ರಾಘವೇಂದ್ರ ನಿಮ್ದೆ ಕಥೆ ಚಿತ್ರದ ನಿರ್ದೇಶಕರು, ಪ್ರವೀಣ್ ನಿಕೇತನ್ ಸಂಗೀತ ಸಂಯೋಜನೆ, ಪ್ರಶಾಂತ್ ಸಾಗರ್ ಛಾಯಾಗ್ರಹಣವಿದ್ದು, ಸುನಿಲ್ ಎಸ್ ಸಂಕಲನವಿದೆ ಹಾಗೂ ಇನ್ನೂ ಹಲವು ತಂತ್ರಜ್ಞರು ನಿಮ್ದೆ ಕಥೆ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.