"Container" Trailer Released: Censor Board Applauds Movie

“ಕಂಟೈನರ್” ಚಿತ್ರದ ಟ್ರೈಲರ್ ಬಿಡುಗಡೆ: ಸಿನಿಮಾ ಮೆಚ್ಚಿದ ಸೆನ್ಸಾರ್ ಮಂಡಳಿ - CineNewsKannada.com

“ಕಂಟೈನರ್” ಚಿತ್ರದ ಟ್ರೈಲರ್ ಬಿಡುಗಡೆ: ಸಿನಿಮಾ ಮೆಚ್ಚಿದ ಸೆನ್ಸಾರ್ ಮಂಡಳಿ

ಗರುಡಾಕ್ಷ’ ನಿರ್ಮಾಣ ಮಾಡಿದ್ದ ಎಸ್.ನರಸಿಂಹಮೂರ್ತಿ ಗ್ಯಾಪ್ ತರುವಾಯ ’ಕಂಟೈನರ್’ ಸಿನಿಮಾಕ್ಕೆ ಬಂಡವಾಳ ಹೂಡುವ ಜತೆಗೆ ರಚನೆ,ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಸೆನ್ಸಾರ್‌ ಮಂಡಳಿ ಚಿತ್ರದ ಬಗ್ಗೆ ಪ್ರಶಂಸೆ ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸದೆ, ಕ್ಲೀನ್ ’ಯು’ ಪ್ರಮಾಣಪತ್ರ ನೀಡಿ ಶುಭ ಹಾರೈಸಿದ್ದಾರೆ. ಪ್ರಚಾರದ ಸಲುವಾಗಿ ಟ್ರೇಲರ್ ಬಿಡುಗಡೆಯಾಗಿದೆ‌

ನಿರ್ದೇಶಕರು ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿರುವುದರಿಂದ ವೈದ್ಯಕೀಯ ವಿಷಯಕ್ಕೆ ಸಂಬಂದಪಟ್ಟಂತೆ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ದಿನಪತ್ರಿಕೆಯಲ್ಲಿ ಬಂದಂತ ಸುದ್ದಿಗಳನ್ನು ಹೆಕ್ಕಿಕೊಂಡು, ಸಣ್ಣ ಹಾಗೂ ಧ್ವನಿ ಇಲ್ಲದ ಕಾರ್ಮಿಕನಿಗೂ ಬೆಲೆ ಇರುತ್ತದೆ ಎಂಬುದನ್ನು ಸಂದೇಶದಲ್ಲಿ ಹೇಳಿದ್ದಾರೆ. ಕ್ಯಾನ್ಸರ್ ಸುಡುವ ಬೃಹದಕಾರದ ಯಂತ್ರವನ್ನು ಉಪಯೋಗಿಸಿದ ತರುವಾಯ ಮರಳಿ ಸ್ಪೈನ್‌ಗೆ ಹಿಂದುರಿಗಿಸ ಬೇಕಾಗಿರುತ್ತದೆ.

ಈ ಸಮಯದಲ್ಲಿ ಹಡಗಿನಲ್ಲಿ ಕಂಟೈನರ್ ಸಾಗಿಸುವಾಗ ಅಚಾತುರ್ಯದಿಂದ ಅದರ ಒಳಗಡೆ ಕಾರ್ಮಿಕನೊಬ್ಬ ಬಂದಿಯಾಗುತ್ತಾನೆ. ಒಂದು ದಿನದಲ್ಲಿ ನಡೆಯುವ ಘಟನೆಯಲ್ಲಿ ಆತ ಹೊರಗೆ ಬರುತ್ತಾನಾ ಅಲ್ಲೆ ನರಳುತ್ತಾನಾ ಎಂಬುದನ್ನು ಕುತೂಹಲದೊಂದಿಗೆ ತೋರಿಸಲಾಗಿದೆ.

ಕಾರ್ಮಿಕನಾಗಿ ದತ್ತಾತ್ರೇಯ ಪೂಜಾರಿ ನಾಯಕ. ಪುಣ್ಯಗೌಡ ನಾಯಕಿ. ಉಳಿದಂತೆ ಮಂಜುನಾಥ್.ಜಿ, ರಂಗನಾಥ್, ಮಂಜು.ಬಿ.ಕೆ ಉದಯಕುಮಾರ್ ಮುಂತಾದವರು ನಟಿಸಿದ್ದಾರೆ.

ಸಂಗೀತ ಅಲಂಕಾರ್, ಛಾಯಾಗ್ರಹಣ ಶ್ರೀನಿವಾಸ್, ಸಂಕಲನ ಭಾರ್ಗವ ಅವರದಾಗಿದೆ. ಬೆಂಗಳೂರು, ಮಂಗಳೂರು ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ದಸರಾ ನಂತರ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin