ಮುದ್ದಾದ ಪ್ರೇಮಕಥೆಯ ಚಿತ್ರ “ಒಲವೇ ಮಂದಾರ 2”
ಹಲವು ವರ್ಷಗಳ ಬಳಿಕ ತೆರೆಗೆ ಬಂದಿದ್ದ “ಒಲವೇ ಮಂದಾರ” ಚಿತ್ರರಂಗದಲ್ಲಿ ಸದ್ದು ಮಾಡಿತ್ತು. ಅಲ್ಲದೆ ಹೊಸಬರಿಗೆ ಚಿತ್ರರಣಗದಲ್ಲಿ ಒಂದಷ್ಟು ಹೆಸರು ತಂದುಕೊಟ್ಟಿತ್ತು. ಇದೀಗ “ಒಲವೇ ಮಂದಾರ-2 “ ಚಿತ್ರದ ಮೂಲಕ ಮತ್ತೊಂದು ತಂಡ ಗಮನ ಸೆಳೆಯಲು ಮುಂದಾಗಿದೆ.
ಎಸ್ ಆರ್ ಪಾಟೀಲ್ ನಿರ್ದೇಶನದಲ್ಲಿ ಸನತ್ ನಾಯಕನಾಗಿ ನಟಿಸಿರುವ “ಒಲವೇ ಮಂದಾರ 2” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.
“ಒಲವೇ ಮಂದಾರ 2” ಪರಿಶುದ್ಧ ಪ್ರೇಮಕಥೆ ಎಂದು ಮಾತು ಆರಂಭಿಸಿದ ನಿರ್ದೇಶಕ ಎಸ್.ಆರ್.ಪಾಟೀಲ್, ಈ ಪ್ರಪಂಚದಲ್ಲಿ ಪ್ರೀತಿ ಮಾಡುವವರನ್ನು ಅವರ ತಂದೆ ತಾಯಿ ತಮ್ಮ ಮಕ್ಕಳು ಕ್ರೈಮ್ ಮಾಡಿರುವ ಹಾಗೆ ನೋಡಲಾಗುತ್ತದೆ. ಅದರಲ್ಲೂ ಹೆಚ್ಚಾಗಿ ಹೆಣ್ಣುಮಕ್ಕಳನ್ನು. ಇದು ತಪ್ಪು. ಒಬ್ಬರನೊಬ್ಬರು ಅರಿತುಕೊಂಡು ಮಾಡುವ ಪ್ರೀತಿ ಯಾವತ್ತು ತಪ್ಪಲ್ಲ, ಹಾಗೆ ಪ್ರೀತಿ ಮಾಡಿದವರು ಕೊನೆಯ ಕ್ಷಣದವರೆಗೂ ತಮ್ಮ ಪ್ರೀತಿಯನ್ನು ಅವರ ತಂದೆ ತಾಯಿಗೆ ಒಪ್ಪಿಸಲು ಪ್ರಯತ್ನಿಸಬೇಕು ಹೊರತು ಬೇರೆ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಸಂದೇಶ ಈ ಚಿತ್ರದಲ್ಲಿದೆ.
ನನಗೆ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ “ಒಲವೇ ಮಂದಾರ” ಚಿತ್ರ ಇಷ್ಟ. ಹಾಗಾಗಿ ಶೀರ್ಷಿಕೆ ಇಟ್ಟಿದ್ದೇವೆ ಹೊರತು, ಆ ಚಿತ್ರದ ಕಥೆಯೇ ಬೇರೆ. ನಮ್ಮ ಚಿತ್ರದ ಕಥೆಯೆ ಬೇರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಚಿತ್ರ ಇದೇ ಸೆಪ್ಟೆಂಬರ್ 15 ರಂದು ತೆರೆಗೆ ಬರಲಿದೆ. ನಮ್ಮ ಚಿತ್ರವನ್ನು ಎಲ್ಲರೂ ನೋಡಿ ಪೆÇ್ರೀತ್ಸಾಹ ನೀಡಿ ಎಂದರು.
“ಕಮರೊಟ್ಟು ಚೆಕ್ ಪೆÇೀಸ್ಟ್” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನನಗೆ ಇದು ಎರಡನೇ ಚಿತ್ರ. ನಾಯ ನಟನಾಗಬೇಕೆಂಬುದು ನನ್ನಂತಹ ಮಧ್ಯಮ ವರ್ಗದ ಹುಡುಗನ ಕನಸು. ಆ ಕನಸನ್ನು ನನಸ್ಸಾಗಿಸಿದ ಎಲ್ಲರಿಗೂ ಧನ್ಯವಾದ. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕ ಸನತ್ ತಿಳಿಸಿದರು.
ನಿರ್ಮಾಪಕರಾದ ರಮೇಶ್ ಮರಗೋಳ, ಬಿ.ಎಂ.ಸತೀಶ್ ಹಾಗೂ ಸಹ ನಿರ್ಮಾಪಕರಾದ ಯಲ್ಲಾಲಿಂಗ ಮುಗುಟಿ ಹಾಗೂ ರಾಮದೇವ್ ರಾಥೋಡ್ ಚಿತ್ರ ನಿರ್ಮಾಣದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಡಾ ಕಿರಣ್ ತೋಟಂಬೈಲ್ ಹಾಡುಗಳ ಬಗ್ಗೆ ಹಾಗೂ ನಾಯಕಿ ಪ್ರಜ್ಞಾ ಭಟ್, ಅನುಪಾ ಸತೀಶ್, ಹಿರಿಯ ನಟಿ ಭವ್ಯ, ಡಿಂಗ್ರಿ ನಾಗರಾಜ ಕಾಮಿಡಿ ಕಿಲಾಡಿ ಮಡೆನೂರ ಮನು ,ಶಿವಾನಂದ ಸಿಂದಗಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು.