“ಜಸ್ಟ್ ಪಾಸ್ ” ಚಿತ್ರತಂಡಕ್ಕೆ ದರ್ಶನ್ ಸಾಥ್ : ಜನವರಿ 12ಕ್ಕೆ ವಿಡಿಯೋ ಹಾಡು ಬಿಡುಗಡೆ

ಕನ್ನಡ ಚಿತ್ರರಂಗದ ಸದಭಿರುಚಿ ಮತ್ತು ಪ್ರತಿಭಾವಂತ ನಿರ್ದೇಶಕ ಕೆ.ಎಂ ರಘು ಆಕ್ಷನ್ ಕಟ್ ಹೇಳಿರುವ ವಿಭಿನ್ ಕಥೆಯ ಚಿತ್ರ “ ಜಸ್ಟ್ ಪಾಸ್” ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳ 12 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜಸ್ಟ್ ಪಾಸ್ ಚಿತ್ರದ ವಿಡಿಯೋ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ

ರಾಯ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೆ ವಿ ಶಶಿಧರ್ ನಿರ್ಮಾಣದ, ಕೆ ಎಮ್ ರಘು ಆಕ್ಷನ್ ಕಟ್ ಹೇಳಿರುವ “ಜಸ್ಟ್ ಪಾಸ್” ಚಿತ್ರತಂಡ ಈಗಾಗಲೇ ಟೀಸರ್ ಬಿಡುಗಡೆಗೊಳಿಸಿ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ಸುದ್ದಿಯನ್ನು ಹಂಚಿಕೊಂಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ತಂಡಗಳಿಗೆ ಮತ್ತು ಸ್ನೇಹಿತರಿಗೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುವುದಕ್ಕೆ ಎತ್ತಿದ ಕೈ.”ಜಸ್ಟ್ ಪಾಸ್” ಚಿತ್ರದ ಮೊದಲ ವಿಡಿಯೋ ಸಾಂಗ್ ಒಂದನ್ನು ದರ್ಶನ್ ರವರು 12ನೇ ತಾರೀಕು ಬಿಡುಗಡೆ ಮಾಡಲಿದ್ದಾರೆ.”ಸಿಂಗಾರ ಸಿರಿಯೇ” ಎಂದು “ಕಾಂತಾರ” ಚಿತ್ರದ ಮೂಲಕ ತಮ್ಮ ಸಾಹಿತ್ಯದ ಕೌಶಲ್ಯವನ್ನು ಮೆರೆದಂತಹ ಪ್ರಮೋದ್ ಮರವಂತೆ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ

ಹುಕ್ ಸ್ಟೆಪ್ ಗಳ ಮೂಲಕ ಹೆಚ್ಚು ಸುದ್ದಿಯಾಗುವಂತಹ ಭೂಷಣ್ ಈ ಹಾಡನ್ನು ಕೋರಿಯೋಗ್ರಫಿ ಮಾಡಿದ್ದಾರೆ.12ನೇ ವಯಸ್ಸಿಗೆ ಕೀಬೋರ್ಡ್ ನುಡಿಸುವುದರ ಮೂಲಕ ಘಟಾನುಘಟಿ ಮ್ಯೂಸಿಕ್ ಡೈರೆಕ್ಟರ್ ಗಳ ಜೊತೆ ಕೆಲಸ ಮಾಡಿರುವಂತಹ ಹರ್ಷವರ್ಧನ್ ರಾಜ್ ರವರ ಮ್ಯಾಜಿಕ್ ಸಂಗೀತ ಸಂಯೋಜನೆ ಇದೆ.
ಹೆಸರಾಂತ ಛಾಯಾಗ್ರಾಹಕ ಸತ್ಯ ಹೆಗಡೆ ಜೊತೆಗೆ ಕೆಲಸ ಮಾಡಿರುವಂತಹ ಅನುಭವಿ ಸುಜಯ್ ಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. “ಜಸ್ಟ್ ಪಾಸ್ ” ಚಿತ್ರದ ತಾರಾ ಗಣದಲ್ಲಿ ಶ್ರೀ, ಪ್ರಣತಿ ಹಾಗೂ ಹೊಸ ಯುವಕರ ಜೊತೆಗೆ ರಂಗಾಯಣ ರಘು ಸಾಧು ಕೋಕಿಲ ಸುಚೇಂದ್ರ ಪ್ರಸಾದ್ “ಕಾಂತಾರ” ಫೇಮ್ ನ ಪ್ರಕಾಶ್ ತುಂಬಿನಾಡು,ದೀಪಕ್ ರೈ ,’ಕಾಮಿಡಿ ಕಿಲಾಡಿ” ಖ್ಯಾತಿಯ ಗೋವಿಂದೇಗೌಡ, ದಾನಪ್ಪ ಹೀಗೆ ಕಲಾವಿದರ ದಂಡೆ ಇದೆ,