'Dhulu' lyrical video song from the movie 'Kenda' released,

‘ಕೆಂಡ’ ಚಿತ್ರದ `ಧೂಳು’ ಲಿರಿಕಲ್ ವೀಡಿಯೋ ಹಾಡು ಬಿಡುಗಡೆ - CineNewsKannada.com

‘ಕೆಂಡ’ ಚಿತ್ರದ `ಧೂಳು’ ಲಿರಿಕಲ್ ವೀಡಿಯೋ ಹಾಡು ಬಿಡುಗಡೆ

ರೂಪಾ ರಾವ್ ನಿರ್ಮಾಣ ಮತ್ತು ಸಹದೇವ್ ಕೆಲವಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಕೆಂಡ’. ಆರಂಭದಿಂದ ಇಲ್ಲಿಯವರೆಗೂ ಒಂದಷ್ಟು ಕುತೂಹಲ ಕಾಪಾಡಿಕೊಂಡು ಬಂದಿದೆ. ಇದೀಗ ಲಿರಿಕಲ್ ವಿಡಿಯೋ ಬಿಡುಗಡೆಯಾಗಿ ಗಮನ ಸೆಳೆದಿದೆ.

ದಾರಿಯಲ್ಲಿ ಧೂಳು… ದೂರ ಎಲ್ಲೋ ಊರು… ಅಂತ ತೆರೆದುಕೊಳ್ಳೋ ಈ ಹಾಡು ನವಿರು ಸಾಹಿತ್ಯ, ಅದಕ್ಕೊಪ್ಪುವ ಸಂಗೀತ ಹಾಗೂ ಧ್ವನಿಯೊಂದಿಗೆ ಮೆಲ್ಲಗೆ ಮನಸಿಗಿಳಿಯುವಂತಿದೆ. ರಿತ್ವಿಕಕ್ ಕಾಯ್ಕಿಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು, ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಡಿದ್ದಾರೆ.

ಜಯಂತ್ ಕಾಯ್ಕಿಣಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದಕ್ಕೆ ಅವರ ಪುತ್ರ ರಿತ್ವಿಕ್ ಮೆಲುವಾದ ಸಂಗೀತ ಸ್ಪರ್ಶ ನೀಡಿದ್ದಾರೆ. ಮೊದಲ ಹಾಡಿನ ಮೂಲಕ ಗಮನ ಸೆಳೆದಿದ್ದ ರಿತ್ವಿಕ್ ಕಾಯ್ಕಿಣಿ, ಎರಡನೇ ಈ ಹಾಡಿನ ಮೂಲಕ ಮತ್ತಷ್ಟು ಭರವಸೆ ಮೂಡಿಸಿದ್ದಾರೆ

ಮತ್ತೆ ಮತ್ತೆ ಕೇಳಿಸಿಕೊಂಡು, ವಿವರಿಸಲಾಗದಂಥಾ ಧ್ಯಾನಕ್ಕೆ ದೂಡುವ ಗುಣದ ಈ ಹಾಡು ಕೇಳುಗರನ್ನೆಲ್ಲ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಹೀಗೆ ಹಾಡುಗಳ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಕೆಂಡ ಇದೇ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ.

ಈಗಾಗಲೇ ಗಂಟುಮೂಟೆ ಚಿತ್ರದ ಮೂಲಕ ನಿರ್ದೇಶಕಿಯಾಗಿ ನೆಲೆ ಕಂಡುಕೊಂಡಿರುವವರು ರೂಪಾ ರಾವ್. ಕೆಂಡದ ಮೂಲಕ ನಿರ್ಮಾಪಕಿಯಾಗಿ ರೂಪಾಂತರಗೊಂಡಿದ್ದಾರೆ. ಗಂಟುಮೂಟೆಯ ಭಾಗವಾಗಿದ್ದ ಸಹದೇವ್ ಕೆಲವಡಿ ಕೆಂಡದೊಂದಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಸಹದೇವ್ ಒಂದೊಳ್ಳೆ ಕಥೆಗೆ ಪರಿಣಾಮಕಾರಿಯಾಗಿ ದೃಷ್ಯರೂಪ ನೀಡಿರುವ ಸ್ಪಷ್ಟ ಲಕ್ಷಣಗಳು ಗೋಚರಿಸಿವೆ. ಇದೀಗ ಕೆಂಡದ ಎರಡನೇ ಹಾಡು ಬಿಡುಗಡೆಗೊಂಡಿದೆ. ಚಿತ್ರ ಸದ್ಯದಲ್ಲಿಯೇ ತೆರೆಗೆ ಬರುವ ನಿರೀಕ್ಷೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin