“ಕೆಡಿ” ಚಿತ್ರದ ಜೋಡೆತ್ತು ಹಾಡಿಗೆ ನಿರ್ದೇಶಕ ಪ್ರೇಮ್ ಧ್ವನಿ: ಏಪ್ರಿಲ್ 30 ಕ್ಕೆ ಸಿನಿಮಾ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ಮುಂದಿನ ವರ್ಷದ ಬಹುಬೇಡಿಕೆಯ ಚಿತ್ರಗಳಲ್ಲಿ ನಿರ್ದೇಶಕ ಪ್ರೇಮ್ ಆಕ್ಷನ್ ಕಟ್ ಹೇಳಿರುವ ” ಕೆಡಿ ” ಚಿತ್ರ ಕೂಡ ಒಂದು. ಚಿತ್ರದ ಜೋಡೆತ್ತು.. ಹಾಡಿಗೆ ಸ್ವತಃ ನಿರ್ದೇಶಕರಿಗೆ ಧ್ವನಿಯಾಗಿದ್ದಾರೆ. ಜೊತೆ ಏಪ್ರಿಲ್ 30 ರಂದು ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ

ದೃವ ಸರ್ಜಾ ನಟನೆಯ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ ,ರವಿಚಂದ್ರನ್, ರಮೇಶ್ ಅರವಿಂದ್, ಯಶ್ ಶೆಟ್ಟಿ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡೇ ಚಿತ್ರದಲ್ಲಿದ್ದು ನಿರೀಕ್ಷೆ ಹೆಚ್ಚು ಮಾಡಿದೆ. ಚಿತ್ರ ಯಾವಾಗ ಬಿಡುಗಡೆ ಎನ್ನುವ ಕುತೂಹಲಕ್ಕೆ ಚಿತ್ರತಂಡ ಬಿಡುಗಡೆ ದಿನಾಂಕ ಪ್ರಕಟಿಸುವ ಮೂಲಕ. ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕೆವಿ ಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಕೆಡಿ ಚಿತ್ರದ “ಅಣ್ತಮ್ಮ ಜೋಡೆತ್ತು ಕಣೋ” ಹಾಡು, ಅಣ್ಣಾ ತಮ್ಮಂದಿರ ಬಾಂದವ್ಯವನ್ನು ಹೇಳುವಂತಿದೆ. ತಂದಾನಿ ತಾನೇ ಬಿಜಿಎಂ ನಿಂದ ಪ್ರಾರಂಭವಾದ ಹಾಡು ಧ್ರುವ ಹಾಗೂ ರವಿಚಂದ್ರನ್, ರಮೇಶ್, ಸಂಜಯ್ ದತ್ತ್, ಮಳೆಯಲ್ಲಿ ಡಾನ್ಸ್, ಸಿನಿಮಾದ ಕೆಲವು ಬಿಟ್ ಗಳಿಂದ ಕೂಡಿದೆ. ಹಾಡಿನಲ್ಲಿ ಧ್ರುವ ಕಂಪ್ಲೀಟ್ ಆಗಿ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಧ್ರುವ ಜೊತೆಗೆ ರವಿಚಂದ್ರನ್, ರಮೇಶ್ ಹೆಜ್ಜೆ ಹಾಕಿದ್ದಾರೆ. ಎರಡೂವರೆ ಮೂರು ವರ್ಷಗಳಿಂದ ನಿರ್ಮಾಣ ಆಗುತ್ತಿರುವ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ.

ನಿರ್ದೇಶಕ ಜೋಗಿ ಪ್ರೇಮ್ ಕಂಠಸಿರಿಯಲ್ಲಿ ಅಣ್ತಮ್ಮ ಜೋಡೆತ್ತು ಹಾಡು ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಮತ್ತು ಕುತೂಹಲ ಹೆಚ್ಚಳ ಮಾಡಿದೆ. ಅಣ್ತಮ್ಮ ಜೋಡೆತ್ತು ಕಣೋ ಹಾಡಿಗೆ ಜೋಗಿ ಪ್ರೇಮ್ ಅವರಿಗೆ ಹೇಳಿ ಮಾಡಿಸಿದ ಹಾಗಿದೆ.
ಈ ಹಿಂದೆ ನಿರ್ದೇಶಕ ಪ್ರೇಮ್ ಕಂಠ ಸಿರಿಯಲ್ಲಿ ಮೂಡಿಬಂದ ಎಕ್ಸ್ ಕ್ಯೂಸ್ ಮೀ ಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಬರೆದಿದ್ದ
ಬ್ರಹ್ಮ ವಿಷ್ಣು ಶಿವ ಹಾಡಿಗೆ ಧ್ವನಿಯಾಗಿದ್ದರು. ಆರ್ ಪಿ ಪಟ್ನಾಯಕ್ ಸಂಗೀತ ನೀಡಿದ್ದರು. ಈ ಹಾಡು ಆಲ್ ಟೈಮ್ ಫೇವರೆಟ್ ಆಗಿದೆ.
‘ಬೇಡವೆನು ವರವನ್ನು” ಪ್ರೇಮ್ ನಿರ್ದೇಶಿಸಿದ್ದ ಜೋಗಿ ಸಿನಿಮಾದ ಮತ್ತೊಂದು ಹಾಡಿಗೆ ಪ್ರೇಮ್ ಧ್ವನಿಯಾಗಿದ್ದರು.. ಗುರು ಕಿರಣ್ ಸಂಗೀತ ನೀಡಿದ್ದ ಚಿತ್ರದ ಎಲ್ಲ ಹಾಡುಗಳನ್ನು ಸ್ವತಃ ಪ್ರೇಮ್ ಬರೆದಿದ್ದರು.

ಪ್ರೇಮ್ ನಿರ್ದೇಶಿಸಿ, ಮೊದಲ ಬಾರಿಗೆ ನಟಿಸಿದ್ದ ಪ್ರೀತಿ ಯಾಕೆ ಭೂಮಿ ಮೇಲಿದೆ ಸಿನಿಮಾದಲ್ಲಿ ಶೀರ್ಷಿಕೆ ಗೀತೆ ಪ್ರೀತಿ ಯಾಕೆ ಈ ಭೂಮಿ ಮೇಲಿದೆ ಹಾಡುವ ಮೂಲಕ ಗಮನ ಸೆಳೆದಿದ್ದರು
ಇದೊಂದಿಗೆ ರಾಜ ಹೇಳುವಾಗೆಲ್ಲ, ಓಡೋಲೆ, ಢವಢವ ಅಂತ, ಸೇಸಮ್ಮ ಸೇಸಮ್ಮ, ಬಂದ ಬಂದ ಡಿಕೆ ಸಾಹೇಬ, ಲವ್ ಆಗೋಯ್ತೆ ನಿನ್ಮೇಲೆ ಇನ್ನು ಮುಂತಾದ ಹಾಡುಗಳು ಮ್ಯೂಸಿಕ್ ಲವರ್ಸ್ ಫೇವರೇಟ್ ಹಾಡಾಗಿವೆ ಅದರಂತೆ ಕೆಡಿ ಸಿನಿಮಾದ ಅಣ್ತಮ್ಮ ಜೋಡೆತ್ತು ಕಣೋ ಹಾಡು ಕೂಡ ಆನಂದ್ ಆಡಿಯೋದಲ್ಲಿ ರಿಲೀಸ್ ಆದ ಕೊಂಚ ಸಮಯದಲ್ಲೇ ಸಂಗೀತ ಪ್ರೇಮಿಗಳ ಮನಸ್ಸನ್ನ ಗೆದ್ದಿದೆ..
ಅಣ್ತಮ್ಮ ಜೋಡೆತ್ತು ಕಣೋ ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದ್ದು, ಕನ್ನಡದಲ್ಲಿ ಈ ಹಾಡಿಗೆ ಮಂಜುನಾಥ್ ಬಿಎಸ್ ಅದ್ಭುತವಾದ ಲಿರೀಕ್ಸ್ ಬರ್ದಿದ್ರೆ, ಜೋಗಿ ಪ್ರೇಮ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ.. ಅದರಂತೆ ಕೆಡಿ ಪ್ಯಾನ್ ಇಂಡಿಯಾ ಸಿನಿಮಾವಾಗಿರುವುದರಿಂದ ಹಿಂದಿ, ತಮಿಳು, ತೆಲುಗು, ಮಲಯಾಳಂ, ಭಾಷೆಗಳಲ್ಲೂ ಈ ಹಾಡು ಬಿಡುಗಡೆಯಾಗಿದೆ.. ಹಿಂದಿಯಲ್ಲಿ ಹಾಡು ಬಿಡುಗಡೆಯಾಗಿದೆ.
ಸಿನಿಮಾಕ್ಕೆ ಅರ್ಜುನ್ ಜನ್ಯಾ ಸಂಗೀತ ನಿರ್ದೇಶನವಿದ್ದು, ಈಗಾಗಲೇ ಬಂದಿರೋ ಶಿವ ಶಿವ ಸಾಂಗ್, ಸೆಟ್ಟಗಲ್ಲಾ ಹೋಗೆ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ.. ಅಣ್ತಮ್ಮ ಜೋಡಿತ್ತು ಹಾಡು ಕೂಡ ಧ್ರುವ ಅಭಿಮಾನಿಗಳ ಮನಸ್ಸನ್ನಹ ಗೆದ್ದಿದಲ್ಲದೆ ಸಂಗೀತ ಪ್ರಿಯರ ಪ್ರಶಂಸೆಗೆ ಗುರಿಯಾಗಿದೆ.

