"Karikada" movie ready in five languages: Release on February 6th

ಪಂಚಭಾಷೆಯಲ್ಲಿ ” ಕರಿಕಾಡ” ಚಿತ್ರದ ಸಿದ್ದ : ಫೆಬ್ರವರಿ 6 ಕ್ಕೆ ಬಿಡುಗಡೆ - CineNewsKannada.com

ಪಂಚಭಾಷೆಯಲ್ಲಿ ” ಕರಿಕಾಡ” ಚಿತ್ರದ ಸಿದ್ದ : ಫೆಬ್ರವರಿ 6 ಕ್ಕೆ ಬಿಡುಗಡೆ

ಕಾಡ ನಟರಾಜ್ ನಾಯಕನಾಗಿ ನಟಿಸಿರುವ ವಿಭಿನ್ನ ಪ್ರಯತ್ನದ ಕರಿಕಾಡ” ಚಿತ್ರ ಪಂಚಭಾಷೆಯಲ್ಲಿ ಸಿದ್ದಗೊಂಡಿದ್ದು ಫೆಬ್ರವರಿ 6 ರಂದು ತೆರೆಗೆ ಬರಲು ಸಜ್ಜಾಗಿದೆ

ಮೂಲ ಕನ್ನಡದಲ್ಲಿ ತಯಾರಾಗಿಯಾಗಿರುವ ಚಿತ್ರ ಪಂಚಭಾಷೆ ಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಮ್ಯೂಸಿಕಲ್ ಜರ್ನಿ ಮತ್ತು ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿದೆ.ಈಗಾಗಲೇ ಟೀಸರ್ ಮೂಲಕ ಚಿತ್ರ ಸದ್ದು ಮಾಡಿದ್ದು ಭರವಸೆ ಮೂಡಿಸಿದೆ.

ಸಾಹಸಮ ದೃಶ್ಯಕಾವ್ಯವಾಗಿ, ಪ್ರೇಮಕಥೆಯ ರೂಪಕವಾಗಿ, ಮಣ್ಣಿನ ಸೊಗಡಿನ ಕಥಾಹಂದರ ಹೊಂದಿರುವ ಚಿತ್ರ ತಾರಾಗಣ ಮತ್ತು ತಾಂತ್ರಿಕತೆ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಬಲರಾಜವಾಡಿ , ಯಶ್ ಶೆಟ್ಟಿ ನಟಿಸಿದ್ದು, ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಮಂಜು ಸ್ವಾಮಿ , ಗೋವಿಂದ ಗೌಡ , ದೀವಾಕರ್ , ಕಾಮಿಡಿ ಕಿಲಾಡಿ ಸೂರ್ಯ , ದಿ.ರಾಕೇಶ್ ಪೂಜಾರಿ , ವಿಜಯ್ ಚಂಡೂರು , ಚಂದ್ರಪ್ರಭ , ಕರಿಸುಬ್ಬು , ಗಿರಿ , ಮಾಸ್ಟರ್ ಆರ್ಯನ್ , ಬಾಲನಟಿ ರಿದ್ಧಿ , ಹಾಗೂ ಮುಂತಾದವರು. ಕಾಡ ನಟರಾಜ್ ಪತ್ನಿ ದೀಪ್ತಿ ದಾಮೋದರ್ ಪತಿಯ ಕನಸಿನ ಗುರಿಗೆ ದಾರಿ ತೋರಿಸಿದ್ದಾರೆ. ಸ್ನೇಹಿತ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದ ಸಾಥ್ ನೀಡಿದ್ದಾರೆ.

ಚಿತ್ರಕ್ಕೆ ಗಿಲ್ಲಿ ವೆಂಕಟೇಶ್ ಆಕ್ಷನ್ ಕಟ್ ಹೇಳಿದ್ದು ನ, ಕಾಡ ನಟರಾಜ ಕಥೆ ಇದೆ. ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಸಂಗೀತ ಚಿತ್ರಕ್ಕಿದೆ.ಕ್ಯಾಮರಾ ಸಾರಥಿಯಾಗಿ ಜೀವನ್ ಗೌಡ ಕೆಲಸ ಮಾಡಿದ್ದಾರೆ. ದೀಪಕ್ ಸಿ.ಎಸ್ ಸಂಕಲನವಿದೆ.

ಕನ್ನಡಿಗರು ಮಾಡಿರುವ ಕನ್ನಡ ಚಿತ್ರವನ್ನ ನೋಡಿ ಬಾಲಿವುಡ್ ಫಿಲಂ ಟ್ರೇಡಸ್೯ ಖುದ್ದು ಚಿತ್ರವನ್ನ ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಅಲ್ಲದೇ ಕನ್ನಡ ಸಿನಿಮಾವೊಂದಕ್ಕೆ ಇಷ್ಟೊಂದು ಬ್ರ್ಯಾಂಡ್ ಗಳೂ ಬಂದಿರೋದು ಇದೇ ಮೊದಲಾಗಿದ್ದು, ಮಾರ್ಕೆಟಿಂಗ್ ವಿಚಾರದಲ್ಲಿ ಕರಿಕಾಡ ಸಿನಿಮಾ ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ ಎಂದು ತಿಳಿಸಿದೆ.

ಕರಿಕಾಡ ಚಿತ್ರ 6 ಫೆಬ್ರವರಿ ವಿಶ್ವದಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಮಾಡುವ ತಯಾರಿ ನಡೆದಿದೆ
.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin