ಕಲೆಯ ಸಳೆತದಿಂದ ಚಿತ್ರರಂಗಕ್ಕೆ ಎಂಟ್ರಿ- ಬಹುಮುಖ ಪ್ರಬೀಕ್ ಮೊಗವೀರ್ ಮನದಾಳ
ಚಿತ್ರರಂಗದ ಸೆಳೆತವೇ ಹಾಗೆ. ಅದೊಂದು ಮಾಯಲೋಕ, ಒಮ್ಮೆ ಬಣ್ಣದ ಬದುಕಿನ ಯಾವುದಾದರೊಂದು ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೆ ತಾವು ಮಾಡುವ ವಿಭಾಗದಲ್ಲಿ ಸೈ ಎನಿಸಿಕೊಂಡು ಬಿಟ್ಟರೆ ಅಲ್ಲಿಂದ ಅವರ ನಸೀಬೇ ಬದಲಾಯಿತು ಎನ್ನುಷ್ಠರ ಮಟ್ಟಿಗೆ ಗಾಂಧಿನಗರದ ಟಾಕ್.

ಕಲಿಗೌಡ ನಿರ್ದೇಶನದ “ತನಿಖೆ”ಯಿಂದ ಆರಂಭವಾದ ನಟನಾ ಜರ್ನಿ ಕಳೆದವಾರ ಬಿಡುಗಡೆಯಾಗಿ ಜನಮನ್ನಣೆ ಪಡೆದಿರುವ “ನಾಯಿ ಇದೆ ಎಚ್ಚರಿಕೆ” ಚಿತ್ರದ ವರೆಗೆ ತಮ್ಮ ನಟನಾ ಕೌಶಲ್ಯವನ್ನು ಚಿತ್ರದಿಂದ ಚಿತ್ರಕ್ಕೆ ಅನಾವರಣ ಮಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಮತ್ತು ಚಿತ್ರರಂಗದ ಮಂದಿಯಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕುಂದಾಪುರ ಮೂಲದ ಬಹುಮುಖ ಪ್ರತಿಭೆ ಪ್ರಬೀಕ್ ಮೊಗವೀರ್, ಓದಿದ್ದು ಇಂಜಿನಿಯರಿಂಗ್ ಆದರೂ ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ‘ನಾಗವಲ್ಲಿ ವರ್ಸಸ್ ಆಪ್ತಮಿತ್ರರು’, ‘ತನಿಖೆ’, ‘ಶಾಂತಿಯನ್ನು ಕಳೆದುಕೊಳ್ಳಬೇಡಿ’, ‘ಗಡಿಯಾರ’, ‘ಅಸುರನ ಕೈಯಲ್ಲಿ ಪಾರಿಜಾತ’, ‘ರಾವೆನ್’, ‘ನಾಯಿ ಇದೆ ಎಚ್ಚರಿಕೆ’ ಹೀಗೆ ಹಲವು ಚಿತ್ರ ನಿರ್ಮಿಸಿರುವ ಕರಾವಳಿಯ ಪ್ರತಿಭೆ ಪ್ರಬೀಕ್ ಮೊಗವೀರ್ ನಿರ್ಮಾಣದ ಜೊತೆ ನಟನೆ ಹಾಗು ನಿರ್ದೇಶನದಲ್ಲಿಯೂ ಎತ್ತಿದ ಕೈ.
ನಾಯಿ ಇದೆ ಎಚ್ಚರಿಕೆ ..ಚಿತ್ರದ ಬಗ್ಗೆ ಸಿನಿಮಾ ನೋಡಿದ ಮಂದಿಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲಿಯೂ ವಿಭಿನ್ನ ಪಾತ್ರದಲ್ಲಿ ನಟಿಸಿರುವ ಪ್ರಬೀಕ್ ಮೊಗವೀರ್ ನಟನೆಗೆ ಎಲ್ಲರಿಗೂ ಉತ್ತಮ ಮಾತುಗಳು ವ್ಯಕ್ತವಾಗುತ್ತಿವೆ.

ಈ ಕುರಿತು ಮಾಹಿತಿ ಹಂಚಿಕೊಂಡ ಪ್ರಬೀಕ್ ಮೊಗವೀರ್. ಬಾಲ್ಯದಿಂದಲೂ ಕಲೆಯ ಕಡೆಗೆ ಆಸಕ್ತಿ ಇತ್ತು, ಹೀಗಾಗಿಯೇ ಸಕ್ತಿಯಿಂದಲೇ ಚಿತ್ರರಂಗದತ್ತ ಮುಖ ಮಾಡಬೇಕಾಯಿತು. ಕನ್ನಡ ಪ್ರೇಕ್ಷಕರಿಗೆ ನಿರ್ಮಾಪಕನಾಗಿ ಒಳ್ಳೆಯ ಸಿನೆಮಾ ಕೊಡಬೇಕು ಎನ್ನುವುದು ನನ್ನ ಉದ್ದೇಶ ಎಂದು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ
ಸಿನಿಮಾ ಪ್ರಯಾಣದಲ್ಲಿ ನಟನೆ ಅನಿರೀಕ್ಷಿತ ಅವಕಾಶ ಅಭಿನಯ ಪ್ರೇಕ್ಷಕರಿಗೆ ಇಷ್ಟವಾದರೆ, ಅದಕ್ಕಿಂತ ಖುಷಿ ಬೇರೊಂದಿಲ್ಲ”ನಾಯಿ ಇದೆ ಎಚ್ಚರಿಕೆ ಚಿತ್ರದಲ್ಲಿ ಪಾತ್ರ ಮಾಡುವ ಆಲೋಚನೆ ಇರಲಿಲ್ಲ. ನಿರ್ದೇಶಕರು ಪಾತ್ರ ನೀವೇ ಮಾಡಬೇಕು ಎಂದಿದ್ದರಿಂದ ನಾನೇ ಮಾಡಿದೆ, ಈಗ ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ಸಿಗುತ್ತಿದೆ ಇದು ಖುಷಿಯ ವಿಷಯ ಎಂದಿದ್ದಾರೆ.
ಚಿತ್ರದಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದೇನೆ. ನಿರ್ದೇಶಕರ ಒತ್ತಾಯದ ಮೇರೆಗೆ ಸಿನೆಮಾದಲ್ಲಿ ನಿರ್ದೇಶಕನ ಪಾತ್ರ. ನಾನು ಕೂಡ ಸಿನೆಮಾ ನಿರ್ದೇಶಕನಾಗಿದ್ದರಿಂದ, ಪಾತ್ರ ನನಗೂ ಹತ್ತಿರವಾಗಿತ್ತು. ಹಾಗಾಗಿ ಒಪ್ಪಿಕೊಂಡೆ. ಪಾತ್ರ ನೋಡುಗರಿಗೆ ಇಷ್ಟೊಂದು ಇಷ್ಟವಾಗುತ್ತದೆ ಇದು ಖುಷಿಯ ವಿಷಯ ಎಂದು ಸಂತಸ ಹಂಚಿಕೊಂಡಿದ್ದಾರೆ

ಕನ್ನಡದಲ್ಲಿ ಒಳ್ಳೆಯ ಕಥೆಗಳನ್ನು ಹುಡುಕಿ ಸಿನೆಮಾ ಮಾಡಿ ಪ್ರೇಕ್ಷಕರ ಮುಂದಿಡಬೇಕು ಎನ್ನುವುದು ಆಶಯ. ನಟನಾಗಿದ್ದು ಈ ಚಿತ್ರರಂಗದ ಪ್ರಯಾಣದಲ್ಲಿ ಎದುರಾದ ಅನಿರೀಕ್ಷಿತ ಘಟ್ಟ. ಅದನ್ನು ಖುಷಿಯಿಂದ ಸ್ವೀಕರಿಸಿದ್ದೇನೆ. ಹಾಗಂತ, ಕೇವಲ ನಟನೆಗಷ್ಟೇ ಖಂಡಿತವಾಗಿಯೂ ಅಂಟಿಕೊಳ್ಳಲಾರೆ. ನಿರ್ದೇಶಕನಾಗಿ, ಹೊಸ ಕಥೆಯ ಹುಡುಕಾಟ ನಡೆದಿದೆ ಎಂದಿದ್ದಾರೆ
‘ನಾಯಿ ಇದೆ ಎಚ್ಚರಿಕೆ ಚಿತ್ರದಲ್ಲಿ ಪ್ರಬೀಕ್ ಮೊಗವೀರ್ ಜೊತೆಗೆ ಲೀಲಾ ಮೋಹನ್, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ಬಲರಾಜವಾಡಿ, ಅನಿರುದ್ಧ ಮಹೇಶ್, ಜಗ್ಗಪ್ಪ, ದಿವ್ಯ, ಮಾನಸ, ಚಂದನಾ, ನಾಗೇಂದ್ರ ಅರಸ್ ಸೇರಿದಂತೆ ಅನೇಕ ಅನುಭವಿ ಕಲಾವಿದರು ಅಭಿನಯಿಸಿದ್ದಾರೆ.ಕಲಿಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಹಾರರ್ ಕಮ್ ಸಸ್ಪೆನ್ಸ್ – ಥ್ರಿಲ್ಲರ್ ಕಥಾಹಂದರ ಹೊಂದಿದೆ

