ಯಶಸ್ಸಿನ ಹಾದಿಯಲ್ಲಿ “ಕಂಗ್ರಾಜುಲೇಷನ್ ಬ್ರದರ್” : ಚಿತ್ರ ತಂಡದ ಮುಖದಲ್ಲಿ ಮಂದಹಾಸ
ಪ್ರಶಾಂತ್ ಕಲ್ಲೂರ್ ನಿರ್ಮಿಸಿ ಪ್ರತಾಪ್ ಗಂಧರ್ವ ನಿರ್ದೇಶನದಲ್ಲಿ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಕಂಗ್ರಾಜುಲೇಷನ್ ಬ್ರದರ್ ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು ಚಿತ್ರತಂಡ ಸಂತಸ ಹಂಚಿಕೊಂಡಿದೆ

ಯುವ ನಟ ರಕ್ಷಿತ್ ನಾಗ್ ನಾಯಕನಾಗಿ ಹಾಗೂ ಸಂಜನ್ ದಾಸ್, ಅನುಷಾ ನಾಯಕಿಯರಾಗಿ ನಟಿಸಿರುವ ಈ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ
ನಿರ್ಮಾಪಕ ಪ್ರಶಾಂತ್ ಕಲ್ಲೂರ್ ಮಾತನಾಡಿಚಿತ್ರ ನಿರ್ಮಾಣ ಮಾಡಬೇಕೆಂದುಕೊಂಡಿರಲಿಲ್ಲ. ಹರಿ ಸಂತೋಷ್ ನನ್ನ ಬಿಡಲಿಲ್ಲ. ಆನಂತರ ಈ ಹೊಸತಂಡದ ಜೊತೆಗೆ ನಿಂತೆ. ಎರಡನೇ ವಾರದಲ್ಲೂ ಜನ ಚಿತ್ರ ನೋಡುತ್ತಿದ್ದಾರೆ. ಸಿನಿಮಾ ನೋಡಿದ ನನ್ನ ಅಪ್ಪ ಬೆನ್ನು ತಟ್ಟಿದ್ದರು. ನಿಜವಾದ ಗೆಲುವು ಅದು. ಆರಂಭದಿಂದಲೂ ಪೆÇ್ರೀತ್ಸಾಹ ನೀಡುತ್ತಾ ಬಂದಿರುವ ನಿಮ್ಮೆಲ್ಲರಿಗೂ ಧನ್ಯವಾದ. ಇನ್ನೂ ಮುಂದೆ ನಮ್ಮ ಸಂಸ್ಥೆಯಿಂದ ಎರಡು ವರ್ಷಗಳಿಗೆ ಮೂರು ಸಿನಿಮಾ ಮಾಡುವ ಯೋಜನೆ ಇದೆ ಎಂದರು.
ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ಮಾತನಾಡಿ ಕೆಲಸವನ್ನು ಬಹಳ ಇಷ್ಟ ಪಡುವವನು. ನನಗೆ ಸಿಕ್ಕಿರುವ ತಂಡವೂ ಹಾಗೆ ಇದೆ. ಎಲ್ಲರೂ ಸಿನಿಮಾಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಬಿಡುಗಡೆ ಪೂರ್ವದಲ್ಲಿ ರಾಜ್ಯದ 24 ಜಿಲ್ಲೆಗಳಿಗೂ ನಮ್ಮ ಜೊತೆಗೆ ಭೇಟಿ ನೀಡಿದ್ದಾರೆ. ಹಾಗಾಗಿ ಚಿತ್ರ ಕರ್ನಾಟಕದ ಜನರನ್ನು ತಲುಪಿದೆ. ನಿರ್ಮಾಪಕ ಪ್ರಶಾಂತ್ ಕಲ್ಲೂರ್, ನ್ಯೂಸ್ ಫಸ್ಟ್ ರವಿಕುಮಾರ್ ಹಾಗೂ ಹರೀಶ್ ರೆಡ್ಡಿ ಅವರ ಸಹಕಾರ ಅಪಾರ. ನಮ್ಮ ಚಿತ್ರ ನೋಡಿದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಬೇರೆ ಚಿತ್ರಗಳಲ್ಲಿ ಅವಕಾಶ ಸಿಕ್ಕಿದೆ. ಇದಕ್ಕಿಂತ ಖುಷಿ ಬೇರೆ ಏನು ಬೇಕು ಎಂದರು
ನಿರ್ದೇಶಕ ಪ್ರತಾಪ್ ಗಂಧರ್ವ ಮಾತನಾಡಿ ಧಾರಾವಾಹಿ ನಿರ್ದೇಶಕ ಹೇಗೆ ಸಿನಿಮಾ ಮಾಡಿರಬಹುದು ಎಂಬ ಭಾವನೆ ಹಲವರಲ್ಲಿತ್ತು. ಆದರೆ ಸಿನಿಮಾ ನೋಡಿ ಮೇಲೆ ಧಾರಾವಾಹಿಯ ಛಾಯೆ ಇದರಲ್ಲಿ ಇಲ್ಲ ಎಂದು ನೋಡಿದವರು ಹೇಳಿದ್ದಾರೆ. ನನ್ನನ್ನು ನಂಬಿ ಬಂಡವಾಳ ಹಾಕಿದ ನಿರ್ಮಾಪಕರಿಗೆ, ತಾವು ಒಬ್ಬ ನಿರ್ದೇಶಕನಾಗಿದ್ದರೂ, ನನಗೆ ನಿರ್ದೇಶನದಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಿದ ಹರಿ ಸಂತೋಷ್ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದು ಹೇಳಿದರು.

ನಾಯಕ ರಕ್ಷಿತ್ ನಾಗ್ ಮಾತನಾಡಿ ಈ ಚಿತ್ರದಲ್ಲಿ ನಟಿಸಿದ ಮೇಲೆ ನನಗೆ ಎರಡುಮೂರು ಚಿತ್ರಗಳಲ್ಲಿ ನಟಿಸುವ ಅವಾಕಾಶ ಬಂದಿದೆ. ಇದು ಸಾಧ್ಯವಾಗಿದ್ದು ಈ ಚಿತ್ರದ ನಿರ್ಮಾಪಕರು ಹಾಗೂ ಹರಿ ಸಂತೋಷ್ ಅವರಿಂದ ಎಂದು ಹೇಳಿದರು.
ನಾಯಕಿಯರಾದ ಸಂಜನ ದಾಸ್, ಅನೂಷ ಹಾಗೂ ಚಿತ್ರದಲ್ಲಿ ನಟಿಸಿರುವ ಸುದರ್ಶನ್, ಚೇತನ್ ದುರ್ಗ ಸೇರಿದಂತೆ ಚಿತ್ರತಂಡದ ಸದಸ್ಯರು ಯಶಸ್ಸಿನ ಖುಷಿಯನ್ನು ಮಾತುಗಳ ಮೂಲಕ ಹಂಚಿಕೊಂಡರು.

