"Family Drama" Movie Trailer Released: Curiosity Increases

“ಫ್ಯಾಮಿಲಿ ಡ್ರಾಮ” ಚಿತ್ರದ ಟ್ರೈಲರ್ ಬಿಡುಗಡೆ : ಕುತೂಹಲ ಹೆಚ್ಚಳ - CineNewsKannada.com

“ಫ್ಯಾಮಿಲಿ ಡ್ರಾಮ” ಚಿತ್ರದ ಟ್ರೈಲರ್ ಬಿಡುಗಡೆ : ಕುತೂಹಲ ಹೆಚ್ಚಳ

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ‘ಫ್ಯಾಮಿಲಿ ಡ್ರಾಮ’ ಕೂಡ ಒಂದು. ಈಗಲೇ ಟ್ರೈಲರ್ ಮೂಲಕ ಗಮನ ಸೆಳೆದಿರುವ ಫ್ಯಾಮಿಲಿ ಡ್ರಾಮ ಸದ್ಯ ಇಂಟ್ರೆಸ್ಟಿಂಗ್ ಟೈಟಲ್ ಟ್ರ್ಯಾಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಯುವ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ‘ಫ್ಯಾಮಿಲಿ ಡ್ರಾಮಾ’ ಹಾಡು ಕೂಡ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.

ಇತ್ತೀಚಿಗಷ್ಟೇ ರಿಲೀಸ್ ಆಗಿದ್ದ ಟ್ರೈಲರ್ ಸಖತ್ ಕ್ರಿಯೇಟಿವಾಗಿ ಆಗಿದ್ದು ಇದೊಂದು ಮಾಮೂಲಿ ಸಿನಿಮಾವಲ್ಲ, ವಿನೂತನ ಮತ್ತು ವಿಭಿನ್ನವಾದ ಸಿನಿಮಾ ಎನ್ನುವುದನ್ನು ಹೇಳುತ್ತಿದೆ.

ಫ್ಯಾಮಿಲಿ ಡ್ರಾಮಾ, ಆಕರ್ಷ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನಿಮಾ ಈ ಚಿತ್ರದಲ್ಲಿ ಅಭಯ್, ಅನನ್ಯಾ ಅಮರ್, ಸಿಂಧು ಶ್ರೀನಿವಾಸ್ ಮೂರ್ತಿ, ರೇಖಾ, ಪೂರ್ಣಚಂದ್ರ ಮೈಸೂರು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ ಈ ಸಿನಿಮಾಗೆ ಡಬ್ಬುಗುಡಿ ಮುರಳಿಕೃಷ್ಣ ಅವರು ತಮ್ಮ ಆಒಏ ಎಂಟರ್ಟೈನ್ಮೆಂಟ್ ಮೂಲಕ ಬಂಡವಾಳ ಹೂಡಿದ್ದಾರೆ.

ಸದ್ಯ ಬಿಡುಗಡೆ ಆಗಿರುವ ಟೈಟಲ್ ಟ್ರ್ಯಾಕ್ ಈಗ ಎಲ್ಲರ ಗಮನ ಸೆಳೆಯುತ್ತದೆ. ಗಾಯಕ ವಾಸುಕಿ ವೈಭವ್ ಧ್ವನಿಯಲ್ಲಿ ಮೂಡಿ ಬಂದಿರುವ ‘ ಲಿ ಲಿ ಫ್ಯಾಮಿ ಹಾಡು…’ ಹಾಡು ಕೇಳೋಕೆ ಎಷ್ಟು ಮಜವಾಗಿದೆಯೋ ನೋಡೊಕು ಅಷ್ಟೇ ಕುತೂಹಲಕಾರಿಯಾಗಿದೆ.

ಅಂದಹಾಗೆ ಈ ಹಾಡಿಗೆ ಚೇತನ್ ಅಮ್ಮಯ್ಯ ಸಂಗೀತ ಸಂಯೋಜನೆ ಮಾಡಿದ್ದು ಶರತ್ ವಶಿಷ್ಠ ಹಾಗೂ ಚೇತನ್ ಅಮ್ಮಯ್ಯ ಜಂಟಿಯಾಗಿ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನಲ್ಲಿ ಪಾರ್ಟಿ ನಡೆಯುತ್ತಿದ್ದು ನಟ ಅಭಯ್, ಸಿಂಧು, ಅನಯ್ಯಾ ಎಂಡ್ ಗ್ಯಾಂಗ್ ಯಾರನ್ನೊ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ. ಆದರೆ ಹಾಡಿನ ಕೊನೆಯಲ್ಲಿ ಅವರ ಸ್ಕೆಚ್ ಫ್ಲಾಪ್ ಆಗಿರುವ ಹಾಗೆ ಅನ್ನಿಸುತಗತದೆ. ಆದರೆ ಮುಂದೇನಾಗುತ್ತೆ ಎನ್ನುವುದು ಸಿನಿಮಾದಲ್ಲಿಯೇ ನೋಡಬೇಕು. ಈ ಹಾಡು ಸಿನಿಮಾದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿದೆ.

ನಿರ್ಮಾಪಕ ಮುರಳಿಕೃಷ್ಣ ಅವರು ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂದಹಾಗೆ ಮುರಳಿಕೃಷ್ಣ ಅವರು ಅಮೇರಿಕಾದಲ್ಲಿನೆಲೆಸಿದ್ದಾರೆ. ವಿದೇಶದಲ್ಲಿದ್ದರೂ ತಮ್ಮ ನೆಲದ ಮೇಲಿನ ಪ್ರೀತಿ, ಸಿನಿಮಾಗಳ ಮೇಲಿನ ಆಸಕ್ತಿ ಕಳೆದುಕೊಂಡಿಲ್ಲ. ಉತ್ತಮ ಸಿನಿಮಾ ಮಾಡಬೇಕು ಎನ್ನುವ ದೊಡ್ಡ ಕನಸು ಹೊತ್ತಿರುವ ಮುರುಳಿಕೃಷ್ಣ ಅವರು ಚಿತ್ರರಂಗದ ಬಗ್ಗೆ ಒಂದಷ್ಟು ತಿಳಿದುಕೊಂಡು ‘ಫ್ಯಾಮಿಲಿ ಡ್ರಾಮ’ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಕನ್ನಡದ ‘ಫ್ಯಾಮಿಲಿ ಡ್ರಾಮ’ ಸಿನಿಮಾ ಬಿಡುಗಡೆ ಬ್ಯುಸಿಯ ಜೊತೆಗೆ ನಿರ್ಮಾಪಕರು ಈಗಾಗಲೇ ತೆಲುಗಿನಲ್ಲಿ ಮೂರು ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಡಿಎಂಕೆ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಹಾಗೂ ದೊಡ್ಡ ಬಜೆಟ್‍ನ ಸ್ಟಾರ್ ಸಿನಿಮಾ ನಿರ್ಮಾಣ ಮಾಡುವ ದೊಡ್ಡ ಕನಸನ್ನು ಕಂಡಿದ್ದಾರೆ. ಅವರ ಮುಂದಿನ ಎಲ್ಲಾ ಯೋಜನೆಗಳಿಗೆ ‘ಫ್ಯಾಮಿಲಿ ಡ್ರಾಮ’ ಉತ್ತಮ ವೇದಿಕೆ ಯಾಗಲಿದೆ ಎನ್ನುವ ಭರವಸೆ ಹೊಂದಿದ್ದಾರೆ.

ಫ್ಯಾಮಿಲಿ ಡ್ರಾಮ ಉತ್ತಮ ಕಂಟೆಂಟ್ ಜೊತೆಗೆ ಟೆಕ್ನಿಕಲ್ ವಿಚಾಗಳು ಸಹ ಗಮನ ಸೆಳೆಯುತ್ತಿದೆ. ಡಾರ್ಕ್ ಕಾಮಿಡಿ ಸಿನಿಮಾ ಇದಾಗಿದ್ದು ಮುಗ್ದ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಥೆಯಾಗಿದೆ. ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಫ್ಯಾಮಿಲಿ ಡ್ರಾಮ ಸದ್ಯದಲ್ಲೇ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin