Father-son bond film "I Am Compassionate" to release across the state on April 3

ಅಪ್ಪ-ಮಗನ ಬಾಂಧವ್ಯದ “ನಾನು ಕರುಣಾಕರ” ಚಿತ್ರ ಏಪ್ರಿಲ್ 3ರಂದು ರಾಜ್ಯಾದ್ಯಂತ ಬಿಡುಗಡೆ - CineNewsKannada.com

ಅಪ್ಪ-ಮಗನ ಬಾಂಧವ್ಯದ “ನಾನು ಕರುಣಾಕರ” ಚಿತ್ರ ಏಪ್ರಿಲ್ 3ರಂದು ರಾಜ್ಯಾದ್ಯಂತ ಬಿಡುಗಡೆ

ತಂದೆ ಮಗನ ನಡುವಿನ ಬಾಂಧವ್ಯದ ಕಥೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ಕಮ್ ನಟ ಆರ್ಯನ್ ತೇಜಸ್ ‘ನಾನು ಕರುಣಾಕರ’ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಸಿದ್ದತೆ ಮಾಡಿಕೊಂಡಿದ್ಧಾರೆ. ಎಲ್ಲಾ ಅಂದುಕೊಂಡಂತೆ ಆದರೆ ಏಪ್ರಿಲ್ ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಯೋಜಿಸಲಾಗಿತ್ತು. ‘ನಾನು ಕರುಣಾಕರ’ ಚಿತ್ರದಲ್ಲಿ ಆರ್ಯನ್ ತೇಜಸ್ ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ

‘ಪಾರ್ಕ್ ರೋಡ್ 100 ರೂಪಾಯಿ’ ಚಿತ್ರದ ಬಳಿಕ ಆರ್ಯನ್ ತೇಜಸ್ ಎರಡನೇ ಚಿತ್ರ ನಾನು ಕರುಣಾಕರ ಚಿತ್ರವನ್ನು ಜನರ ಮುಂದಿಡಲು ನಿರ್ಧರಿಸಿದ್ಧಾರೆ, ಚಿತ್ರಕ್ಕೆ ಸ್ನೇಹಿತ ವೈಭವ್ ಸುರೇಶ್ ಬಂಡವಾಳ ಹೂಡಿದ್ದು ಸಂತೋಷ್ ಮತ್ತು ಶ್ರೀಕಾಂತ್ ಕೈಜೋಡಿಸಿದ್ದಾರೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ, ನಾಯಕ ನಟ ಆರ್ಯನ್ ತೇಜಸ್, ನಾನು ಕರುಣಾಕರ ಚಿತ್ರ ಪ್ರತಿಯೊಬ್ಬರ ಜೀವನಕ್ಕೆ ಸಂಪರ್ಕಿಸುವ ಚಿತ್ರ. ಅಪ್ಪ ಮಗನ ಬಾಂಧವ್ಯ ಹಾಗೂ ಗಂಡ ಹೆಂಡತಿ ಸಂಬಂಧದ ಸುತ್ತ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದೆ, ಏಪ್ರಿಲ್ 3 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ ಎಂದರು

ಭಾರ್ಗವಿ ಎಲ್ ಎಲ್ ಬಿ ಖ್ಯಾತಿಯ ನಟಿ ರಾಧಾ ಭಗವತಿ ಹಾಗೂ ಮಗನ ಪಾತ್ರದಲ್ಲಿ ಮಾ. ಭವೀಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕರಿಸುಬ್ಬು, ಎಂಕೆ ಮಠ, ಬಿ.ಎಂ. ವೆಂಕಟೇಶ, ಅಪೂರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ, ಚಿತ್ರವನ್ನು ಮೈಸೂರು, ಮೇಲುಕೋಟೆ, ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ, ಸಹಾಯಕ ನಿರ್ದೇಶಕ ಕುಟುಂಬವನ್ನು ಮುನ್ನೆಡೆಸಲು ಯಾವೆಲ್ಲಾ ರೀತಿಯಲ್ಲಿ ಕಷ್ಟಪಡುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು

ನಾಯಕಿ ರಾಧಾ ಭಗವತಿ ಮಾತನಾಡಿ. 5ನೇ ಚಿತ್ರ, ಮಿಡಲ್ ಕ್ಲಾಸ್ ಫ್ಯಾಮಿಲಿಯ ಗೃಹಿಣಿಯಾಗಿ ಕಾಣಿಸಿಕೊಂಡಿದ್ದೇನೆ,ಚಿತ್ರದಲ್ಲಿ ಅಭಿನಯಿಸುವಾಗ ಬಾಲ್ಯದ ದಿನಗಳ ನೆನಪಾಯ್ತು. ಚಿತ್ರದಲ್ಲಿ ದೊಡ್ಡದಾಗಿ ಏನಾದರೂ ಮಾಡಬೇಕೆಂಬ ಆಸೆಯಿರುತ್ತೆ, ಆದರೆ ಗಂಡ, ಮಗನಿಗೋಸ್ಕರ ಕನಸನ್ನು ಬದಿಗೊತ್ತಿ ಬೆಂಬಲವಾಗಿ ನಿಲ್ಲುವ ಪಾತ್ರ ಎಂದು ಮಾಹಿತಿ ನೀಡಿದರು

ನಿರ್ಮಾಪಕ ವೈಭವ್ ಸುರೇಶ್ ಮಾತನಾಡಿ ಒಂದೊಳ್ಳೇ ಸಿನಿಮಾ ಮಾಡಬೇಕೆಂದು ತುಂಬಾ ವರ್ಷಗಳಿಂದ ಕನಸಿತ್ತು, ಅದು ಈ ಸಿನಿಮಾ ಮೂಲಕ ನನಸಾಗಿದೆ. ನಮನ್ ನಾರಾಯಣ ಸೇರಿ ಚಿತ್ರ ನಿರ್ಮಾಣ ಮಾಡಿದ್ದೇವೆ, ಚಿಕ್ಕ ಮಕ್ಕಳು ತಂದೆಗೆ ಹೇಗೆ ಕಷ್ಟ ಕೊಡುತ್ತಾರೆ, ಅದಕ್ಕಾಗಿ ತಂದೆ ಏನು ಮಾಡುತ್ತಾನೆ ಎಂಬುದೇ ಈ ಚಿತ್ರದ ಕಥೆ ಎಂದರು,

ಮತ್ತೊಬ್ಬ ನಿರ್ಮಾಪಕ ನಮನ್ ನಾರಾಯಣ ಮಾತನಾಡಿ ನಿರ್ದೇಶಕರು ಸ್ನೇಹಿತರು. ಕಥೆ ಹೇಳಿದಾಗ ತಂದೆ ನೆನಪಾಯಿತು, ಈ ಥರದ ಎಷ್ಟೋ ತಂದೆಯರು ಇದ್ದಾರೆ, ಅವರಿಗೆಲ್ಲ ಸಿನಿಮಾ ಅರ್ಪಣೆ,ಭಾವನಾ ಬೆಳಗೆರೆ ಕಾಲ್‍ಮಾಡಿ ಕರೆಸಿಕೊಂಡು ಚಿತ್ರದ ಮೆಚ್ಚುಗೆ ವ್ಯಕ್ತಪಡಿಸಿದ್ದರು .ಟ್ರೈಲರ್ ಗೆ ಶ್ರೀನಗರ ಕಿಟ್ಟಿ ಧ್ವನಿ ನೀಡಿದ್ದಾರೆ ಎಂದರು.

ಸ್ನೇಹಿತನ ಪಾತ್ರ ಮಾಡಿರುವ ಲೋಕೇಶ್, ಪೇಂಟರ್ ಪಾತ್ರ ನಿರ್ವಹಿಸಿರುವ ಕರಿಸುಬ್ಬು ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin