Actor Pratham's first night with the devil: A dream come true..

ದೆವ್ವದ ಜೊತೆ ನಟ ಪ್ರಥಮ್ ಫಸ್ಟ್ ನೈಟ್: ಕನಸು ಈಡೇರುತ್ತಾ.. - CineNewsKannada.com

ದೆವ್ವದ ಜೊತೆ ನಟ ಪ್ರಥಮ್ ಫಸ್ಟ್ ನೈಟ್: ಕನಸು ಈಡೇರುತ್ತಾ..

ಬಿಗ್ ಬಾಸ್ ವಿಜೇತರಾದ ಬಳಿಕ ನಟ ಪ್ರಥಮ್, ಒಂದಿಲ್ಲೊಂದು ಸಿನಿಮಾ ಪ್ರಕಟಿಸಿ ಮುಂದೂದುವುದು ಅದಕ್ಕೆ ಅವರದೇ ಸಮಜಾಯಿಷಿ ನೀಡುವುದು ಮಾಮೂಲಿ, ಇದೀಗ ನಟ ಪ್ರಥಮ್ ನಟಿಸಿರುವ “ಫಸ್ಟ್ ನೈಟ್ ವಿಥ್ ದೆವ್ವ” ಚಿತ್ರ ಏಪ್ರಿಲ್ 3 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಗಿದೆ, ಈ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಿನಿಮಾ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ

ಚಿತ್ರದಲ್ಲಿ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ನಟಿಸಿದ್ದು ಅವರೇ ಟ್ರೈಲರ್ ಬಿಡುಗಡೆ ಮಾಡಿದ್ದು ವಿಶೇಷ. ಇನ್ನೂ ಚಿತ್ರರಂಗದಲ್ಲಿ 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಫಸ್ಟ್ ನೈಟ್ ದೆವ್ವ ಚಿತ್ರ ತಂಡ ಸನ್ಮಾನಿಸಿತು.ಚಿತ್ರಕ್ಕೆ ಪಿ.ವಿ.ಆರ್.ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನ ಮಾಡಿದ್ದಾರೆ. ಕಥೆ ಮತ್ತು ಚಿತ್ರಕಥೆ ನಟ ಪ್ರಥಮ್ ಅವರದ್ದು.

ಹಿರಿಯನಟ ಶ್ರೀನಿವಾಸಮೂರ್ತಿ ಮಾತನಾಡಿ ಅಣ್ಣಾವ್ರ ಕಾಲದ ನಟರ ಜತೆಗೂ ನಟಿಸಿದ್ದೇನೆ ಈಗಿನ ಕಾಲದ ನಟರ ಜತೆಗೂ ನಟಿಸಿದ್ದೇನೆ ನನಗೆ ಅಂಥಾ ಬದಲಾವಣೆ ಏನೂ ಕಾಣಿಸುತ್ತಿಲ್ಲ ಎಂದು ಹೇಳಿದರು

ನಾಯಕ ಪ್ರಥಮ್ ಮಾತನಾಡಿ ಚಿತ್ರದ ಡಬ್ಬಿಂಗ್, ಸ್ಯಾಟಲೈಟ್ ರೈಟ್ಸ್ ಒಳ್ಳೇ ಮೊತ್ತಕ್ಕೆ ಸೇಲಾಗಿದೆ, ಮನರಂಜನೆಯನ್ನೇ ಪ್ರಧಾವಾಗಿಟ್ಟುಕೊಂಡು ಮಾಡಿರುವ ಹಾರರ್ ಕಾಮಿಡಿ ಚಿತ್ರ, ನಾಯಕನಿಗೆ ಮದುವೆಯಾಗುತ್ತದೆ, ಆತನಿಗೆ ತನ್ನ ಹೆಂಡತಿ ದೆವ್ವ ಎಂಬುದು ಮದುವೆಯಾದ ಕೂಡಲೇ ಗೊತ್ತಾಗುತ್ತೆ, ನಂತರ ಆತನ ಫಸ್ಟ್ ನೈಟ್ ಆಗುತ್ತಾ ಇಲ್ವಾ ಎನ್ನುವುದೇ ನಮ್ಮ ಚಿತ್ರದ ಕಥಾಹಂದರ ಚಿತ್ರ ಏಪ್ರಿಲ್ 3 ಕ್ಕೆ ಬಿಡುಗಡೆಯಾಗುತ್ತಿದೆ ಸಿನಿಮಾ ನೋಡಿ ಸಹಕರಿಸಿ ಎಂದರು

ನಿರ್ದೇಶಕ ಪಿ.ವಿ.ಆರ್. ಸ್ವಾಮಿ ಮಾತನಾಡಿ ಮೊದಲ ಚಿತ್ರ ರಾಜತಂತ್ರ ರಿಲೀಸ್ ಮಾಡಿದಾಗ ಚೆನ್ನಾಗಿ ಹೋಗಿತ್ತು. ಪ್ರಥಮ್ ಒಳ್ಳೇ ಮಾತುಗಾರ ಎನ್ನುವುದು ಎಲ್ಲರಿಗೂ ಗೊತ್ತು. ಚಿತ್ರದಲ್ಲಿ ಅವರ ಪಾತ್ರಕ್ಕೆ ಮಾತು ತುಂಬಾ ಕಮ್ಮಿ. ಎಲ್ಲರ ಸಹಕಾರದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಛಾಯಾಗ್ರಾಹಕನಾಗಿ ಬಹಳ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ ಚಿತ್ರಕ್ಕೂ ನಾನೇ ಛಾಯಾಗ್ರಹಣದ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ಇದು 53ನೇ ಸಿನಿಮಾ ಎಂದು ಹೇಳಿದರು

ಫಸ್ಟ್ ನೈಟ್ ವಿತ್ ದೆವ್ವ ನನ್ನ ನಿರ್ದೇಶನದ ಐದನೇ ಚಿತ್ರ. ಮಿಮಿಕ್ರಿ ಗೋಪಿ, ತುಕಾಲಿ ಸಂತು, ಸುಶ್ಮಿತಾ ಇವರೆಲ್ಲರ ಪಾತ್ರಗಳು ಪ್ರಭಾವ ಬೀರುತ್ತವೆ, ಒಟ್ಟು 30 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ, ಇಡೀ ಚಿತ್ರತಂಡದ ಸಹಕಾರದಿಂದ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು

ನಾಯಕಿ ನಿಖಿತಾಸ್ವಾಮಿ ಮಾತನಾಡಿ ಕಾಮಿಡಿ ಹಾರರ್ ಚಿತ್ರ, ಪ್ರಥಮ್ ಪತ್ನಿಯಾಗಿ ನಾನು ನಟಿಸಿದ್ದೇನೆ ಮುಗ್ದ ಹುಡುಗಿ, ಅಂಥವಳ ಪಾತ್ರ ಹೇಗೆ ಚೇಂಜ್ ಆಗುತ್ತಾ ಹೋಗುತ್ತೆ ಎನ್ನುವುದೇ ವಿಶೇಷ ಎಂದರು

ಮಿಮಿಕ್ರಿ ಗೋಪಿ ಮಾತನಾಡಿ ಪ್ರಥಮ್ ಹಾಗೂ ಸ್ವಾಮಿ ಇಬ್ಬರೂ ಸೇರಿ ನನ್ನನ್ನು ಚೆನಾಗಿ ರುಬ್ಬಿದ್ದಾರೆ, ಬೆಳಗಿನ ಜಾವದವರೆಗೂ ಕೆಲಸ ಮಾಡಿಸಿದ್ದಾರೆ, ಮಿಮಿಕ್ರಿ ಕೂಡ ಮಾಡಿಸಿದ್ದಾರೆ ಎಂದು ಹೇಳಿದರು,

ಅದ್ವಿಕ್ ವರ್ಮ ಸಂಗೀತ ನಿರ್ದೇಶನವಿದೆ, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಹರೀಶ್‍ರಾಜ್ ವಿಲನ್ ಪಾತ್ರವಾದರೂ ಸ್ಪೆಷಲ್ ಆಗಿದೆ, ಸುಶ್ಮಿತಾ, ಶ್ರೀನಿವಾಸಮೂರ್ತಿ, ರಮೇಶ್ ಭಟï, ತುಕಾಲಿ ಸಂತೋಷ್ ಇವರೆಲ್ಲ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ನವೀನ್, ಪುನೀತ್ ಕಾರ್ಯನಿರ್ವಹಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin