ಮಾರುಕಟ್ಟೆಯಲ್ಲಿ ಅವ್ಯವಹಾರದ ಕುರಿತ “ಚೀತಾ” ಸಿನಿಮಾ ಚಿತ್ರೀಕರಣ ಪೂರ್ಣ
“ಚೀತಾ”, ಮಾರ್ಕೆಟ್ ನಲ್ಲೇ ನಡೆಯುವ ಕಥೆ. ಮಾರುಕಟ್ಟೆಯಲ್ಲೇ ಹುಟ್ಟಿಬೆಳೆದ ಹುಡುಗನೊಬ್ಬನ ಕಥೆ ಕೂಡ. ಆ ಹುಡುಗನ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ. ಮಾರುಕಟ್ಟೆಯಲ್ಲಿ ನಡೆಯುವ ಅವ್ಯವಹಾರಗಳ ವಿರುದ್ದ ಹೋರಾಟ ಮಾಡುವ ಹೋರಾಟಗಾರನ ಪಾತ್ರ ಅವರದು ಹೀಗಂತ ಹೇಳಿದರು ನಿರ್ದೇಶಕ ಕಲೈ ಕುಮಾರ್.

ನಟ ಪ್ರಜ್ವಲ್ ದೇವರಾಜ್ ಮತ್ತು ನಟಿ ಮೇಘಾ ಶೆಟ್ಟಿ ನಟನೆಯ “ಚೀತಾ” ಚಿತ್ರದ ಯುಗಳ ಗೀತೆಯ ಚಿತ್ರಿಕರಣಹೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ, ಚಿತ್ರೀಕರಣ ಸ್ಥಳಕ್ಕೆ ಪತ್ರಕರ್ತರನ್ನು ಆಹ್ವಾನಿಸಿದ್ದ ಚಿತ್ರದ ಬಗ್ಗೆ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದು ಹೀಗೆ..
ಚಿತ್ರರಂಗಕ್ಕೆ ಬಂದು 25 ವರ್ಷಗಳಾಯಿತು. ನೃತ್ಯ ಕಲಾವಿದನಾಗಿ, ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ ನಿರ್ದೇಶನದ ಮೊದಲ ಚಿತ್ರ. ಚಿತ್ರದಲ್ಲಿ ಪ್ರೀತಿ , ಸೆಂಟಿಮೆಂಟ್ ಹೀಗೆ ಜನರಿಗೆ ಬೇಕಾಗುವ ಎಲ್ಲಾ ರೀತಿಯ ಅಂಶಗಳು ಇದೆ. ಮಾರ್ಕೇಟ್ ನಲ್ಲೇ ನಡೆಯುವ ಕಥೆಯಾಗಿರುವುದರಿಂದ ಕಲಾ ನಿರ್ದೇಶಕ ಶಿವಕುಮಾರ್ ನೇತೃತ್ವದಲ್ಲಿ ಹೆಚ್ ಎಂ ಟಿ ಆವರಣದಲ್ಲಿ ಬೃಹತ್ ಸೆಟ್ ಹಾಕಿ ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ ಎಂದರು
ರಾಮನಗರ, ಕೋಲಾರದಲ್ಲೂ ಚಿತ್ರೀಕರಣವಾಗಿದೆ. ಚಿತ್ರದಲ್ಲಿ ಐದು ಹಾಡುಗಳು ಹಾಗೂ ಆರು ಸಾಹಸ ಸನ್ನಿವೇಶಗಳಿದೆ. ಸುಮಾರು 150 ರಿಂದ 200 ಜನ ಸಹ ಕಲಾವಿದರು ಪ್ರತಿದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಪ್ರಜ್ವಲ್ ದೇವರಾಜ್, ಮೇಘ ಶೆಟ್ಟಿ, ರಂಗಾಯಣ ರಘು, ಶೃತಿ ಹರಿಹರನ್, ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್‍ಗುರು ಜಗ್ಗೇಶ್, ಶಿವರಾಜ ಕೆ.ಆರ್ ಪೇಟೆ, ಸುನೀಲ್ ಶ್ರೀಧರ್, ಬಲ ರಾಜ್ ವಾಡಿ, ಟೆನ್ನಿಸ್ ಕೃಷ್ಣ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು
ನಟ ಪ್ರಜ್ವಲ್ ದೇವರಾಜ್ ಮಾತನಾಡಿ ಮಾರ್ಕೆಟ್ ನಲ್ಲೇ ಬೆಳೆಯುವ ಅನಾಥ ಹುಡುಗನ ಪಾತ್ರ. ಪ್ರತಿಯೊಬ್ಬರು ಜಾತಿಮತ ಭೇದವಿಲ್ಲದೆ ಪ್ರೀತಿಸುತ್ತಿರುತ್ತಾರೆ. ನನಗೂ ಅವರನ್ನು ಕಂಡರೆ ಅಷ್ಟೇ ಪ್ರೀತಿ. ಅಲ್ಲಿ ನಡೆಯುವ ಕೆಮಿಕಲ್ ಮಾಫಿಯಾ ಸೇರಿದಂತೆ ಅನೇಕ ಅವ್ಯವಹಾರಗಳ ವಿರುದ್ಧ ಹೋರಾಡುತ್ತೇನೆ. ಮಾರ್ಕೆಟ್ ನಲ್ಲಿ “ಚೀತಾ” ಅಬ್ಬರ ಜೋರಾಗಿರುತ್ತದೆ. ಮುಂದೆ ಟೀಸರ್ ಹಾಗೂ ಟ್ರೇಲರ್ ನಲ್ಲಿ ಅದರ ಪರಿಚಯವಾಗುತ್ತದೆ ಎಂದರು.

ನಾಯಕಿ ಮೇಘ ಶೆಟ್ಟಿ ಮಾತನಾಡಿ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದೇನೆ ಎಲ್ಲರಿಗೂ ಇಷ್ಟವಾಗಲಿದೆ ಎಂದು ಮಾಹಿತಿ ನೀಡಿದರು.
ನಿರ್ಮಾಪಕಿ ಪ್ರತಿಭಾ ಮಾತನಾಡಿ ಪ್ರಜ್ವಲ್ ದೇವರಾಜ್ ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ತಂತ್ರಜ್ಞರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಂದರು ಛಾಯಾಗ್ರಾಹಕ ಗುರುಪ್ರಸಾದ್ ನಾರ್ನಾಡ್ ಪತ್ರಿಕಾಗೋಷ್ಠಿಯಲ್ಲಿದ್ದರು.

