The film "Director's Cut", a movie within a movie, opens

ಸಿನಿಮಾದೊಳಗೊಂದು ಸಿನಿಮಾ “ಡೈರೆಕ್ಟರ್ಸ್ ಕಟ್” ಚಿತ್ರ ಆರಂಭ - CineNewsKannada.com

ಸಿನಿಮಾದೊಳಗೊಂದು ಸಿನಿಮಾ “ಡೈರೆಕ್ಟರ್ಸ್ ಕಟ್” ಚಿತ್ರ ಆರಂಭ

ಹೇಮಲತಾ ಬಿ.ಎಸ್ ನಿರ್ಮಿಸುತ್ತಿರುವ, ಭರತ್ ವಿ.ಜೆ ನಿರ್ದೇಶನದಲ್ಲಿ “ಮದುವೆಯ ಮಮತೆಯ ಕರೆಯೋಲೆ” ಚಿತ್ರದ ಖ್ಯಾತಿಯ ಸೂರಜ್ ಗೌಡ ನಾಯಕನಾಗಿ ನಟಿಸುತ್ತಿರುವ “ಡೈರೆಕ್ಟರ್ಸ್ ಕಟ್” ಚಿತ್ರದ ಮುಹೂರ್ತ ನಡೆಯಿತು.

ನಿರ್ದೇಶಕ ಭರತ್ ವಿ ಜೆ ಮಾತನಾಡಿ ಸಿನಿಮಾದ ನಾಯಕನಾಗಿ ಸೂರಜ್ ಗೌಡ ನಾಯಕಿಯರಾಗಿ ರಾಧಾ ಎಸ್ ಭಾಗಿ ಮತ್ತು ದಿವ್ಯ ಜೈನ್ ಅಭಿನಯಿಸುತ್ತಿದ್ದಾರೆ. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ದೇವಭೂಮಿ ಎನಿಸಿರುವ ಉತ್ತರಾಖಂಡದಲ್ಲೇ ನಡೆಯುತ್ತದೆ. ಇಸಿನಿಮಾದೊಳಗಿನ ಸಿನಿಮಾ ಇರುವ ಕಥೆ. ಕನ್ನಡದ ನಿರ್ದೇಶಕನೊಬ್ಬ ಸಿನಿಮಾಗಾಗಿ ಉತ್ತರಾಖಂಡಕ್ಕೆ ಹೋದಾಗ ಅಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ ಕಥಾ ಸಾರಾಂಶ ಎಂದರು

ಪಿ.ಡಿ.ಸತೀಶ್, ಸ್ವಾತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಪ್ರಮೋದ್ ಗೌಡ ಛಾಯಾಗ್ರಹಣ ಹಾಗೂ ಕಲ್ಯಾಣ್ ಮಂಜುನಾಥ್ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಪ್ರಮೋದ್ ಜೋಯಿಸ್ ಬರಹಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ತಿಂಗಳ 25ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ನಾಯಕ ಸೂರಜ್ ಗೌಡ ಮಾತನಾಡಿ ನಿರ್ದೇಶಕರು ಹೇಳಿದ ಹಾಗೆ ಇದೊಂದು ಸಿನಿಮಾದೊಳಗೆ ಸಿನಿಮಾ ನಡೆಯುವ ಕಥೆ. ನನ್ನದು ನಿರ್ದೇಶಕನ ಪಾತ್ರ. ಕನ್ನಡದ ನಿರ್ದೇಶಕನೊಬ್ಬ ಉತ್ತರಾಖಂಡ ಕ್ಕೆ ತನ್ನ ಸಿನಿಮಾ ಚಿತ್ರೀಕರಣಕ್ಕಾಗಿ ಹೋದಾಗ ಅಲ್ಲಿ ಏನೆಲ್ಲಾ ಆಗುತ್ತದೆ ಎನ್ನುವ ಕಥಾಹಂದರ ಈ ಚಿತ್ರದಲ್ಲಿದೆ. ಎಂದು ಹೇಳಿದರು.

ನಾಯಕಿಯರಾದ ರಾಧಾ ಎಸ್ ಭಾಗಿ ಹಾಗೂ ದಿವ್ಯ ಜೈನ್ ಮುಂತಾದ ಚಿತ್ರತಂಡದ ಸದಸ್ಯರು “ಡೈರೆಕ್ಟರ್ಸ್ ಕಟ್” ಚಿತ್ರದ ಬಗ್ಗೆ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin