ಗಣರಾಜ್ಯೋತ್ಸವಕ್ಕೆ ಕ್ರಾಂತಿ
ದಚ್ಚು ರಚ್ಚು ಜೋಡಿ ಮೋಡಿ
“ಮೈಸೂರಿನಲ್ಲಿ ಧರಣಿ, ಹೊಸಪೇಟೆಯಲ್ಲಿ ಬೊಂಬೆ ಬೊಂಬೆ.” ಇದೀಗ ಹುಬ್ಬಳ್ಳಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಇಡೀ ತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.
ಹೊದ ಕಡೆಯಲ್ಲಾ ಅದ್ದೂರಿ ಸ್ವಾಗತ ಸಿಕ್ಕಿದ್ದು ಜನವರಿ 26ಕ್ಕೆ ಕ್ರಾಂತಿ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಮೋಡಿ ಮಾಡಲು ಮುಂದಾಗಿದೆ. ಇದಕ್ಕಾಗಿ ಅಭಿಮಾನಿಗಳು ಕಾತುರದಿಂದ ಆ ಘಳಿಗೆ ಯಾವಾಗ ಬರುತ್ತದೆಯೋ ಎಂದು ಎದುರು ನೋಡುವಂತಾಗಿದೆ.
ಸರ್ಕಾರಿ ಶಾಲೆ ಮತ್ತು ಅಕ್ಷರ ಕ್ರಾಂತಿಯ ಸುತ್ತ ಸಾಗುವ ಚಿತ್ರಕ್ಕೆ ಶೈಲಜಾ ನಾಗ್ ಮತ್ತು ಬಿ.ಸುರೇಶ ದಂಪತಿ ಬಂಡವಾಳ ಹೂಡಿದ್ದು ಸಂಗೀತ ನಿರ್ದೇಶಕ ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ.
ಕ್ರಾಂತಿ ಬಿಡುಗಡೆಗೆ ಮುನ್ನ ಒಂದೊಂದೇ ಹಾಡುಗಳನ್ನು ರಾಜ್ಯದ ಒಂದೊಂದು ಕಡೆ ಬಿಡುಗಡೆ ಮಾಡುತ್ತಿದ್ದು ದರ್ಶನ್ ಕಾಲಿಟ್ಟ ಕಡೆಯಲೆಲ್ಲಾ ಸಾಗರೋಪಾದಿಯಲ್ಲಿ ಜನ ಸೇರುತ್ತಿದ್ದಾರೆ. ಅಕ್ಷರ ಕ್ರಾಂತಿ ,ಅಕ್ಷರಷಃ ಆಗೋದು ಖಚಿತ ಎನ್ನುವುದನ್ನು ದಾಸನ ಪ್ರೀತಿಯ ಸೆಲೆಬ್ರಿಟಿಗಳು ನಿರೂಪಿಸುತ್ತಿದ್ದಾರೆ.
ಧರಣಿ ಹಾಡಿನಲ್ಲಿ ಕನ್ನಡ ನಾಡಿನ ಬಗ್ಗೆ ಗುಣಗಾನ ಮಾಡಲಾಗಿತ್ತು ಆ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‍ನಲ್ಲಿತ್ತು. ಇದೀಗ ಬೊಂಬೆ ಬೊಂದೆ ಹಾಡು ಕೂಡ ಟ್ರಂಡಿಂಗ್‍ನಲ್ಲಿದ್ದು ಅಭಿಮಾನಿಗಳ ಮನಸೂರೆಗೊಂಡಿದೆ.
ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದಿದ್ದು ಈ ಸಂಖ್ಯೆಹೆಚ್ಚುತ್ತಲೇ ಇದೆ. ಇದು ಸಹಜವಾಗಿ ನಿರ್ಮಾಪಕರಾದ ಶೈಲಜಾ ನಾಗ್, ಬಿ.ಬಿ.ಸುರೇಶ ಅವರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ಕಾಣಿಸಿಕೊಂಡಿರುವ ಬೊಂಬೆ ಬೊಂಬೆ ಹಾಡು ಅಭಿಮಾನಿಗಳ ಮನಸೂರೆಗೊಂಡಿದೆ. ಹೊಸಪೇಟೆಯಲ್ಲಿ ನಡೆದ ಹಾಡಿನ ಬಿಡುಗಡೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ರಚಿತಾ ರಾಮ್, ನಿರ್ಮಾಪಕರಾದ ಶೈಲಜಾ ನಾಗ್, ಬಿ.ಸುರೇಶ, ನಿರ್ದೇಶಕ ವಿ.ಹರಿಕೃಷ್ಣ, ಸಾಧುಕೋಕಿಲ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.
ದಾಖಲೆಗೆ ಸಿದ್ದತೆ
ನಿರ್ದೇಶಕ ಯೋಗರಾಜ ಭಟ್ ಬರೆದಿರುವ ಬೊಂಬೆ ಬೊಂಬೆ ಹಾಡಿಗೆ ಬಾಲಿವುಡ್ ಗಾಯಕ ಸೋನು ನಿಗಮ್ ಧ್ವನಿಯಾಗಿದ್ದಾರೆ. ಇವರಿಬ್ಬರು ಕಾಂಬಿನೇಷನ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ರಚಿತಾ ರಾಮ್ ಜೋಡಿ ತೆರೆಯ ಮೇಲೆ ಕಾಣಿಸಿಕೊಂಡಿರುವುದು ಮೋಡಿ ಮಾಡಲು ಮುಂದಾಗಿದ್ದು ದಾಖಲೆಗೆ ಸಜ್ಜಾಗಿದೆ
ನಿರ್ದೇಶಕರೂ ಆಗಿರುವ ಸಂಗೀತ ನಿರ್ದೇಶಕರೂ ವಿ.ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ ಎಂದು ನಿರ್ಮಾಪಕಿ ಶೈಲಜಾ ನಾಗ್ ಮಾಹಿತಿ ನೀಡಿದ್ದಾರೆ.