Gilli's "Super Hit" movie is set to release on February 27th

ಗಿಲ್ಲಿ ನಟನೆ “`ಸೂಪರ್ ಹಿಟ್ ” ‘ ಚಿತ್ರ ಫೆಬ್ರವರಿ 27ರಂದು ಬಿಡುಗಡೆಗೆ ಸಜ್ಜು - CineNewsKannada.com

ಗಿಲ್ಲಿ ನಟನೆ “`ಸೂಪರ್ ಹಿಟ್ ” ‘ ಚಿತ್ರ ಫೆಬ್ರವರಿ 27ರಂದು ಬಿಡುಗಡೆಗೆ ಸಜ್ಜು

ಹಾಸ್ಯದ ಮೂಲಕ ಕಿರುತೆರೆಯಲ್ಲಿ ಜನರನ್ನು ಮೋಡಿ ಮಾಡಿದ ಮಂಡ್ಯದ ಮಳವಳ್ಳಿಯ ದಡದಪುರದ ಹುಡುಗ ಗಿಲ್ಲಿ ನಟ ,ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಮತ್ತಷ್ಟು ಜನಮನ್ನಣೆ ಪಡೆದು ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡವರು.ಬಿಗ್ ಬಾಸ್ ಗೆಲುವಿನ ಬಳಿಕ ಅನೇಕ ಸಿನಿಮಾಗಳ ಅವಕಾಶ ಹುಡುಕಿಕೊಂಡು ಬರುತ್ತಿವೆ.ಇದೀಗ ಗಿಲ್ಲಿ ನಟನೆಯ ಹೊಸ ಚಿತ್ರ ” ಸೂಪರ್ ಹಿಟ್ ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ವಿಜಯಾನಂದ್ ನಿರ್ದೇಶನದ ಚಿತ್ರ ಫೆಭ್ರವರಿ 27ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಚಿತ್ರಕ್ಕೆ ಜಿ.ಉಮೇಶ್ ಬಂಡವಾಳ ಹೂಡಿದ್ದು ಸಾಧು ಕೋಕಿಲಾ, ಗೀತರಚನೆಕಾರ ಡಾ.ವಿ ನಾಗೇಂದ್ರ ಪ್ರಸಾದ್, ಗೌರವ್ ಶೆಟ್ಟಿ, ಶ್ವೇತಾ,ಸೇರಿದಂತೆ ಹಿರಿಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.

ಈ ವೇಳೆ ಮಾತಿಗಿಳಿದ ನಟ ಗಿಲ್ಲಿ,ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದೇನೆ ನನ್ನೊಂದಿಗೆ ನಟಿಸಿರುವ ಎಲ್ಲರ ಪಾತ್ರವೂ ಪ್ರಮುಖವಾಗಿದೆ, ಅದರಲ್ಲಿಯೂ ಚಿತ್ರದಲ್ಲಿ ಕಾರು ಕೂಡ ಪ್ರಮುಖ ಪಾತ್ರವಹಿಸಿದೆ. ಅದು ಕೊಟ್ಟ ಕಾಟ ಬೇರಾರು ಕೊಟ್ಟಿಲ್ಲ. ನಿರ್ದೇಶಕ ವಿಜಯಾನಂದ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಜನರನ್ನು ನಕ್ಕು ನಗಿಸುವ ಉದ್ದೇಶ ಹೊಂದಿದೆ.ಜನರಿಗೆ ಕಂಡಿತಾ ಇಷ್ಟವಾಗಲಿದೆ.ಇದೇ ತಿಂಗಳ 27 ರಂದು ಬಿಡುಗಡೆಯಾಗುತ್ತಿದೆ ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಕೇಳಿಕೊಂಡರು.

ನಿರ್ದೇಶಕ ವಿಜಯಾನಂದ್ ಮಾತನಾಡಿ ಯಾವುದಕ್ಕೂ ಕೊರತೆಯಾಗದಂತೆ ಚಿತ್ರವನ್ನು ನಿರ್ಮಾಪಕ ಜಿ ಉಮೇಶ್ ನಿರ್ಮಾಣ ಮಾಡಿದ್ದಾರೆ. ಕಾಮಿಡಿ, ಸಸ್ಪೆನ್ಸ್ ಇರುವ ಚಿತ್ರ ಎಲ್ಲರಿಗೂ ಇಡಿಸಲಿದೆ.ಚಿತ್ರದ ಹೆಸರು ಸೂಪರ್‍ಹಿಟ್ ಚಿತ್ರವೂ ಸೂಪರ್‍ಹಿಟ್ ಆಗಲಿದೆ. ವಾರಕ್ಕೆ ಹಲವು ಸಿನಿಮಾ ಬಿಡುಗಡೆ ಆಗುತ್ತಿವೆ. ಚಿತ್ರದ ಕಂಟೆಂಟು, ಕಲಾವಿದರ ಮೇಲೆ ನಂಬಿಕೆ ಇದೆ. ಜೊತೆಗೆ ಚಿತ್ರ ಮೂಡಿ ಬಂದಿರುವ ಪರಿ ಜನರಿಗೆ ಖಂಡಿತ ಇಷ್ಟವಾಗಲಿದೆ ಎಂದರು

ಸೂಪರ್ ಹಿಟ್ ಚಿತ್ರದ ಓಟಿಟಿ ಹಕ್ಕು ಗಳನ್ನು ಹೊಸಾ ಸಂಸ್ಥೆ ದೊಡ್ದ ಮೊತ್ತಕ್ಕೆ ಖರೀದಿಸಿದೆ. ಚಿತ್ರದಲ್ಲಿ ಹಿರಿಯ ಕಲಾವಿದ ಸಾದುಕೋಕಿಲ ಪಾತ್ರ ಸಮಾಜಕ್ಕೆ ಕೈಗನ್ನಡಿ ಹಿಡಿದ ಹಾಗಿದೆ ಯಾವೊಬ್ಬ ಸ್ವಾಮೀಜಿಗೂ ಅಗೌರವ ತರುವ ಉದ್ದೇಶವಿಲ್ಲ. ಅಧರ್ಮದ ಹಾದಿ ಇಡಿದು ಅದೆಷ್ಡೂ ಸ್ವಾಮೀಜಿಗಳು ಜೈಲಿನಲ್ಲಿದ್ದಾರೆ ಅಂತವರ ಪ್ರತಿರೂಪದ ಪಾತ್ರ. ಚಿತ್ರ ನೋಡಿ ಹರಸಿ ಎಂದು ಕೇಳಿಕೊಂಡರು

ಹಿರಿಯ ಕಲಾವಿದ ಸಾಧುಕೋಕಿಲ ಮಾತನಾಡಿ ಚಿತ್ರಮಂದಿರಕ್ಕೆ ಜನರನ್ಜ ಕರೆ ತರುವುದು ದೊಡ್ಡ ಕೆಲಸ.ಆ ಕೆಲಸ ಮಾಡಬೇಕಾಗಿದೆ. ಚಿತ್ರಮಂದಿರಕ್ಕೆ ಜನ ಬಂದರೆ ಸಿನಿಮಾ ಇಷ್ಟ ಆದರೆ ಕಂಡಿತಾ ಓಡುತ್ತದೆ. ಸುಮ್ಮನೆ ಹಾಗೆ ಮಾಡಿದ್ದೇವೆ ಹೀಗೆ ಮಾಡಿದ್ದೇವೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಜನರಿಗೆ ಇಷ್ಟ ಆದರೆ ಅವರೇ ಸೂಪರ್ ಹಿಟ್ ಮಾಡ್ತಾರೆ. ಗಿಲ್ಲಿ ನಟ ಸಿನಿಮಾದಲ್ಲಿ ನಟಿಸಿರುವುದು ಚಿತ್ರಕ್ಕೆ ಫ್ಲಸ್ ಪಾಯಿಂಟ್ ಎಂದರು

ನಿರ್ಮಾಪಕ ಜಿ ಉಮೇಶ್ ಮಾತನಾಡಿ ಸಿನಿಮಾ ಪ್ರೇಮದಿಂದ ಚಿತ್ರ ನಿರ್ಮಾಣ ಮಾಡಿದ್ದು ಎಲ್ಲರ ಸಹಕಾರ ಬೆಂಬಲವಿರಲಿ ಎಂದು ಕೇಳಿಕೊಂಡರು

ಡಾ.ವಿ ನಾಗೇಂದ್ರ ಪ್ರಸಾದ್ ಸೂಪರ್ ಹಿಟ್ ಮೂಡಿ ಬಂದಿರುವ ರೀತಿಯ ಮೆಚ್ಚುಗೆ ಸೂಚಿಸಿ,ಗಿಲ್ಲಿಯ ಪ್ರತಿಭೆ ಚಿತ್ರಕ್ಕೆ ವರವಾಗಲಿದೆ ಸಿನಿಮಾ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ ಜೊತೆಗೆ ನಟಿಸಿದ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು

ಗೌರವ್ ಶೆಟ್ಟಿ ಮತ್ತು ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಮತ್ತಿತರಿದ್ದಾರೆ. ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಚಿತ್ರಕ್ಕಿದೆ

ಚಿತ್ರದಲ್ಲಿ ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin