Good response to 'Rajadhiraja Yatra' in Bengaluru

ಬೆಂಗಳೂರಿನಲ್ಲಿ ‘ರಾಜಾಧಿರಾಜ ಯಾತ್ರೆ’ಗೆ ಉತ್ತಮ ಪ್ರತಿಕ್ರಿಯೆ - CineNewsKannada.com

ಬೆಂಗಳೂರಿನಲ್ಲಿ ‘ರಾಜಾಧಿರಾಜ ಯಾತ್ರೆ’ಗೆ ಉತ್ತಮ ಪ್ರತಿಕ್ರಿಯೆ

ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‍ನಲ್ಲಿ ನಡೆಯುತ್ತಿರುವ ಅದ್ಭುತ ಮ್ಯೂಸಿಕಲ್ ಥಿಯೇಟರ್‍ಗೆ ಜನ ಸಾಗರವೇ ಹರಿದುಬರುತ್ತಿದ್ದು, ಸತತವಾಗಿ ಎಲ್ಲಾ ಪ್ರದರ್ಶನಗಳು ಹೌಸ್‍ಫುಲ್ ಆಗುತ್ತಿವೆ.ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಕೃಷ್ಣನ ಲೀಲೆಗಳನ್ನು ಕಣ್ಣಮುಂದೆ ತರುತ್ತಿರುವ ಈ ಕಲೆಗೆ ಸಿಲಿಕಾನ್ ಸಿಟಿ ಮಾರುಹೋಗಿದೆ. ವ್ರಜದ ಬಾಲಕೃಷ್ಣನಿಂದ ಹಿಡಿದು ದ್ವಾರಕಾಧೀಶನವರೆಗಿನ ಶ್ರೀಕೃಷ್ಣನ ದೈವಿಕ ಪಯಣ ಈ ನಾಟಕದಲ್ಲಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಲಾಗಿದೆ.

ಪ್ರತಿಷ್ಠಿತ ತಂಡ: ಪದ್ಮಶ್ರೀ ಪುರಸ್ಕೃತ ಪ್ರಸೂನ್ ಜೋಶಿ ಅವರ ಲೇಖನಿ, ಶ್ರುತಿ ಶರ್ಮಾ ಅವರ ನಿರ್ದೇಶನ ಹಾಗೂ ಸಚಿನ್-ಜಿಗರ್ ಅವರ ಸಂಗೀತ ಈ ಪ್ರದರ್ಶನದ ಜೀವಾಳ.

ದೃಷ್ಟಿವೈಭವ: ಪ್ರಸಿದ್ಧ ವಿನ್ಯಾಸಕಿ ನೀತಾ ಲುಲ್ಲಾ ಅವರ ವಸ್ತ್ರಾಲಂಕಾರ ಮತ್ತು ಭವ್ಯವಾದ ಸೆಟ್ ಸೆಟ್ಟಿಂಗ್‍ಗಳು ಪ್ರೇಕ್ಷಕರನ್ನು ದ್ವಾಪರ ಯುಗಕ್ಕೆ ಕರೆದೊಯ್ಯುತ್ತವೆ.

ಸಂಗೀತ ಮತ್ತು ನೃತ್ಯ: 20ಕ್ಕೂ ಹೆಚ್ಚು ಮೂಲ ಹಾಡುಗಳು ಹಾಗೂ ಮೈನವಿರೇಳಿಸುವ ನೃತ್ಯ ಸಂಯೋಜನೆ ಈ ಶೋನ ಹೈಲೈಟ್.

ಲಾಫಿಂಗ್ ವಾಟರ್ ಪ್ರೊಡಕ್ಷನ್ಸ್, ಹೊಂಬಾಳೆ ಎಂಟರ್‍ಟೈನ್‍ಮೆಂಟ್ಸ್ ಮತ್ತು ಕಲಾನೇಷನ್ ಜಂಟಿಯಾಗಿ ಈ ಮಹೋನ್ನತ ಕಾರ್ಯಕ್ರಮವನ್ನು ಆಯೋಜಿಸಿವೆ. ಬೆಂಗಳೂರಿನಲ್ಲಿ ಐತಿಹಾಸಿಕ ಯಶಸ್ಸು ಕಂಡಿರುವ ‘ರಾಜಾಧಿರಾಜ ಯಾತ್ರೆ’, ಈಗ ತನ್ನ ಮುಂದಿನ ಪಯಣವನ್ನು ಚೆನ್ನೈನತ್ತ ಬೆಳೆಸುತ್ತಿದೆ. ಮಾರ್ಚ್ 27 ರಿಂದ 29 ರವರೆಗೆ ಚೆನ್ನೈ ಪ್ರೇಕ್ಷಕರನ್ನು ರಂಜಿಸಲು ಈ ತಂಡ ಸಜ್ಜಾಗಿದೆ.

ಕೇವಲ ಒಂದು ನಾಟಕವಾಗಿ ಉಳಿಯದೆ, ಭಕ್ತಿ ಮತ್ತು ಕಲೆಯ ಸಂಗಮವಾಗಿರುವ ಈ ‘ರಾಜಾಧಿರಾಜ ಯಾತ್ರೆ’ ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin