ಹಿರೋಕಾ ಆಂಟಿ ವೈರಸ್ ಕಥೆ: ಚಿತ್ರ ನೋಡಿ ಎಂದು ನಿರ್ದೇಶಕ ನೀನಾಸಂ ಕಿಟ್ಟಿ
ನಿನಾಸಂ ಕಿಟ್ಟಿ ಅಭಿನಯದ “ಹಿಕೋರಾ” ಚಿತ್ರದ ಧ್ಬನಿ ಸುರುಳಿ ಬಿಡುಗಡೆಯಾಗಿದೆ. ನೀಲಕಂಠೇಶ್ವರ ಸಿನಿ ಕಂಬೈನ್ಸ್ ಮೂಲಕ ರತ್ನಾ ಶ್ರೀಧರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ನೀನಾಸಂ ಕಿಟ್ಟಿ ಅವರೇ ನಿರ್ದೇಶನ ಮಾಡಿದ್ದಾರೆ

ಚಿತ್ರದ ಹಾಡುಗಳನ್ನು ಹಿರಿಯ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ , ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ವೇಳೆ ಹಾಡುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು .
ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್, , ನಟ ಶಿಷ್ಯಾ ದೀಪಕ್ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ,ನಾಯಕಿ ಸ್ಪಂದನ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

ಕೆ.ವಿ ಚಂದ್ರಶೇಖರ್ ಮಾತನಾಡಿ ,ಚಿತ್ರವನ್ನು ಪ್ರೇಕ್ಷಕರಿಗೆ ಇಡಿಸುವ ರೀತಿ ಸಿನಿಮಾ ಮಾಡಬೇಕು. ಪ್ರೇಕ್ಷಕ ಚಿತ್ರವನ್ನು ಕೈ ಬಿಟ್ಟಿಲ್ಲ. ಅವರಿಗೆ ಇಷ್ಟವಾದರೆ ಹೊಸ ನಾಯಕರನ್ನು ದೊಡ್ಡ ನಾಯಕರನ್ನಾಗಿ ಮಾಡುತ್ತಾರೆ. ಅದೇ ರೀತಿ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಪ್ರೋತ್ಸಾಹ ಸಿಗಲಿದೆ. ಚಿತ್ರಮಂದಿರಕ್ಕೆ ಬರುವ ಮುನ್ನ ಎಷ್ಟು ತಪ್ಪು ಸರಿಪಡಿಸಬಹುದು . ಆದರೆ ಚಿತ್ರ ಬಿಡುಗಡೆ ಆದ ನಂತರ ತಪ್ಪು ಸರಿ ಮಾಡುವುದು ಕಷ್ಟ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಎಚ್ಚರಿಕೆ ವಹಿಸಬೇಕು. ಬಿಡುಗಡೆ ಮುನ್ನ ಒಂದಷ್ಟು ಮಂದಿಗೆ ಸಿನಿಮಾ ತೋರಿಸಿ ಅವರ ಅಭಿಪ್ರಾಯ ಪಡೆದು ಸರಿ ತಪ್ಪು ಸರಿ ಪಡಿಸಿಕೊಳ್ಳಿ ಎಂದು ಹಿರಿಯರಾದ ಸಿದ್ದಲಿಂಗಯ್ಯ ಅವರು ಹೇಳು ತ್ತಿದ್ದರು. ಇದು ಈಗಲೂ ಪ್ರಸ್ತುತ ಎಂದು ಚಿತ್ರತಂಡಕ್ಕೆ ಸಲಹೆ ನೀಡಿದರು
ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡಿ ನಿರ್ಮಾಪರು ಚಿತ್ರದ ಆಡಿಯೋ ಅನ್ನು ಕಡಿಮೆ ಮೊತ್ತಕ್ಕೆ ಮಾರಿಕೊಳ್ಳಬೇಡಿ. ಒಂದು ಹಾಡಿನ ಆಯಸ್ಸು 60 ವರ್ಷ ಇರಲಿದೆ. ಅದರಿಂದ ನಿರ್ಮಾಪಕರು, ಗೀತ ರಚನೆಕಾರರು ಮತ್ತು ಸಂಗೀತ ನಿರ್ದೇಶಕರಿಗೆ ಹಣ ಬರಲಿದೆ. ತಕ್ಷಣದ ಆಸೆಗೆ ಆಡಿಯೋ ಹಕ್ಕು ಮಾರಾಟ ಮಾಡಿ ನಷ್ಟ ಅನುಭವಸಬೇಡಿ ಎಂದು ಸಲಹೆ ನೀಡಿದರು
ನಟ, ನಿರ್ದೇಶಕ ನೀನಾಯ ಕಿಟ್ಟಿ ಮಾತನಾಡಿ, ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಯುವ ಜನತೆ ಹಾಡು ಕೇಳಿದರೆ ಎದೆಯೊಳಗೆ ಪುಟಿದೇಳಬೇಕು ಎನ್ಮುವ ಹಾಡು ಬರೆಯುವ ಸಮಯದಲ್ಲಿ ಸ್ವಾಮಿ ವಿವೇಕಾನಂದರ ಏಳಿ ಎದ್ದೇಳಿ ಸಾಲು ಇಟ್ಡು ಹಾಡು ಬರೆಯಲಾಗಿದೆ. ಟ್ರೈಲರ್ ಬಿಡುಗಡೆ ವೇಳೆ ಉಳಿದ ಹಾಡು ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.
ಹಿಕೋರಾ ಎಂದರೆ ಆಂಟಿ ವೈರಸ್ , ವೈರಸ್ ಯಾವುದು ಎನ್ನುವುದು ತಿಳಿಯಬೇಕಾದರೆ ಸಿನಿಮಾ ನೋಡಿ, ಕೊರೋನಾ ಸಮಯದಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಡೆ ತಡೆಯಿಂದ ತಡ ಆಯ್ತು ಈಗ ಬಿಡುಗಡೆ ಮಾಡಲು ಸಜ್ಜಾಗಿದ್ದೇವೆ ಚಿತ್ರವನ್ನು ನೀನಾಸಂ, ಸಾಗರ ಜೋಗಫಾಲ್ಸ್ , ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ನಾಯಕಿ ಸ್ಪಂದನಾ ಪ್ರಸಾದ್ ಮಾತನಾಡಿ, ಧಾರಾವಾಹಿಯಲ್ಲಿನಟಿಸುತ್ತಿದ್ದೆ ಒಂದು ಆಡಿಯೋ ಬಿಡುಗಡೆಯಲ್ಲಿ ಪುನೀತ್ ರಾಜ್ ಕುಮಾರ್ ಅವರು ನೀವು ಸಿಮಿಮಾಗೆ ಬನ್ನಿ ಎಂದಿದ್ದರು. ರವಿ ಬಸ್ರೂರು ಅವರ ಕಟಕದಲ್ಲಿ ಅವಕಾಶ ಸಿಕ್ಕಿತ್ತು. ಇದಾದ ಕೆಲವೇ ದಿನಗಳಲ್ಲಿ ಹಿಕೋರಾ ಚಿತ್ರದಲ್ಲಿ ನಟಿಸಿದ್ದೇನೆ. ಪುನೀತ್ ರಾಜ್ ಕುಮಾರ್ ಅವರ ಆಶೀರ್ವಾದ ಇದೆ. ಜೊತೆಗೆ ಡಿ ಬಾಸ್ ದರ್ಶನ್ ಮುಹೂರ್ತ ಮಾಡಿದ್ದರು. ಚಿತ್ರವನ್ನು ನೋಡಿ ಎಂದು ಮನವಿ ಮಾಡಿದರು.
ನಿರ್ಮಾಪಕಿ ರತ್ನಾ ಶ್ರೀಧರ್ ಮಾತನಾಡಿ ನೀನಾಸಂ ನಲ್ಲಿ ಹಲವು ವರ್ಷಗಳ ಕಾಲ ಕ್ಯಾಂಟಿನ್ ನಡೆಸಿತ್ತಿದ್ದೆ, ನಟ ದರ್ಶನ್, ನೀನಾಸಂ ಸತೀಶ್, ಲೂಸಿಯಾ ಪವನ್, ಸರ್ದಾರ್ ಸತ್ಯ ಸೇರಿದಂತೆ ಜೀ ಕನ್ನಡದ ಕಾಮಿಡಿ ಕಿಲಾಡಿಯ ಅನೇಕ ಸ್ಪರ್ಧಿಗಳಿಗೆ ಆಹಾರ ನೀಡಿದ್ದೆ. ಹಲವು ವರ್ಷದ ಪರಿಶ್ರಮದ ಹಿನ್ನೆಲೆಯಲ್ಲಿ ಹಿಕೋರ ಚಿತ್ರ ನಿರ್ಮಾಣ ಮಾಡಿದ್ದೇನೆ, ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ದೇವೆ, ಆಗಸ್ಟ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ನಟ ದರ್ಶನ ಅಮ್ಮ ಏನೇ ಸಮಸ್ಯೆ ಇದ್ದರೆ ಹೇಳಿ ಎಂದಿದ್ದರು, ಆದರೆ ಇದುವರೆಗೆ ನಾನು ಅವರಿಗೆ ನಯಾ ಪೈಸೆ ಸಹಕಾರ ಪಡೆದಿಲ್ಲ ಇದನ್ನ ಹೆಡ್ ಲೈನ್ ನಲ್ಲಿ ಬೇಕಾದರೆ ಹಾಕಿ ಎಂದರು.
ನಟ ಸರ್ದಾರ್ ಸತ್ಯ ಮಾತನಾಡಿ, ನೀನಾಸಾಂ ನಲ್ಲಿ ನಟಿಸುವಾಗ ನಿರ್ಮಾಪಕರಾದ ರತ್ನಾ ಶ್ರೀಧರ್ ಅವರ ಅನ್ನದ ಋಣ ಇದೆ. ರತ್ನ ಅವರಿಗೆ ಒಳ್ಳೆಯದಾಗಬೇಕು ಹೀಗಾಗಿ ಒಂದು ರೂಪಾಯಿ ತೆಗೆದುಕೊಂಡು ಸಿನಿಮಾ ಮಾಡಿದ್ದೇನೆ. ಸಹಾಯ ಮಾಡುವರು ಇದ್ದರೆ ಮಾಡಲಿ ಎನ್ನುವುದು ನನ್ಮ ಉದ್ದೇಶ ಹೀಗಾಗಿ ಈ ಮಾಹಿತಿ ಹಂಚಿಕೊಂಡಿದ್ದೇನೆ ಎಂದರು
ಪೂರ್ಣಚಂದ್ರ ತೇಜಸ್ವಿ ಮಾತನಾಡಿ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿಬಂದಿದೆ. ಶಂಕರ್ ಮಹಾದೇವನ್ ಎರಡು ಹಾಡು ಹಾಡಿದ್ದಾರೆ. ಗಣೇಶ್ ಹೆಬ್ರಿ ಹಾಡು ವಿಭಿನ್ನವಾಗಿ ಮೂಡಿಬಂದಿದೆ. ಹಾಡಿಯೋ ಸಂಸ್ಥೆಯಿಂದ ಹಾಡು ಬಿಡುಗಡೆಯಾಗಿದೆ. ಇದುವರೆಗೂ 8 ರಿಂದ 9 ಚಿತ್ರಗಳ ಹಾಡು ಬಿಡುಗಡೆ ಮಾಡಲಾಗಿದೆ ಎಂದರು
ಚಿತ್ರವನ್ನು ನಿರ್ದೇಶಕ ಟೇಶಿ ವೆಂಕಟೇಶ್ ಇದೇ ಮೊದಲ ಬಾರಿಗೆ ಹಿಕೋರಾ ಚಿತ್ರದ ಮೂಲಕ ವಿತರಣೆ ಆರಂಭಿಸಿದ್ದಾರೆ

