ಜಸ್ಟ್ ಮ್ಯಾರೀಡ್ ” ಮದುವೆಗಾಗಿ ಸಿಕ್ಕ ಹೊಸ ಕನ್ನಡ ಗೀತೆ ಬಿಡುಗಡೆ
ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಅವರ ಹೃದಯಸ್ಪರ್ಶಿ ಬರವಣಿಗೆ, ಅಜನೇೇಶ್ ಲೋಕನಾಥ್ ಸಂಗೀತದ ಮಾಯಾಜಾಲ ಮತ್ತು ಸಂಜಿತ್ ಹೆಗ್ಡೆ ಹಾಡಿರುವ ” ಜಸ್ಟ್ ಮ್ಯಾರೀಡ್ “ಮದುವೆ ಹಾಡು ಬಿಡುಗಡೆಯಾಗುಇದ್ದು ಗಮನ ಸೆಳೆದಿದೆ.

ಈ ಹಾಡು ರೀಲ್ಸ್‌ಗೆ ಅಲ್ಲ, ರಿಯಲ್ ಲೈಫ್ಕೋ! ಹಾಡು ಕೇಳಿದ ಕ್ಷಣದಿಂದಲೇ ನಗು, ನೆನಪು, ಪ್ರೀತಿ, ಸಂಭ್ರಮ—ಇವೆಲ್ಲಾ ಒಂದೇ ವೇಳೆ ಮೂಡಿಸುತ್ತವೆ.
ಅಂಕಿತಾ ಅಮರ್ ಮತ್ತು ಶೈನ್ ಶೆಟ್ಟಿ ಅವರ ನಡುವಿನ ಕೆಮಿಸ್ಟ್ರಿ ಅದ್ಬುತವಾಗಿ ಮೂಡಿ ಬಂದಿದೆ. ನವಜೋಡಿಗಳ ಅನುರಾಗವನ್ನು ಚಿತ್ರಿಸುತ್ತಾ, ಪ್ರೇಮದ ಹೊಸ ಮುಖವನ್ನು ಈ ಹಾಡು ಪರಿಚಯಿಸುತ್ತದೆ.

ಹಾಡು ಕೇಳಿದಾಗ ಬಹುಮಂದಿಗೆ ಡಾ. ರಾಜ್‌ಕುಮಾರ್ ಅವರ ಹಳೆಯ ಮದುವೆ ಹಾಡುಗಳು ನೆನಪಾಗುತ್ತವೆ. ಆದರೂ ಇದರಲ್ಲಿದೆ ಆಧುನಿಕ ತಾಜಾತನ, ಜಾನಪದದ ನಗು ಮತ್ತು ಹೃದಯದ ನಂಟು. ಇದು ಮದುವೆ ಹಾಡುಗಳ ಹೊಸ ಕನ್ನಡ ಹೆಮ್ಮೆ.
ಸಿನಿಮಾದ ದರ್ಜೆ, ನಾಟ್ಯದ ಔತಣ, ಕಾಸ್ಟ್ಯೂಮ್‌ಗಳ ವೈವಿಧ್ಯತೆ, ಹಿರಿಯ ಕಲಾವಿದರ ಸಾನ್ನಿಧ್ಯ ಇವೆಲ್ಲವೂ ಈ ಹಾಡನ್ನು ಸಂಪೂರ್ಣ ಪ್ಯಾಕೇಜ್ ಆಗಿ ರೂಪಿಸಿವೆ. ಈಗ ಮದುವೆ ಹಬ್ಬ ಶುರುವಾಗಿದೆ. ಬಹುಮಟ್ಟಿಗೆ ಮದುವೆಗಳಲ್ಲಿ ಕನ್ನಡ ಗೀತೆಗಳ ಕೊರತೆ ಇತ್ತು. ಆದರೆ ಈಗ ಜಸ್ಟ್ ಮ್ಯಾರೀಡ್ ಮೂಲಕ ನಾವು ಮತ್ತೆ ನಮ್ಮ ಭಾಷೆಯಲ್ಲಿ, ನಮ್ಮ ಸಂಭ್ರಮದ ಹಾಡು ಪಡದಿದೆ


