If there is a situation where a story is stolen and a movie is made, the movie will not be made at all - Daling Krishna couple

ಕಥೆ ಕದ್ದು ಸಿನಿಮಾ ಮಾಡುವ ಪರಿಸ್ಥಿತಿ ಬಂದರೆ ಸಿನಿಮಾನೇ ಮಾಡಲ್ಲ – ಡಾಲಿಂಗ್ ಕೃಷ್ಣ ದಂಪತಿ - CineNewsKannada.com

ಕಥೆ ಕದ್ದು ಸಿನಿಮಾ ಮಾಡುವ ಪರಿಸ್ಥಿತಿ ಬಂದರೆ ಸಿನಿಮಾನೇ ಮಾಡಲ್ಲ – ಡಾಲಿಂಗ್ ಕೃಷ್ಣ ದಂಪತಿ

“ ಕಥೆ ಕದ್ದು ಸಿನಿಮಾ ಮಾಡುವಷ್ಟು ಬೌದ್ದಿಕ ದಾರಿದ್ರ್ಯ ಇನ್ನು ಬಂದಿಲ್ಲ, ಅಂತಹ ಸ್ಥಿತಿ ನಿರ್ಮಾಣವಾಗಿ ಕಥೆ ಕದ್ದು ಸಿನಿಮಾ ಮಾಡುವ ವಾತಾವರಣ ಎದುರಾದರೆ ಸಿನಿಮಾಗಳನ್ನೇ ಮಾಡಲ್ಲ ಎಂದು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ದಂಪತಿ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಲವ್ ಮಾಕ್ಟೇಲ್-3 ಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ, ಈ ನಡುವೆ ಚಿತ್ರದ ದ್ವಿತೀಯಾರ್ಧ ಭಾಗದ ಕಥೆ ಕದ್ದು ಸಿನಿಮಾ ಮಾಡಲಾಗಿದೆ ಎನ್ನುವ ಆರೋಪ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ದಂಪತಿ ಮೇಲೆ ಬಂದಿದೆ, ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ

ನಿರ್ದೇಶಕ ಡಾಲಿಂಗ್ ಕೃಷ್ಣ ಮಾತನಾಡಿ ನಿರ್ದೇಶಕ ರಾಘವೇಂದ್ರ ಎಂ ನಾಯ್ಕ್ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಮೂರು ವರ್ಷದ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು, ಕಥೆ ಚೆನ್ನಾಗಿದೆ, ನಾವೂ ಕೂಡ ಇದೇ ರೀತಿಯ ಕಥೆ ಮಾಡುತ್ತಿದ್ದೇವೆ ಎಂದು ಅವರಿಗೆ ಹೇಳಿ ಕಳುಹಿಸಿದ್ದೆ. ಈಗ ಲವ್ ಮಾಕ್ಟೇಲ್ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವಾಗ ಕಥೆ ಕದ್ದೀದ್ದೀರಾ ಎನ್ನುವ ಆರೋಪ ಮಾಡುತ್ತಿದ್ದಾರೆ, ಇದರಿಂದ ಮನಸ್ಸಿಗೆ ನೋವಾಗಿದೆ, ನಾಲ್ಕು ವರ್ಷಗಳ ಕಾಲ ಕುಳಿತು ಕಥೆ ಸಿದ್ದ ಪಡಿಸಿದ್ದೆ ಎಂದರು

ಯಾವುದೇ ಚಿತ್ರದ ಸ್ಕ್ರಿಪ್ಟ್ ಅಂತಿಮ ಮಾಡುವ ಮುನ್ನ,ಆರಂಭ, ಇಂಟರ್ ವೆಲ್ ಮತ್ತು ಕ್ಲೈಮ್ಯಾಕ್ಸ್ ಸಿಕ್ಕ ನಂತರವೇ ಚಿತ್ರಕಥೆ, ಪಾತ್ರಗಳ ಸೇರ್ಪಡೆ ಸೇರಿದಂತೆ ಇನ್ನಿತರೆ ಕೆಲಸ ಮಾಡುತ್ತೇವೆ, ಲವ್ ಮಾಕ್ಟೇಲ್-3 ಚಿತ್ರದಲ್ಲಿ ಅದನ್ನೇ ಮಾಡಿದ್ದೇವೆ, ಹೀಗಿದ್ದರೂ ನಮ್ಮ ಕಥೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ, ಇಷ್ಟಕ್ಕೂ ನಿರ್ದೇಶಕ ರಾಘವೇಂದ್ರ ನಾಯ್ಕ ಗೂಗಲ್‍ನಿಂದ ಕದ್ದ ಕಥೆಯನ್ನು ತಮಗೆ ಹೇಳಿದ್ದರು,ಜೊತೆಗೆ ಗುರು ದೇಶಪಾಂಡೆ ಮಾಡಿರುವ ಬಹುತೇಕ ಚಿತ್ರಗಳು ರಿಮೇಕ್ ಇಂತಹರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಮಾನನಷ್ಠ ಮೊಕದ್ದಮೆ:

ಸಿನಿಮಾದ ಕೃತಿಚೌರ್ಯದ ಆರೋಪ ಮಾಡಿದ ಹಿನ್ನೆಲೆಯಲ್ಲಿ ರಾಘವೇಂದ್ರ ನಾಯ್ಕ್ ಮತ್ತು ಗುರು ದೇಶಪಾಂಡೆ ವಿರುದ್ದ ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಲಾಗಿದೆ., ಜೊತೆಗೆ ವಕೀಲರನ್ನು ಸಂಪರ್ಕಿಸಿದ್ದು ಕಾನೂನಿನ ಮೂಲಕ ಉತ್ತಮ ಕೊಡುತ್ತೇವೆ,. ಈ ಹಿನ್ನೆಲೆಯಲ್ಲಿ ಮಾನನಷ್ಠ ಮೊಕದ್ದಮೆ ದಾಖಲಿಸುತ್ತೇವೆ ಎಂದರು.

ನಮ್ಮ ಕಥೆಗೆ ಯಾರಿಗೂ ಕ್ರೆಡಿಟ್ ಕೊಡುವುದಿಲ್ಲ, ಕಥೆಗಾರರಿಗೆ ಅನ್ಯಾಯವಾಗಬಾರದು, ನ್ಯಾಯಾಲಯದಲ್ಲಿ ಹೋರಾಡಲು ತಾವು ಸಿದ್ದ, ಚಿತ್ರರಂಗಕ್ಕೆ ಬಂದು 15 ವರ್ಷಗಳಲ್ಲಿ ಮೊದಲ ಬಾರಿಗೆ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದೇನೆ ಎಂದರು

ಸಿನಿಮಾ ಮಾಡಲ್ಲ:

ಕತೆ ಕದ್ದು ಸಿನಿಮಾ ಮಾಡುವ ಪರಿಸ್ಥಿತಿ ನಮಗೆ ಇನ್ನೂ ಬಂದಿಲ್ಲ, ಅಂತಹ ಪರಿಸ್ಥಿತಿ ಎದುರಾದರೆ ಸಿನಿಮಾನೇ ಮಾಡಲ್ಲ ಎಂದು ನಟಿ ಮಿಲನಾ ನಾಗರಾಜ್ ಹೇಳಿದರು

ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ಕಥೆ ಮಾಡಿದ್ದೇವೆ, ಹೀಗಿರುವಾಗ ಕಥೆ ಕದ್ದಿದ್ದೀರಿ ಎಂದು ಹೇಳುವುದು ಮೂರ್ಖತನದ ಪರಮಾವಧಿ, ಆರೋಪಕ್ಕೆ ಕಾನೂನಿನ ಮೂಲಕ ಉತ್ತರ ಕೊಡುತ್ತೇವೆ ಎಂದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin