ಡಿಸೆಂಬರ್ 20 ರಂದು “JAM JUNXION” ಬಿಗೆಸ್ಟ್ ಮ್ಯೂಸಿಕಲ್ ನೈಟ್”
ಹಲವು ವಿಶೇಷಗಳಿಗೆ ಹೆಸರಾಗಿರುವ ಬೆಂಗಳೂರಿನಲ್ಲಿ ಡಿಸೆಂಬರ್ 20ರಂದು ಮತ್ತೊಂದು ವಿಶೇಷ ನಡೆಯಲಿದೆ. ಹೆಸರಾಂತ “JAM JUNXION” ವತಿಯಿಂದ ಬೆಂಗಳೂರಿನ ಥಣಿಸಂದ್ರದ ಭಾರತೀಯ ಮಾಲ್‍ನಲ್ಲಿ ಬಿಗೆಸ್ಟ್ ಮ್ಯೂಸಿಕಲ್ ನೈಟ್ ಆಯೋಜಿಸಲಾಗಿದೆ.
ಬೃಹತ್ ಮ್ಯೂಸಿಕಲ್ ನೈಟ್‍ನಲ್ಲಿ ಆರು ಬೃಹತ್ ವೇದಿಕೆಗಳಲ್ಲಿ ಆರು ಪ್ರಸಿದ್ದ ಬ್ಯಾಂಡ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಒಂದು ವೇದಿಕೆಯ ಕಾರ್ಯಕ್ರಮ ಆದ ಕೂಡಲೆ ಮತ್ತೊಂದು ವೇದಿಕೆಯ ಕಾರ್ಯಕ್ರಮ ತಕ್ಷಣವೇ ಆರಂಭವಾಗುತ್ತದೆ. ಚಂದನ್ ಶೆಟ್ಟಿ ಬ್ಯಾಂಡ್ ಸೇರಿದಂತೆ ಆರು ಪ್ರಸಿದ್ದ ಬ್ಯಾಂಡ್ ಗಳು ಇದರಲ್ಲಿ ಪಾಲ್ಗೊಳ್ಳಲಿದೆ.
ಸಂಜೆ ಐದು ಗಂಟೆಗೆ ಆರಂಭವಾಗುವ ಕಾರ್ಯಕ್ರಮ ಸತತ ಆರು ಗಂಟೆಗಳ ಕಾಲ ನಡೆಯಲಿದೆ. ಕನ್ನಡ, ತೆಲುಗು ಹಾಗೂ ಹಿಂದಿ ಮೂರು ಭಾಷೆಗಳ ಹಾಡುಗಳನ್ನು ಹಾಡಿ ಗಾಯಕರು ರಂಜಿಸಲಿದ್ದಾರೆ. 800 ರೂಪಾಯಿಯಿಂದ ಟಿಕೆಟ್ ದರ ಆರಂಭವಾಗಲಿದೆ. ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ಇರುತ್ತದೆ.

“JAM JUNXION” ಮುಖ್ಯಸ್ಥ ಶ್ರೀ ಮಾತನಾಡಿ ಹೈದರಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿದ್ದೆವು. ಈಗ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದೇವೆ. ಟಿಕೆಟ್ ಗಳನ್ನು ಆನ್‍ಲೈನ್ ನಲ್ಲಿ ತೆಗೆದುಕೊಳ್ಳಬಹುದು. ನವರಸನ್ ಹಾಗೂ ಚಂದನ್ ಶೆಟ್ಟಿ ಸಹಕಾರ ನೀಡುತ್ತಿದ್ದಾರೆ. ಕಾರ್ಯಕ್ರಮ ಮಾತ್ರವಲ್ಲದೆ “ಒಙ ಣಡಿee” ಎಂಬ ಸಮಾಜಮುಖಿ ಕಾರ್ಯ ಕೂಡ ನಡೆಸುತ್ತಿದ್ದೇನೆ ಎಂದರು
ಚಂದನ್ ಶೆಟ್ಟಿ ಮಾತನಾಡಿ ಆರು ವಿಶಾಲ ವೇದಿಕೆಯಲ್ಲಿ ಆರು ಪ್ರಸಿದ್ದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ನೀವು ಕೊಟ್ಟ ದುಡ್ಡಿಗೆ ದುಪ್ಪಟ್ಟು ಮನೋರಂಜನೆ ನೀಡುವ ಕಾರ್ಯಕ್ರಮ ಇದಾಗಲಿದೆ ಎಂದರು
ನವರಸನ್ ಮಾತನಾಡಿ ಶ್ರೀ ಅವರು ನನ್ನನ್ನು ಸಂಪರ್ಕಿಈ ಸಮಾರಂಭದ ಬಗ್ಗೆ ಹೇಳಿದರು. ಕೆಲವು ಸಲಹೆಗಳನ್ನು ನೀಡಿದ್ದೇನೆ. ಈ ಸಮಾರಂಭಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದು ಹೇಳಿದರು.

