ಕನ್ನಡದ ಮೊದಲ ಅಂತರಾಷ್ಟ್ರೀಯ ಚಿತ್ರ “ಮಾರ್ಟಿನ್” ಟ್ರೈಲರ್ ಬಿಡುಗಡೆ

ಕನ್ನಡದ ಮೊದಲ ಅಂತರಾಷ್ಟ್ರೀಯ ಚಿತ್ರ ಎಂದು ಬಿಂಬಿಸುತ್ತಿರುವ ದೃವ ಸರ್ಜಾ ನಟನೆಯ “ ಮಾರ್ಟಿನ್” ಚಿತ್ರದ ಟ್ರೈಲರ್ ಮುಂಬೈನಲ್ಲಿ ದೇಶ ವಿದೇಶದ ಪತ್ರಕರ್ತರ ಎದುರು ಅನಾವರಣವಾಗಿದೆ.

ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಅಲ್ಲದೆ ಕೆನಡಾ, ಕೀನ್ಯಾ, ಯುಕೆ, ದುಬೈ, ಜಪಾನ್ ಸೇರಿದಂತೆ ಪ್ರಪಂಚದ 21 ದೇಶಗಳಿಂದ ಆಗಮಿಸಿದ ನೂರಾರು ಆಯ್ದ ಪತ್ರಕರ್ತ ಸಮ್ಮುಖದಲ್ಲಿ ನಟ ಧೃವ ಸರ್ಜಾ, ಅರ್ಜುನ್ ಸರ್ಜಾ, ನಿರ್ಮಾಪಕ ಉದಯ್ ಕೆ.ಮೆಹ್ತಾ, ನಿರ್ದೇಶಕ ಎ.ಪಿ.ಅರ್ಜುನ್, ನಾಯಕಿಯರಾದ ಅನ್ವೇಶಿ ಜೈನ್, ವೈಭವಿ ಶಾಂಡಿಲ್ಯ ಸಮ್ಮುಖದಲ್ಲಿ ಟ್ರೈಲರ್ ಬಿಡುಗಡೆಯಾಗಿದೆ
ಚಿತ್ರಕ್ಕೆ ಕಥೆ ಬರೆದಿರುವ ಹಿರಿಯ ನಟ ಅರ್ಜುನ್ ಸರ್ಜಾ ಮಾತನಾಡಿ 44 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ ಮೊದಲಬಾರಿಗೆ ಈ ಥರದ ಪ್ರೆಸ್‍ಮೀಟ್ ನಲ್ಲಿ ಭಾಗವಹಿಸಿರೋದು. ಇದಕ್ಕೆ ಮಾರ್ಟಿನ್ ತಂಡ ಕಾರಣ. ದ್ರುವ ತನ್ನ ಐದನೇ ಚಿತ್ರದಲ್ಲೇ ಮ್ಯಾಜಿಕ್ ಮಾಡಿದ್ದಾನೆ. ಆತನಿಂದ ಪ್ರೇಕ್ಷಕರು ತುಂಬಾ ಬಯಸುತ್ತಿದ್ದಾರೆ. ನಾನು ಕೂಡ ಈತನಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಆತನೇ ನನಗೆ ಇನ್ಸ್ ಪಿರೇಷನ್, ಉದಯ್ ಮೆಹ್ತಾ ತುಂಬಾ ಪ್ಯಾಷನೇಟೆಡ್ ನಿರ್ಮಾಪಕರು. ಅವರಿಗೆ ಈ ಸಿನಿಮಾದಿಂದ ಅವಾರ್ಡ್, ರಿವಾರ್ಡ್ ಎರಡೂ ಸಿಗುವಂತಾಗಲಿ ಎಂದರು.
ನಟ ಧ್ರುವ ಸರ್ಜಾ ಮಾತನಾಡಿ ರಾಜ್ಯ ದೇಶ ಎನ್ನದೆ ಎಲ್ಲಾ ಭಾಗದ ಜನರಿಗೂ ಅರ್ಥವಾಗುವಂಥ ಯೂನಿಕ್ ಸ್ಟೋರಿ ಚಿತ್ರದಲ್ಲಿದೆ. ಯೂನಿವರ್ಸಲ್ ಥೀಮ್ ಆಗಿರೋದ್ರಿಂದ ಎಲ್ಲರಿಗೂ ಕನೆಕ್ಟ್ ಆಗುತ್ತದೆ, ಅರ್ಥವಾಗುತ್ತದೆ. ಸಸ್ಪೆನ್ಸ್, ಥ್ರಿಲ್ಲರ್, ಬಿಗ್ ಆಕ್ಷನ್ ಜೊತೆಗೆ ಸಣ್ಣ ಡ್ರಾಮಾ ಇದರಲ್ಲಿದೆ. ಕ್ಲೈಮ್ಯಾಕ್ಸ್ ಭಾಗದ ಆಕ್ಷನ್ ಮಾಡುವುದು ನನಗೆ ತುಂಬಾ ಚಾಲೆಂಜ್ ಆಗಿತ್ತು. ಇದು ದೇಶಪ್ರೇಮಿಯೊಬ್ಬನ ಸಾಹಸದ ಕಥೆ ಎಂದು ಹೇಳಿದರು.
ಎ.ಪಿ. ಅರ್ಜುನ್ ಮಾತನಾಡಿ ನಾನು ಮಂಡ್ಯದ ಹುಡುಗ ಫಸ್ಟ್ ಸಿನಿಮಾ ಅಂಬಾರಿ, ಅದ್ದೂರಿ ಚಿತ್ರದ ಮೂಲಕ ಧ್ರುವ ನನ್ನು ಪರಿಚಯಿಸಿದೆ. ಆರಂಭದಲ್ಲಿ ನಾರ್ಮಲ್ ಸಿನಿಮಾ ಅಂತಲೇ ಪ್ರಾರಂಭಿಸಿದೆವು. 20 ದಿನಗಳ ಶೂಟಿಂಗ್ ಆದಮೇಲೆ ಇದರಲ್ಲೇನೋ ಇದೆ ಅಂತ ಪ್ಯಾನ್ ಸಿನಿಮಾ ಪ್ಲಾನ್ ಮಾಡಿದೆವು. ಇಂಥ ಸಿನಿಮಾ ಮಾಡಬೇಕು ಅಂತ ಬಂದಾಗ ನಿರ್ಮಾಪಕರೂ ಮುಖ್ಯವಾಗುತ್ತಾರೆ. ಆ ವಿಷಯದಲ್ಲಿ ಮೆಹತಾ ಅವರ ಧೈರ್ಯ ಮೆಚ್ಚಲೇಬೇಕು.ಸರ್ಜಾ ಸಿನಿಮಾಗಳಲ್ಲಿ ದೇಶಾಭಿಮಾನ ಎದ್ದು ಕಾಣುತ್ತದೆ. ಇದರಲ್ಲಿ ಅದು ಹತ್ತರಷ್ಟು ಎದ್ದು ಕಾಣುತ್ತೆ ಎಂದರು.

ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ನನ್ನ 25 ವರ್ಷಗಳ ಸಿನಿಮಾ ಜೀವನದಲ್ಲಿ ದ ಬೆಸ್ಟ್ ಸಿನಿಮಾ ಎಂದು ಹೇಳಿದರು
ನಾಯಕಿ ವೈಭವಿ ಮಾತನಾಡಿ 7 ವರ್ಷಗಳಿಂದ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಕಿ ನಟಿಸಿದ್ದೇನೆ. ಮಾರ್ಟಿನ್ ಈಸ್ ಒನ್ ಆಫ್ ದ ಬಿಗ್ಗೆಸ್ಟ್ ಮೂವಿ ಇನ್ ಮೈ ಕರಿಯರ್. ದ್ರುವ ತೆರೆಮೇಲೆ ಎಷ್ಟು ಅರ್ಭಟಿಸಿದ್ದಾರೋ, ಹಾಟ್ರ್ಲಿ ಅವರು ಅಷ್ಟೇ ಸಾಫ್ಟ್. ಅಲ್ಲದೆ ಇಂಥ ಸಿನಿಮಾ ಮಾಡಲು ಗಟ್ಟಿ ಗುಂಡಿಗೆ ಇರಬೇಕು.. ಅದಿದ್ದವರೇ ಇಂಥ ಸಿನಿಮಾ ಮಾಡಲು ಸಾಧ್ಯ. ಎಂದರು.

ಮತ್ತೊಬ್ಬ ನಾಯಕಿ ಅನ್ವೇಶಿ ಜೈನ್ ಚಿತ್ರದ ಕುರಿತು ಮಾತನಾಡಿದರು.
ಚಿತ್ರಕ್ಕೆ ಉದಯ್ ಮೆಹ್ತಾ ಬಂಡವಾಳ ಹಾಕಿದ್ದಾರೆ. ಮಾರ್ಟಿನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಮುಂದಾಗಿದೆ. ಈ ನಡುವೆ ಚಿತ್ರ ತಂಡದ ಒಳ ಜಗಳ ಕಿತ್ತಾಟದಿಂದಲೂ ಸದ್ದು ಸುದ್ದಿ ಮಾಡುತ್ತಿದೆ. ಇದು ಚಿತ್ರಕ್ಕೆ ಎಷ್ಟರ ಮಟ್ಟಿಗೆ ಲಾಭ-ನಷ್ಟವಾಗಲಿದೆ ಎನ್ನುವುದು ಭವಿಷ್ಯದಲ್ಲಿ ತಿಳಿಯಲಿದೆ.
ಅಂದ ಹಾಗೆ ಚಿತ್ರ ಅಕ್ಟೋಬರ್ 11ಕ್ಕೆ ಜಗತ್ತಿನಾದ್ಯಂತ ತೆರೆಗೆ ಬರಲು ಸಜ್ಜಾಗಿದೆ