Talented Actor Prasad Vasishtha Starrer U/A Certificate for “Kabandha”

ಪ್ರತಿಭಾನ್ವಿತ ನಟ ಪ್ರಸಾದ್ ವಸಿಷ್ಠ ನಟನೆ “ಕಬಂಧ” ಚಿತ್ರಕ್ಕೆ ಯು/ಎ ಸರ್ಟಿಫೀಕೇಟ್ - CineNewsKannada.com

ಪ್ರತಿಭಾನ್ವಿತ ನಟ ಪ್ರಸಾದ್ ವಸಿಷ್ಠ ನಟನೆ “ಕಬಂಧ” ಚಿತ್ರಕ್ಕೆ ಯು/ಎ ಸರ್ಟಿಫೀಕೇಟ್

ಕನ್ನಡ ಚಿತ್ರರಂಗದಲ್ಲಿ ಅನೇಕ ಮಂದಿ ಪ್ರತಿಭಾನ್ವಿತ ನಟರಿದ್ದಾರೆ. ಆ ಸಾಲಿಗೆ ಪ್ರಸಾದ್ ವಸಿಷ್ಠ ಕೂಡ ಒಬ್ಬರ. ಹಲವು ಚಿತ್ರಗಳಲ್ಲಿ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸಿ ಸೈ ಎನಿಸಿಕೊಂಡಿದ್ದ ಕನ್ನಡದ ಅಪ್ಪಟ ಪ್ರತಿಭೆ, ಇದೀಗ ನಾಯಕನಾಗಿ ಕಾಣಿಸಿಕೊಂಡಿದ್ದು ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಅದುವೇ “ ಕಬಂಧ” ಚಿತ್ರದ ಮೂಲಕ

#PriyankaMalladi #PrasadVasista

ಕುಂಜಾರ ಫಿಲಂಸ್ ಲಾಂಛನದಲ್ಲಿ ಸಿದ್ದಗೊಂಡಿರುವ ‘ಕಬಂಧ’ ಚಿತ್ರವನ್ನು ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ‘ಯುಎ’ ಪ್ರಮಾಣಪತ್ರ ನೀಡಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದು ಸತ್ಯನಾಥ್. ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ ರಾಜ್ಯಾದ್ಯಂತ ಭಯ ಹುಟ್ಟಿಸಿತ್ತು. ಇದನ್ನೆ ಬಳಸಿಕೊಂಡು ಒಂದಷ್ಟು ಹಾರರ್ ರೂಪಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ.

#PriyankaMalladi #PrasadVasista

ಜೊತೆಗೆ ವ್ಯವಸಾಯದ ಸಮಸ್ಯೆ ನಮಗೆ ಗೊತ್ತಿಲ್ಲದೆ ತುಂಬಾ ವರ್ಷದಿಂದ ಕಾಡ್ತಾ ಇದೆ. ಅದು ನಮ್ಮನೆವರೆಗೂ, ನಮ್ಮೋಳಗೂ ಹಾಗೂ ದೇಹಕ್ಕೂ ಬಂದಿದೆ. ಈಗಲೂ ಇದರ ಕಡೆ ಗಮನಹರಿಸದೆ ಹೋದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ. ಇಂತಹುದೆ ವಿಚಾರ, ವಿಷಯಗಳನ್ನು ಹೆಕ್ಕಿಕೊಂಡು ಬೋದನೆ ಮಾಡದೆ, ಮನರಂಜನೆ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಒಂದು ಸನ್ನಿವೇಶದಲ್ಲಿ ಮಗುವೊಂದು ‘ನಂಗಾಗಿದ್ದೆ ನಿಂಗಾಗುತ್ತೆ’ ಎಂಬ ಡೈಲಾಗ್ ಕಥೆಗೆ ಪೂರಕವಾಗಿದೆ. ಅದು ಏನೆಂಬುದನ್ನು ಚಿತ್ರಮಂದಿರಕ್ಕೆ ಬಂದರೆ ತಿಳಿಯುತ್ತದಂತೆ.

#PriyankaMalladi #PrasadVasista

ನಾಯಕನಾಗಿ ಪ್ರಸಾದ್‍ವಶಿಷ್ಠ, ನಾಯಕಿಯಾಗಿ ಪ್ರಿಯಾಂಕ ಮಲ್ಲಾಡಿ, ರಿಯಲ್‍ದಲ್ಲಿ ಕೃಷಿಕರಾಗಿರುವ ಕಿಶೋರ್‍ಕುಮಾರ್ ರೀಲ್‍ದಲ್ಲಿ ಅದೇ ಪಾತ್ರವನ್ನು ನಿರ್ವಹಿಸಿರುವುದು ವಿಶೇಷ. ಉಳಿದಂತೆ ಅವಿನಾಶ್, ನಿರ್ದೇಶಕ ಯೋಗರಾಜಭಟ್, ವಂದನ, ವಚನ, ವಿಶಾಲ್, ನಾಗಾರ್ಜುನಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್‍ಸಿದ್ದಿ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ವಿಷ್ಣುಪ್ರಸಾದ್, ಸಂಕಲನ ಸತ್ಯಜಿತ್‍ಸಿದ್ದಕಾಂತ್ ಅವರದಾಗಿದೆ.

#PriyankaMalladi #PrasadVasista

ದಾವಣಗೆರೆ, ತುಮಕೂರು ಮುಂತಾದ ಕಡೆಗಳಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿ, ಶೇಕಡ 80ರಷ್ಟು ರಾತ್ರಿ ವೇಳೆ ಸೆರೆ ಹಿಡಿದಿರುವುದು ವಿಶೇಷ. ಶುಕ್ರ ಫಿಲಿಂಸ್‍ನ ಸೋಮಣ್ಣ ಮುಖಾಂತರ ಸಿನಿಮಾ ಇದೇ ಶುಕ್ರವಾರದಂದು ತೆರೆಗೆ ಬರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin