ಕಣ್ಣಾಮುಚ್ಚೆ ಚಿತ್ರದ ಹಾಡು ಬಿಡುಗಡೆ: ಫೆಬ್ರವರಿಯಲ್ಲಿ ಚಿತ್ರ ತೆರೆಗೆ

“ಕಣ್ಣಾಮುಚ್ಚೆ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಬೂಮ್ ಬೂಮ್ ಹಾಡು ಬಿಡಗಡೆಯಾಗಿದೆ.ಲೋಕಲ್ ಲೋಕಿ ಆಕ್ಷನ್ ಕಟ್ ಹೇಳಿದ್ದು ಮೀನಾ ವೆಂಕಟ್ ನಿರ್ಮಾಣ ಮಾಡಿದ್ದು ಅವರೊಂದಿಗೆ ವೆಂಕಟೇಶ್ ಬಾಬು ಕೈಜೋಡಿಸಿದ್ದಾರೆ.

ನಿರ್ದೇಶಕ ಲೋಕಲ್ ಲೋಕಿ ಮಾತನಾಡಿ ಆಡಿಯೋ ಬಿಡುಗಡೆಯಾಗಿದ್ದು 6 ಹಾಡುಗಳಿಗೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದು ವಿಭಿನ್ನವಾಗಿ ಮೂಡಿ ಬಂದಿದೆ. ಬೆಂಗಳೂರು, ರಾಮನಗರ, ಹೆಸರಘಟ್ಟ ಸೇರಿದಂತೆ ಮತ್ತಿತರ ಕಡೆ 42 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕಡಿಮೆ ಬಜೆಟ್ ನಲ್ಲಿ ಚಿತ್ರಕ್ಕೆ ಏನು ಬೇಕೋ ಅದನ್ನು ನಿರ್ಮಾಪಕರು ನೀಡಿದ್ದಾರೆ.
ಮೊಬೈಲ್ ಅಂಗಡಿ ಯ ಹುಡುಗ ಪ್ರೀತಿ ಮಾಡದ ಹುಡುಗ ಪ್ರೀತಿಯಲ್ಲಿ ಬಿದ್ದಾಗ ಏನೆಲ್ಲಾ ಆಗಲಿದೆ.ಪ್ರೀತಿ ಸಿಗಲಿದೆಯೋ ಇಲ್ಲವೇ ಎನ್ನುವುದು ಚಿತ್ರಚ ತಿರುಳು . ಪೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗುವ ಸಾದ್ಯತೆಗಳಿವೆ ಎಂದು ಹೇಳಿದರು.

ನಾಯಕ ರವಿಕೃಷ್ಣ ಮಾತನಾಡಿ, ಡ್ಯಾನ್ಸರ್ ಆಗಿದ್ದೇ..ಮೊದಲ ಸಿನಿಮಾ. ಗೊತ್ತಿರಲಿಲ್ಲ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರೆ ನಾಯಕಿ ತೇಜಸ್ವಿನಿ ಗೌಡ, ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಸಹಕಾರ ನೀಡಿ ಎಂದರು
ಮೀನಾ ವೆಂಕಟ್ ಮಾತನಾಡಿ, ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣ ಮಾಡಿದೆವು. ವೆಂಕಟ್ ಗೌಡ ಅವರು ಬಿಡುಗಡೆ ಮಾಡಲಿದ್ದಾರೆ ಎಂದರು

ನಿರ್ಮಾಪಕ ವೆಂಕಟ್ ಗೌಡ ಮಾತನಾಡಿ, ಸಿನಿಮಾ ಇಂಡಸ್ಟ್ರಿಗೆ ಬರಲು ರಾಜೇಶ್ ರಾಮನಾಥ್ ಕಾರಣ, ಮದ್ಯಮ ವರ್ಗದ ಹುಡುಗನ ಕಥೆ, ತಾಂತ್ರಿಕವಾಗಿ ಚಿತ್ರ ಚೆನ್ನಾಗಿ ಬಂದಿದೆ. ನಿರ್ಮಾಪಕರ ತಾಯಿ ಮತ್ತು ರಾಜೇಶ್ ರಾಮನಾಥ್ ಹಾಡು ಬಿಡುಗಡೆ ಮಾಡಿದರು.

ಈ ವೇಳೆ ರಾಜೇಶ್ ರಾಮನಾಥ್ ಮಾಹಿತಿ ನೀಡಿ 6 ಹಾಡುಗಳಿವೆ. ಬಹಳ ವರ್ಷದ ನಂತರ ಸಂಗೀತ ನೀಡಿದ್ದೇನೆ. ಟೈಮ್ ಪಾಸ್ ಗೆ ಸಿನಿಮಾ ಮಾಡುತ್ತೇನೆ. ಜೊತೆಗೆ ಸ್ಟುಡಿಯೋನಡೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.

ಸ್ವಸ್ತಿಕ್ ಶಂಕರ್ , ಕಲಾವಿದ ಜಯಸೂರ್ಯ, ಛಾಯಾಗ್ರಾಹಕ ಜಗನ್ ಬಾಬು, ನೃತ್ಯ ನಿರ್ದೇಶಕ ವಿಜಯನಗರ ಮಂಜುಮತ್ತಿತರು ಮಾಹಿತಿ ಹಂಚಿಕೊಂಡರು