Kantara Chapter 1 movie on the verge of earning 700 crores: New trailer released

ಕಾಂತಾರ ಚಾಪ್ಟರ್ 1 ಚಿತ್ರ 700 ಕೋಟಿ ಗಳಿಕೆಯತ್ತ: ಹೊಸ ಟ್ರೈಲರ್ ಬಿಡುಗಡೆ - CineNewsKannada.com

ಕಾಂತಾರ ಚಾಪ್ಟರ್ 1 ಚಿತ್ರ 700 ಕೋಟಿ ಗಳಿಕೆಯತ್ತ: ಹೊಸ ಟ್ರೈಲರ್ ಬಿಡುಗಡೆ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ ಚಾಪ್ಟರ್ 1’ ಈ ವರ್ಷದ ಅತಿದೊಡ್ಡ ಯಶಸ್ಸು ಕಂಡ ಚಿತ್ರಗಳಲ್ಲಿ ಒಂದು. ವಿಶ್ವಾದ್ಯಂತ 700 ಕೋಟಿ ಗಳಿಕೆಯತ್ತ ಸಾಗುತ್ತಿರುವ ನಡುವೆ ಚಿತ್ರತಂಡ “ದೀಪಾವಳಿ ಟ್ರೈಲರ್” ಬಿಡುಗಡೆ ಮಾಡಿ ಶುಭಹಾರೈಸಿದೆ.

ಟ್ರೈಲರ್ ‘ಕಾಂತಾರ’ದ ಲೋಕದ ಮಹತ್ವದ ಝಲಕ್‍ಗಳನ್ನು ತೋರಿಸುತ್ತದೆ. ಹಬ್ಬಕ್ಕೆ ಚಿತ್ರತಂಡ ಕೊಟ್ಟ ವಿಶೇಷ ಕೊಡುಗೆಯಾಗಿದೆ.’ಕಾಂತಾರ: ಚಾಪ್ಟರ್ 1’ ದೀಪಾವಳಿ ಟ್ರೈಲರ್ ಅನ್ನು ಚಿತ್ರದ ದೈವಿಕ ಮತ್ತು ರೋಮಾಂಚಕ ಜಗತ್ತಿಗೆ ಕರೆದೊಯ್ಯುತ್ತದೆ. ಸಿನಿಮಾದಲ್ಲಿರುವ ಮೈ ಜುಮ್ಮೆನಿಸುವ ಕ್ಷಣಗಳನ್ನು ಅನಾವರಣಗೊಳಿಸಿದೆ.

‘ಕಾಂತಾರ: ಚಾಪ್ಟರ್ 1’ ಹೊಂಬಾಳೆ ಫಿಲ್ಮ್ಸ್‍ನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಮತ್ತು ಪ್ರೊಡಕ್ಷನ್ಸ್ ಡಿಸೈನರ್ ವಿನೇಶ್ ಬಾಂಗ್ಲಾ ಅವರಂತಹ ಸೃಜನಾತ್ಮಕ ತಂಡ ಚಿತ್ರದ ಶಕ್ತಿಯುತ ದೃಶ್ಯ ಮತ್ತು ಭಾವನಾತ್ಮಕ ನಿರೂಪಣೆಯನ್ನು ರೂಪಿಸಿದೆ.

ಅಕ್ಟೋಬರ್ 2 ರಂದು ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರವು ತನ್ನ ಸಾಂಸ್ಕೃತಿಕ ಮೂಲವನ್ನು ಗಟ್ಟಿಯಾಗಿ ಉಳಿಸಿಕೊಂಡು, ಭಾಷೆ ಮತ್ತು ಪ್ರದೇಶಗಳನ್ನು ಮೀರಿ ಪ್ರೇಕ್ಷಕರನ್ನು ತಲುಪುತ್ತಿದೆ.

‘ಕಾಂತಾರ: ಚಾಪ್ಟರ್ 1’ ಮೂಲಕ, ಹೊಂಬಾಳೆ ಫಿಲ್ಮ್ಸ್ ಭಾರತೀಯ ಚಿತ್ರರಂಗದ ಎಲ್ಲೆಗಳನ್ನು ವಿಸ್ತರಿಸಲು ಮುಂದುವರೆದಿದ್ದು, ಜಾನಪದ, ನಂಬಿಕೆ ಮತ್ತು ಸಿನಿಮೀಯ ಶ್ರೇಷ್ಠತೆಯನ್ನು ಆಚರಿಸುವ ಒಂದು ತಲ್ಲೀನಗೊಳಿಸುವ ಅನುಭವವನ್ನು ನೀಡುವ ಭರವಸೆ ನೀಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin