ಸಮಾಜಕ್ಕೊಂದು ಎಚ್ಚರಿಕೆ ಕೊಡುವ ಚಿತ್ರ “ ಬೀಟ್ ಪೊಲೀಸ್” _ ನಿರ್ದೇಶಕ ಕಪಿಲ್
ಕನ್ನಡದಲ್ಲಿ ಅಪರೂಪದ ಚಿತ್ರಗಳು ಆಗಾಗ ಬರುತ್ತಿವೆ, ಕೆಲವು ಗಮನ ಸೆಳೆಯುತ್ತಿವೆ, ಕೆಲವು ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿವೆ, ಈ ನಡುವೆ ಸಮಾಜ ಸಮಸ್ಯೆಗಳು ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಚಿತ್ರಗಳೂ ಬರುತ್ತಿವೆ, ಅವುಗಳ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆ “ ಬೀಟ್ ಪೊಲೀಸ್”.

ನಿರ್ದೇಶಕ ಕಪಿಲ್ ಆಕ್ಷನ್ ಕಟ್ ಹೇಳಿ ಲಕ್ಷ್ಮಿನಾರಾಯಣಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಸಾಹಸ ನಿರ್ದೇಶಕ ಕೌರವ್ ವೆಂಕಟೇಶ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದು, ಜೊತೆಗೆ ಭೀಮ ಚಿತ್ರದ ಕಲಾವಿದರಾದ ಪ್ರಿಯಾ ಮತ್ತಯ ಡ್ರಾಗನ್ ಮಂಜು ನಟಿಸುತ್ತಿರುವುದು ಚಿತ್ರಕ್ಕೆ ಮತ್ತಷ್ಟು ಭೀಮ ಬಲ ಬಂದಿದೆ
ನೆಲಮಂಗಲದಲ್ಲಿ ಚಿತ್ರದ ಮಹೂರ್ತವಿತ್ತು, ಈ ವೇಳೆ ಚಿತ್ರತಂಡ ಮಾತಿಗಿಳಿಯಿತು. ಆರಂಭದಲ್ಲಿ ಮಾತನಾಡಿದ ನಿರ್ದೇಶಕ ಎಂ.ಆರ್ ಕಪಿಲ್, 25 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ. ಇದೊಂದು ನೈಜಘಟನೆಗಳ ಸುತ್ತ ಸಾಗುವ ಚಿತ್ರ, ಸಮಾಜಕ್ಕೊಂದು ಎಚ್ಚರಿಕೆ ಸಂದೇಶವನ್ನು ಚಿತ್ರದ ಮೂಲಕ ನೀಡಲಾಗುತ್ತಿದೆ. ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದರು ನಟಿಸುತ್ತಿದ್ದಾರೆ. 4 ಹಾಡು, 6 ಫೈಟ್‍ಗಳು ಇವೆ ಎಂದರು
ಗೂರ್ಕ ಪಾತ್ರದಲ್ಲಿ ಸಾಹಸ ನಿರ್ದೇಶಕ ಕೌರವ್ ವೆಂಕಟೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕ ಲಕ್ಷ್ಮಿ ನಾರಾಯಣಗೌಡ ಕಥೆ ಬರೆಯುವ ಜೊತೆಗೆ ಖಳನಟನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಬೆಂಗಳೂರು ಸುತ್ತಮುತ್ತಲೇ ಚಿತ್ರೀಕರಣ ನಡೆಲಿದೆ. ಹಾಡಿಗೆ ಬೇರೆ ಕಡೆ ಹೋಗುವ ಉದ್ದೇಶವೂ ಇದೆ ಎಂದು ಮಾಹಿತಿ ಹಂಚಿಕೊಂಡರು

ನಿರ್ಮಾಪಕ ಆರ್. ಲಕ್ಷ್ಮಿನಾರಾಯಣ ಗೌಡ್ರು, ನೈಜ ಘಟನೆಯ ಸುತ್ತ ನಡೆವ ಕಥಾಹಂದರ ಚಿತ್ರದಲ್ಲಿದ್ದು, ಪ್ರಿಯಾ, ಡ್ರಾಗನ್ ಮಂಜು, ಸುಚೇಂದ್ರ ಪ್ರಸಾದ್, ಪಾಪ ಪಾಂಡು ಚಿದಾನಂದ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿದ್ದಾರೆ, ಸಮಾಜದಲ್ಲಿ ಹೇಗೆ ಎಚ್ಚರಿಕೆಯಿಂದ ಇರಬೇಕು, ಅಂತ ಹೇಳುವ ಪ್ರಯತ್ನ ಮಾಡಿದ್ದೇವೆ ಎಂದರು

ನಾಯಕನಟ ಕೌರವ ವೆಂಕಟೇಶ್ ಮಾಹಿತಿ ನೀಡಿ ಗೂರ್ಖಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಚಿತ್ರದ ಕಥೆ ನಿರ್ಮಾಪಕರದೇ, ಅದಕ್ಕೆ ಚಿತ್ರರೂಪ ಕೊಟ್ಟಿದ್ದೇವೆ, ನಿರ್ಮಾಪಕರೂ ಸಹ ಖಳನಾಯನಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ, ಮುಂಜಾನೆ ಮಂಜು ಛಾಯಾಗ್ರಹಣ, ರಾಜೇಶ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ, ನಮ್ ಋಷಿ ಚಿತ್ರದ 4 ಹಾಡುಗಳನ್ನು ಬರೆದಿದ್ದಾರೆ ಎಂದು ಹೇಳಿದರು
ನಟ ಡ್ರಾಗನ್ ಮಂಜು ಮಾತನಾಡಿ ಹತ್ತನೇ ಚಿತ್ರ, ಎಂದಿನಂತೆ ಖಳನ ಪಾತ್ರವಾದರೂ, ಹಂತದಲ್ಲಿ ಆತ ಚೇಂಜ್ ಆಗಬಹುದು ಎಂದರು
ನಾಯಕಿ ಪ್ರಿಯಾ ಮಾತನಾಡಿ ಚಿತ್ರದಲ್ಲಿ ಭಾರ್ಗವಿ ಎಂಬ ಡಿಸಿಪಿ ಪಾತ್ರ, ನಿರ್ಮಾಪಕರು ಈ ಹಿಂದೆಯೇ ನನಗೆ ಕೇಳಿದ್ದರು ಆಗಿರಲಿಲ್ಲ. ಅಲ್ಲದೆ ಈ ಹಿಂದೆ ಕೌರವ ವೆಂಕಟೇಶ್ ಅವರ ಜತೆ ಕೆಲಸ ಮಾಡಿದ್ದೆ ಇಂದಿನ ಎಜುಕೇಶನ್ ವ್ಯವಸ್ಥೆಯ ಸಾಧಕ ಬಾಧಕಗಳ ಬಗ್ಗೆ ಹೆಣೆಯಲಾಗಿರುವ ವಿಭಿನ್ನ ಕಥಾವಸ್ತು ಚಿತ್ರದಲ್ಲಿದೆ ಎಂದು ಹೇಳಿದರು

