ಕರುನಾಡ ಕಣ್ಮಣಿ ಚಿತ್ರ ಜನವರಿ 18 ರಂದು ಬಿಡುಗಡೆ

ಭವ್ಯಶ್ರೀ ಫಿಲಂ ಲಾಂಛನದಲ್ಲಿ ಕು.ಅನುರಾಧಾ ಎಲ್. ಮಹೇಶ್ ನಿರ್ಮಿಸಿರುವ, ಎಲ್.ಮಹೇಶ್ ಕೋಲಾರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಚಿತ್ರ ‘ಕರುನಾಡ ಕಣ್ಮಣಿ’ ಇದೆ ಜನವರಿ 18ರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದ್ದರು.

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಿ ಎಬ ಸಂದೇಶ ಈ ಚಿತ್ರದಲ್ಲಿದೆ. ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನಿಗಾಗಿ ಏನೆಲ್ಲಾ ಮಾಡುತ್ತಾನೆ, ಅದೇ ನಟ ತನ್ನ ಅಭಿಮಾನಿಗೋಸ್ಕರ ಏನು ಮಾಡುತ್ತಾನೆಂದು ಈ ಚಿತ್ರದಲ್ಲಿ ಹೇಳಲಾಗಿದೆ.

ಹರ್ಷ ಕಾಗೊಡು ಅವರ ಸಂಗೀತ, ಶಿವಕುಮಾರ್ ಅವರ ಹಿನ್ನೆಲೆ ಸಂಗೀತ, ಗೌರಿಶಂಕರ ಮತ್ತು ಶೇಖರರಾಜ್ ಸಂಭಾಷಣೆ, ಶ್ರೀತೇಜ್ ಅಭಿನವ ಶ್ರೇಯಸ್ ಗೌರಿಶಂಕರ್ ಸಾಹಿತ್ಯ, ಎಸ್.ರೂಪೇಶ್ ಮೊದಲಿಯಾರ್ ಮತ್ತು ಮಾದೇಶ್ ಅವರ ಛಾಯಾಗ್ರಹಣ, ರವಿತೇಜ ಅವರ ಸಂಕಲನ ಈ ಚಿತ್ರಕ್ಕಿದೆ.

ಈ ಚಿತ್ರದಲ್ಲಿ ಗೌರಿಶಂಕರ್, ಕವಿತಾ, ಕು.ಅನುರಾಧಾ, ಕು.ವರಲಕ್ಷ್ಮಿ, ಕು.ಭವ್ಯಶ್ರೀ, ತುಳಸಿ, ಶೇಖರರಾಜ್, ವರುಣ್ ಕುಮಾರ್, ಶಿವಕುಮಾರ ಗೌಡ, ಅಭಿನವ ಶ್ರೇಯಸ್, ಕಬಾಬ್ ಮಂಜ, ಅನಂತು ತೇರಳ್ಳಿ, ರವಿ, ಸುಮಂತ್ ಹಾಗೂ ಇತರರು ನಟಿಸಿದ್ದಾರೆ.