Kashima selected as the heroine of the film "Nee Nange Allava"
“ನೀ ನಂಗೆ ಅಲ್ಲವಾ” ಚಿತ್ರದ ನಾಯಕಿಯಾಗಿ ಕಾಶಿಮಾ ಆಯ್ಕೆ

ನಟ ಶ್ರೀಮುರಳಿ ಹಾಗೂ ವಿದ್ಯಾ ಶ್ರೀಮುರಳಿ ಅವರು ಅರ್ಪಿಸುತ್ತಿರುವ ಮತ್ತು ಈ ಹಿಂದೆ ಎಫ್-3 ಪ್ರೊಡಕ್ಷನ್ಸ್ ಲಾಂಛನದಲ್ಲಿ “ಮ್ಯಾಟ್ನಿ” ಚಿತ್ರ ನಿರ್ಮಿಸಿದ್ದ ಎಸ್ ಪಾರ್ವತಿ ಗೌಡ, ಪವನ್ ಪರಮಶಿವಂ ಹಾಗೂ ಮನೋಹರ್ ಕಾಂಪಲ್ಲಿ ನಿರ್ಮಾಣದಲ್ಲಿ ಹಾಗೂ ಮನೋಜ್ ಪಿ ನಡಲುಮನೆ ನಿರ್ದೇಶನದಲ್ಲಿ “ನೀ ನಂಗೆ ಅಲ್ಲವಾ” ಚಿತ್ರ ಮೂಡಿಬರುತ್ತಿದೆ.

ರಾಹುಲ್ ಅರ್ಕಾಟ್ ಎಂಬ ಹೊಸ ನಟ ಚಿತ್ರದ ಮೂಲಕ ನಾಯಕಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನಾಯಕಿಯ ಹೆಸರನ್ನು ಸದ್ಯದಲ್ಲೇ ತಿಳಿಸುವುದಾಗಿ ಹೇಳಿದ್ದ ಚಿತ್ರತಂಡ, ಈಗ ಚಿತ್ರದ ನಾಯಕಿಯ ಬಗ್ಗೆ ಮಾಹಿತಿ ನೀಡಿದೆ.

ಬೆಡಗಿ ಕಾಶಿಮಾ “ನೀ ನಂಗೆ ಅಲ್ಲವಾ” ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಕಾಶಿಮಾ ಅವರಿಗೆ ಚಿತ್ರತಂಡ ಸ್ವಾಗತ ಹೇಳಿದೆ.
ಸೂರಜ್ ಜೋಯಿಸ್ ಚಿತ್ರಕ್ಕೆ ಸಂಗೀತ ನಿರ್ದೇಶನ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದ್ದು ಸಂಕ್ರಾಂತಿ ನಂತರ ಚಿತ್ರೀಕರಣ ಆರಂಭವಾಗಲಿದೆ.
