“ಕಟ್ಲೆ” ಚಿತ್ರದ ಟ್ರೇಲರ್, ಹಾಡು ಬಿಡುಗಡೆ : ಚಿತ್ರ ಬಿಡುಗಡೆಗೆ ಸಿದ್ದ
ಹಾಸ್ಯ ಕಲಾವಿದ ಕೆಂಪೇಗೌಡ ಮೊದಲಬಾರಿ ನಾಯಕನಾಗಿ ನಟಿಸಿರುವ ’ಕಟ್ಲೆ’* ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿದೆ.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಯಣ್, ಶಾಸಕ ರವಿಕುಮಾರ್‌ಗೌಡ ಬಿಗ್‌ಬಾಸ್ ಪ್ರಥಮ್, ಕಾಕ್ರೋಚ್ ಸುಧಿ ಸೇರಿದಂತೆ ಹಲವು ಭಾಗಿಯಾಗಿದ್ದರು.ಶ್ರೀವಿಧಾ ಅಭಿನಂದನ್ ನಿರ್ದೇಶನ ಮಾಡಿದ್ದಾರೆ. ಭರತ್‌ಗೌಡ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ನಿರ್ದೇಶಕ ಶ್ರೀವಿಧಾ ಅಭಿನಂಧನ್ ಮಾತನಾಡಿ ಕಟ್ಲೆಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅದರದೇ ಅರ್ಥ ಇದೆ. ಸಿನಿಮಾಕ್ಕೆ ಅವಧಿ ಎಂದು ಹೇಳಲಾಗಿದೆ. ಪ್ರತಿಯೊಂದು ಜೀವ ರಾಶಿಗೆ ಕಾಲ ಅನ್ನೋದು ಇರುತ್ತೆ. ಸರಿಯಾಗಿ ಆಗಲಿಲ್ಲ ಅಂದ್ರೆ, ಕಾಲಚಕ್ರದಲ್ಲಿ ಸ್ಥಗಿತಗೊಳ್ಳುತ್ತದೆ. ಇದರ ಆಧಾರದ ಮೇಲೆ ಚಿತ್ರ ಸಾಗುತ್ತದೆ. ಪೂರ್ಣ ತಿಳಿಯಲು ನೀವುಗಳು ಟಾಕೀಸ್‌ಗೆ ಬರಬೇಕು. ಕಟ್ಲೆ ಅಳಿಸುತ್ತೆ, ನಗಿಸುತ್ತೆ, ಕಾಡುತ್ತೆ, ಕಾಡಿಸುತ್ತೆ. ಕ್ಲೈಮಾಕ್ಸ್‌ದಲ್ಲಿ ಸಂದೇಶವೂ ಇದೆ ಎಂದರು
ನಟ ಕೆಂಪೇಗೌಡ ಮಾತನಾಡಿ ಹದಿನೆಂಟು ವರ್ಷದ ಸಿನಿಪಯಣದಲ್ಲಿ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಈಗ ನಾಯಕನಾಗಿದ್ದೇನೆ. ನಿರ್ಮಾಪಕರು ಕಾಮಿಡಿ ಕಲಾವಿದನನ್ನು ಹೀರೋ ಪಟ್ಟ ಕಟ್ಟಿ, ದೊಡ್ಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಾರರ್,ಥ್ರಿಲ್ಲರ್, ಸೈಕಲಾಜಿಕಲ್ ಎಲ್ಲವು ಇದ್ದರೂ ಸಿನಿಮಾ ಇದಾಗಿರುವುದಿಲ್ಲ. ಫುಲ್ ಮೀಲ್ಸ್‌ನಂತೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೊನೆಯ ದೃಶ್ಯಗಳು ನೋಡುಗರ ಕಣ್ಣನ್ನು ಒದ್ದೆ ಮಾಡಿಸುತ್ತದೆ ಎಂದು ಹೇಳಿದರು.

ಸನ್ಮಿತ ಮತ್ತು ಅಮೃತ ನಾಯಕಿಯರು. ಮತ್ತೊಂದು ಮುಖ್ಯ ಪಾತ್ರದಲ್ಲಿ ಹರ್ಷಿಕಾ ಪೂರ್ಣಚ್ಚಾ, ಟೆನ್ನಿಸ್‌ಕೃಷ್ಣ, ತಬಲನಾಣಿ, ಹರೀಶ್‌ರಾಜ್, ಗಣೇಶ್‌ರಾವ್ ಕೇಸರಕರ್,ಪವನ್‌ಕುಮಾರ್, ಬಿರಾದಾರ್, ಎಂ.ಎಸ್.ಉಮೇಶ್,ಯತಿರಾಜ್, ಕರಿಸುಬ್ಬು ಮುಂತಾದವರು ನಟಿಸಿದ್ದಾರೆ.
ಬೆಂಗಳೂರು, ಸಿರ್ಸಿ, ಮಲೆನಾಡು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಾ.ವಿ.ನಾಗೇಂದ್ರಪ್ರಸಾದ್, ಭರ್ಜರಿ ಚೇತನ್‌ಕುಮಾರ್ ಹಾಗೂ ಕಿನ್ನಾಳ್‌ರಾಜ್ ಸಾಹಿತ್ಯದ ಗೀತೆಗಳಿಗೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

ಅನಿರುದ್ ಛಾಯಾಗ್ರಹಣ, ಚಲುವಮೂರ್ತಿ ಸಂಕಲನ, ಅಲ್ಟೆಮೇಟ್‌ಶಿವು ಸಾಹಸ, ನೃತ್ಯ ಭಜರಂಗಿಮೋಹನ್ ಅವರದಾಗಿದೆ.


