Chowkidar Movie Review : ತಂದೆ -ಮಗನ ಬಾಂಧವ್ಯದ ಕಥನ ಚೌಕಿದಾರ್
ಚಿತ್ರ ; ಚೌಕಿದಾರ್
ನಿರ್ದೇಶನ : ಚಂದ್ರಶೇಖರ್ ಬಂಡಿಯಪ್ಪ
ತಾರಾಗಣ: ಪೃಥ್ವಿ ಅಂಬಾರ್, ಧನ್ಯ ರಾಮ್ ಕುಮಾರ್, ಸಾಯಿ ಕುಮಾರ್, ಶ್ವೇತಾ ವಿನೋಧಿನಿ, ಸುಧಾರಾಣಿ, ಗಿಲ್ಲಿ ನಟ, ಮುನಿ, ಧರ್ಮ ಮತ್ತಿತರರು
ರೇಟಿಂಗ್ : *** 3.5/ 5
ತಂದೆ- ಮಗನ ಬಾಂಧವ್ಯವನ್ನು ಅನಾವರಣ ಮಾಡುವ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಮುಂದೆಯೂ ಬರಲಿವೆ. ಆದರೆ ಪ್ರತಿ ಬಾರಿಯೂ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಕಥಾ ವಸ್ತು ಬೇರೆ ಬೇರೆಯಾಗಿರುತ್ತದೆ. ಇದೀಗ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ವಿಭಿನ್ನ. ಕಥೆಯನ್ನು ಮುಂದಿಟ್ಟುಕೊಂಡು ಸಿನಿಮಾವನ್ನು ಚೌಕಿದಾರ್ ಮೂಲಕ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
ಅಪ್ಪ ಎಂದರೆ ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಯಜಮಾನ ಚೌಕಿದಾರ್, ಮಕ್ಕಳನ್ನು ಅತಿಯಾಗಿ ಮುದ್ದಿಸಿದರೆ ಪ್ರೀತಿ ಮಾಡಿದರೆ ಏನೆಲ್ಲಾ ಆಗಲಿದೆ ಎನ್ನುವುದನ್ನು ಚೌಕಿದಾರ್ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ತಂದೆ – ಮಗನ ಬಾಂಧವ್ಯ ಸುತ್ತಾ ಸಾಗುವ ಕಥೆ ಇಡೀ ಚಿತ್ರದ ತಿರುಳು.
ಬಣ್ಣದ ಬದುಕಿನಲ್ಲಿ ಸುದೀರ್ಘ 50 ವರ್ಷಗಳಿಂದ ಥರೇವಾರಿ ಸಿನಿಮಾ ಮಾಡಿರುವ ಹಿರಿಯ ನಟ ಸಾಯಿ ಕುಮಾರ್ , ಮಗನನ್ನು ಅತಿಯಾಗಿ ಪ್ರೀತಿ ಮಾಡುವ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ನಟ ಪೃಥ್ವಿ ಅಂಬಾರ್ , ಜವಾಬ್ದಾರಿ ಇಲ್ಲದ ಮಗನ ಪಾತ್ರದಲ್ಲಿ ನಾಯಕ ನಟನಿಗಿರುವ ಇಮೇಜ್ ಬದಿಗಿಟ್ಟು ಸಿನಿಮಾದಲ್ಲಿ ನಟಿಸಿದ್ದಾರೆ.
ಏಕ ಮಾತ್ರ ಪುತ್ರ ಸಿದ್ದಾರ್ಥ್ ( ಪೃಥ್ವಿ ಅಂಬಾರ್) ಅನ್ನು ಅತಿ ಪ್ರೀತಿಯಿಂದ ಬೆಳೆಸಿದ ಅಪ್ಪ ಪ್ರಕಾಶ್ ಗೌಡ ( ಸಾಯಿ ಕುಮಾರ್) ತನಗೆ ಸಿಗದ ಸೌಲಭ್ಯಗಳು ಮಗನಿಗೆ ಸಿಗಬೇಕು ಎನ್ನುವ ಅತಿಯಾದ ಕಾಳಜಿ. ಕಕ್ಕುಲತೆ, ಮಗನಿಗೆ ಬೈಕ್ ಕೊಡಿಸಿದರೂ “ಮಗನೇ ಸರ್ವಸ್ವ” ಎಂದು ಹಾಕಿಸಿದಾತ. ಅಪ್ಪ- ಅಮ್ಮನ ಬಳಿ ಸಿಗರೇಟು ಮದ್ಯ ತರಿಸುವಷ್ಟು ಸಲುಗೆ.
ಮಕ್ಕಳನ್ನು ಅತಿಯಾಗ ಮುದ್ದಿಸಿದರೆ ಪ್ರೀತಿಯಿಂದ ನಡೆಸಿಕೊಂಡರೆ ಏನೆಲ್ಲಾ ಆಗಲಿದೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.
ನಟ ಪೃಥ್ವಿ ಅಂಬಾರ್ ನಟನೆಯಿಂದಲೇ ಗಮನ ಸೆಳೆದಿದ್ದಾರೆ. ಏಕತಾನತೆಯ ಪಾತ್ರ ಮಾಡುವ ಬದಲು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಜೊತೆಗೆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ.
ಚೌಕಿದಾರ ಸಿನಿಮಾ ಅಪ್ಪ- ಮಗನ ಸುತ್ತಲೇ ಸುತ್ತಿದೆ.ಅಪ್ಪನ ಪ್ರೀತಿ, ಮಗನ ಜವಾಬ್ದಾರಿ ಇಲ್ಲದ ನಡೆದ ಬಾಂಧವ್ಯ ಅನಾವರಣ ಮಾಡಿದೆ. ಹೀಗಾಗಿ ನಟ ಸಾಯಿ ಕುಮಾರ್ ಪಾತ್ರಕ್ಕೆ ಜೀವ ತಂಬಿದ್ದಾರೆ.
ನಟಿ ಧನ್ಯ ರಾಮ್ ಕುಮಾರ್ ಸಿಕ್ಕ ಅವಕಾಶದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ತಾಯಿ ಪಾತ್ರದಲ್ಲಿ ಶ್ವೇತಾ ವಿನೋಧಿನಿ , ಉಳಿದಂತೆ ಸುಧಾರಾಣಿ,ನಟರಾದ ಮುನಿ , ಧರ್ಮ ಮತ್ತು ಗಿಲ್ಲಿ ನಟ ಸಿಕ್ಕ ಅವಕಾಶದಲ್ಲಿ ಅದಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ.ಹಾಡು ಪೈಟುಗಳನ್ನು ಅನವಶ್ಯಕವಾಗಿ ತುರುಕಿದ್ದಾರೆ ಅನ್ನಿಸಬಹುದು..
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

