ಪ್ರತಿಷ್ಠಿತ ಗೋವಾ ಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ‘ಕೆರೆಬೇಟೆ” ಆಯ್ಕೆ
ಕೇಂದ್ರ ಸರ್ಕಾರದ ಪ್ರತಿಷ್ಠಿತ “ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸ’ ನವಂಬರ್ 20ರಿಂದ 28ರವರೆಗೆ ಗೋವಾದ ರಾಜದಾನಿ ಪಣಜಿಯಲ್ಲಿ ನಡೆಯಲಿದೆ. ಈ ಚಿತ್ರೋತ್ಸಕ್ಕೆ ಕನ್ನಡದ ಯುವ ಪ್ರತಿಭಾನ್ವಿತ ನಟ, ನಿರ್ಮಾಪಕ ಗೌರಿಶಂಕರ್ ಅವರ “ಕೆರೆಬೇಟೆ” ಚಿತ್ರ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ತಾಳಿದವನು ಬಾಳಿಯಾನು ಎನ್ನುವ ಗಾದೆಗೆ ಪೂರಕ ಎನ್ನುವಂತೆ ಒಳ್ಳೆಯ ಚಿತ್ರಗಳಿಗೆ, ಕಂಟೆಂಟ್‍ಗಳಿಗೆ ಸದಾ ಮನ್ನಣೆ ಮತ್ತು ಗೌರವ ಇದ್ದೇ ಇರುತ್ತದೆ.,ಅದು ತಡವಾಗಿಯಾದರೂ ಬರುತ್ತದೆ ಎನ್ನುವುದಕ್ಕೆ ಗೌರಿಶಂಕರ್ ನಟನೆಯ “ಕೆರೆಬೇಟೆ”ಚಿತ್ರವೂ ಸಾಕ್ಷಿ.

ದೇಶಾದ್ಯಂತ ವಿವಿಧ ಭಾಷೆಯ 400ಕ್ಕೂ ಚಿತ್ರಗಳ ಪೈಪೋಟಿಯಲ್ಲಿ ಕೇವಲ 20 ಚಿತ್ರಗಳು ಮಾತ್ರ “ಭಾರತೀಯ ಪನೋರಮಾ” ವಿಭಾಗದಲ್ಲಿ ಆಯ್ಕೆಯಾಗಿವೆ. ಅದರಲ್ಲಿಯೂ “ಕೆರೆಬೇಟೆ” ಚಿತ್ರವೂ ಒಂದು ಎನ್ನುವುದು ಹೆಗ್ಗಳಿಕೆ ವಿಷಯ. ಚಿತ್ರದ ಕಥಾವಸ್ತು, ಚಿತ್ರದ ಸೊಗಡು ಸೇರಿದಂತೆ ಚಿತ್ರಪ್ರದರ್ಶನಕ್ಕೆ ಆಯ್ಕೆಯಾಗುವ ಎಲ್ಲಾ ತಾಕತ್ತು ಮತ್ತು ಸಾಮಥ್ಯವಿದ್ದ ಚಿತ್ರ ಇದು.
ಈ ವಿಭಾಗದಲ್ಲಿ ಸಾಗರ್ ಪುರಾಣಿಕ್ ನಿರ್ದೇಶನದ “ವೆಂಕ್ಯಾ” ಭಾರತೀಯ ಪನೋರಾಮಗೆ ಆಯ್ಕೆಯಾದ ಮತ್ತೊಂದು ಚಿತ್ರ. ಕನ್ನಡದ ಎರಡು ಚಿತ್ರಗಳು ಪ್ರದರ್ಶನಕ್ಕೆ ಆಯಾಗಿವೆ

ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಪ್ರದರ್ಶನಕ್ಕೆ ಆಯ್ಕೆಯಾಗಿರುವ “ಕೆರೆಬೇಟೆ” ಚಿತ್ರದ ಕುರಿತು ನಟ, ನಿರ್ಮಾಪಕ ಗೌರಿಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಕೆರೆಬೇಟೆ ಚಿತ್ರ ಗೋವಾ ಚಿತ್ರೋತ್ಸವದಲ್ಲಿ ಆಯ್ಕೆಯಾಗಿರುವುದು ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡಿಗರಿಗೆ ಇದೊಂದು ಹೆಮ್ಮೆಯ ವಿಚಾರ ಎಂದಿದ್ದಾರೆ

ಕೆರೆಬೇಟೆ ಚಿತ್ರ ಮಲೆನಾಡಿನ ಮೀನುಬೇಟೆಯ ಕುರಿತಾದ ಚಿತ್ರ. ಪ್ರೀತಿ, ಕ್ರೌರ್ಯ ಸೇರಿದಂತೆ ಮಲೆನಾಡ ಭಾಗದ ಸೊಗಡನ್ನು ಬಿಂಬಿಸುವ ಚಿತ್ರದಲ್ಲಿ ಗೌರಿಶಂಕರ್ ನಾಯಕನಾಗುವ ಜೊತೆಗೆ ಚಿತ್ರಕ್ಕೆ ನಿರ್ಮಾಪಕರೂ ಹೌದು., ಹೊಸ ಪ್ರತಿಭೆ ಬಿಂಧು ಶಿವರಾಮ್ ನಾಯಕಿ. ಒಂದಷ್ಟು ಹಳಬರ ಜೊತೆಗೆ ಬಹುತೇಕ ಹೊಸಬರೇ ಇದ್ದ ಚಿತ್ರವನ್ನು ಬಿ.ರಾಜ್‍ಗುರು ನಿರ್ದೇಶನ ಮಾಡಿದ್ದಾರೆ.

