“ಮ್ಯಾಕ್ಸ್” ಚಿತ್ರದ ಯಶಸ್ಸಿನ ಬಳಿಕ ಮತ್ತೆ ಜೊತೆಯಾದ ಕಿಚ್ಚ ಸುದೀಪ್- ವಿಜಯ್ ಕಾರ್ತಿಕೇಯ
“ಮ್ಯಾಕ್ಸ್” ಚಿತ್ರ ಸೂಪರ್ ಹಿಟ್ ಬಳಿಕ ಮತ್ತೊಮ್ಮೆ ಅಭಿನಯ ಚಕ್ರವರ್ತಿ , ನಿರ್ದೇಶಕ ವಿಜಯ್ ಕಾರ್ತಿಕೇಯ ಜೊತೆ ಕೈ ಜೋಡಿಸಿದ್ದಾರೆ. ಈ ಜೋಡಿ “ಮ್ಯಾಕ್ಸ್ 2”ಗಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಸುದೀಪ್ ಹಾಗೂ ವಿಜಯ್ ಮ್ಯಾಕ್ಸ್ 2 ಪಕ್ಕಕ್ಕಿಟ್ಟು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ಬಿಲ್ಲ ರಂಗ ಭಾಷಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಇದೀಗ ಹೊಸ ಸಿನಿಮಾ ಘೋಷಿಸಿದ್ದಾರೆ.ಇದು ಸುದೀಪ್ ಅವರ 47ನೇ ಚಿತ್ರವಾಗಿದೆ
ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ 47 ನೇ ಸಿನಿಮಾ ರಿವೀಲ್ ಮಾಡಲಾಗಿದೆ. ಜುಲೈ 7 ರಿಂದ ಚಿತ್ರೀಕರಣ ಆರಂ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. 47ನೇ ಚಿತ್ರವನ್ನು ತಮಿಳಿನ ಬಿಗ್ ಪ್ರೊಡಕ್ಷನ್ಸ್ ಹೌಸ್ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ವಿಷ್ಣುವರ್ಧನ್ ಜೊತೆ ಸತ್ಯಜ್ಯೋತಿ ಚಿತ್ರ ನಿರ್ಮಾಣ ಮಾಡಿದ್ದ ಸತ್ಯಜ್ಯೋತಿ ಫಿಲಂಸ್ ಈಗ 39 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರನಿರ್ಮಾಣಕ್ಕೆ ಕೈ ಹಾಕಿದೆ.

ನಟ ಸುದೀಪ್ ಮಾತನಾಡಿ ಮ್ಯಾಕ್ಸ್ ನಂತರ ನಾವು ಮತ್ತೆ ಒಂದಾಗಿದ್ದೇವೆ. ಸದ್ಯಕ್ಕೆ ಮ್ಯಾಕ್ಸ್ 2 ಸಿನಿಮಾ ಕೈ ಬಿಟ್ಟಿದ್ದೀವಿ. ಈ ವರ್ಷ ಎರಡು ಸಿನಿಮಾ ಮಾಡುತ್ತೇವೆ. ಬಿಲ್ಲರಂಗ ಬಾಷ ಸಿನಿಮಾ ಈ ವರ್ಷ ರಿಲೀಸ್ ಆಗಲ್ಲ. ಆದರೆ ಈ ಸಿನಿಮಾ ಇದೇ ವರ್ಷ ಡಿಸೆಂಬರ್ 25 ಕ್ಕೆ ರಿಲೀಸ್ ಮಾಡುತ್ತೇವೆ. ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಶುರು ಆಗಲಿದೆ ಎಂದು ಹೇಳಿದ್ದಾರೆ.

