ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಕೆವಿಎನ್ ಪ್ರೊಡಕ್ಷನ್ಸ್ : ಇಳಯದಳಪತಿ ವಿಜಯ್ ಚಿತ್ರಕ್ಕೆ ಹಣ ಹೂಡಿಕೆ
ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಿಗ್ ಬಜೆಟ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ KVN Productions ಸಂಸ್ಥೆ ಇದೀಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದೆ.
ಮಾಸ್ಟರ್ ” ಹಿರೋ ಇಳಯದಳಪತಿ ವಿಜಯ್ ಅವರ 69ನೇ ಚಿತ್ರಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆಯ ನಿರ್ಮಾಣ ಸಂಸ್ಥೆ ರುವಾರಿ ಕೆ ವೆಂಕಟ್ ನಾರಾಯಣ ಬಂಡವಾಳ ಹಾಕಲು ಮುಂದಾಗಿದ್ದಾರೆ
ಬರೋಬ್ಬರಿ 500ಕೋಟಿಗೂ ಅಧಿಕ ಬಜೆಟ್ ನಲ್ಲಿ ಚಿತ್ರ ತಯಾರಿಯಾಗುತ್ತಿದ್ದು ವಿಜಯ್ ಸಿನಿ ಕರಿಯರ್ ನ ಕೊನೆಯ ಸಿನಿಮಾ ಇದಾಗಿದೆ. ಈ ಸಿನಿಮಾ ಬಳಿಕ ವಿಜಯ್ ದಳಪತಿ ರಾಜಕೀಯ ರಂಗಕ್ಕೆ ಕಾಲಿರಿಸಲಿದೆ. ಈಗಾಗಲೇ ಚುನಾವಣಾ ಆಯೋಗ ಕೂಡ ವಿಜಯ್ ಅವರ ರಾಜಕೀಯ ಪಕ್ಷಕ್ಕೆ ಅನುಮತಿ ನೀಡಿದೆ.
ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರವಿರೋ ಕಥೆ ಎಂದು ಹೇಳಲಾಗ್ತಿದೆ. ವಿಜಯ್ ರಾಜಕೀಯ ಭವಿಷ್ಯಕ್ಕೆ ಈ ಚಿತ್ರ ಭವ್ಯ ಮೆಟ್ಟಿಲಾಗಲಿದೆ ಎಂದು ಹೇಳಲಾಗಿದೆ. ತಮಿಳಿನ ಖ್ಯಾತ ನಿರ್ದೇಶಕ ಹೆಚ್.ವಿನೋದ್ ನಿರ್ದೇಶಿಸಲಿರುವ ಚಿತ್ರ ಇದಾಗಿದೆ.
ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಐದನೇ ಚಿತ್ರ ಇದಾಗಿದ್ದು ಯಶ್ ಟಾಕ್ಸಿಕ್ ಗೂ ಹಣ ಹಾಕುತ್ತಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಇದೀಗ ತಮಿಳು ಚಿತ್ರರಂಗದಲ್ಲಿ ಕಮಾಲು ಮಾಡಲು ಮುಂದಾಗಿದ್ದಾರೆ.