ಲವ್ ಮಾಕ್ಟೇಲ್ – 3 ಚಿತ್ರ ಏಪ್ರಿಲ್ 10 ರಂದು ಬಿಡುಗಡೆ
ನಟ ಡಾರ್ಲಿಂಗ್ ಕೃಷ್ಣ “ಲವ್ ಮಾಕ್ಟೇಲ್” ಸಿನಿಮಾ ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡವರು.ಮೊದಲ ಪ್ರಯತ್ನದಲ್ಲಿ ಗೆಲವು ಪಡೆಯಲು ಕಸರತ್ತು ನಡೆಸಿ ಕೊನೆಗೂ ಗೆಲುವಿನ ಸಿಹಿ ಕಂಡವರು.

ಮೊದಲ ಹೆಜ್ಜೆಯಲ್ಲಿ ನಿರ್ದೇಶಕರಾಗಿ ಯಶಸ್ಸು ಪಡೆದ ನಟ ಡಾರ್ಲಿಂಗ್ ಕೃಷ್ಣ, ಆ ಬಳಿಕ ಲವ್ ಮಾಕ್ಟೇಕ್ ಸೀಕ್ವೆಲ್ ಮಾಡಿ ಸೈ ಎನಿಸಿಕೊಂಡವರು. ಇದೀಗ ಅದರ ಮುಂದುವರಿದ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದು ಲವ್ ಮಾಕ್ಟೇಲ್ – 3 ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೂರನೇ ಆವೃತ್ತಿಯ ಕುತೂಹಲ ಕೆರಳಿಸಿದ್ದಸರೆ. ಹೊಸ ವರ್ಷದ ಉಡುಗೊರೆ ಎನ್ನುವಂತೆ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಡಾಲಿಂಗ್ ಕೃಷ್ಣ ಪ್ರಕಟಿಸಿದ್ದು” ಲವ್ ಮಾಕ್ಟೇಲ್ 3″ ಏಪ್ರಿಲ್ 10 ರಂದು ತೆರೆಗೆ ಬರಲು ಸಜ್ಜಾಗಿದೆ.
2020 ರಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ್ದ ಲವ್ ಮಾಕ್ಟೇಲ್ ಚಿತ್ರ ತೆರೆಗಂಡಿತ್ತು. ನವಿರು ಪ್ರೇಮದೊಂದಿಗೆ ಹೊಸೆದುಕೊಂಡಿದ್ದ ಸೂಕ್ಷ್ಮ ಕಥನದ ಮೂಲಕ ಗೆದ್ದ ನಂತರ, ಲವ್ ಮಾಕ್ಟೇಲ್೨ ಚಿತ್ರವನ್ನು ಕೃಷ್ಣ ರೂಪಿಸಿದ್ದರು. ಇದೀಗ ತೆರೆಗಾಣಲು ಸಜ್ಜಾಗಿರುವ ಲವ್ ಮಾಕ್ಟೇಲ್೩ ಈ ಹಿಂದಿನ ಎರಡು ಆವೃತ್ತಿಗಳಿಗಿಂತಲೂ ಭಿನ್ನವಾಗಿರಲಿದೆ ಎನ್ನುವ ಮಾಹಿತಿ ನೀಡಿದ್ದಾರೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ.
ಕಥೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ಲವ್ ಮಾಕ್ಟೇಲ್೩ ಹೊಸ ಅನುಭವ ನೀಡಲಿದೆ ಎನ್ನುವ ಭರವಸೆ ಕೃಷ್ಣ ಅವರದ್ದು. ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕ್ರಿಸ್ಮಿ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ ಚಿತ್ರಕ್ಕಿದೆ.
ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ, ಮುಂತಾದವರ ತಾರಾಗಣವಿದೆ. ಇದೀಗ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ, ಬೇಸಿಗೆ ರಜೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 10 ರಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

