"Triveni Sangama" is the first time that all three serials have been shown on television.

ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮೂರೂ ಧಾರಾವಾಹಿಗಳ “ತ್ರಿವೇಣಿ ಸಂಗಮ”. - CineNewsKannada.com

ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮೂರೂ ಧಾರಾವಾಹಿಗಳ “ತ್ರಿವೇಣಿ ಸಂಗಮ”.

ಕನ್ನಡಿಗರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿ ಅನೇಕ ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಸಾಮಾನ್ಯವಾಗಿ ಎರಡು ಧಾರಾವಾಹಿಗಳು ಒಂದಾಗುವುದನ್ನು ‘ಮಹಾಸಂಗಮ’ ಎಂದು ಹೇಳಲಾಗುತ್ತದೆ. ಆದರೆ ಕಿರುತೆರೆಯಲ್ಲಿ ಮೂರೂ ಧಾರಾವಾಹಿಗಳನ್ನು ಸೇರಿಸಿ “ತ್ರಿವೇಣಿ ಸಂಗಮ” ಮಾಡುತ್ತಿರುವುದು ಇದೇ ಮೊದಲು. ಈ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.

‘ನೀ ಇರಲು ಜೊತೆಯಲ್ಲಿ’ ಧಾರಾವಾಹಿಯ ಕಥೆಯಲ್ಲಿ ಇದೀಗ 5 ವರ್ಷಗಳೇ ಕಳೆದಿದೆ, ಕಾಲಚಕ್ರ ಬದಲಾಗಿದೆ. ನಾಯಕ ಕೃಷ್ಣ ತನ್ನ ದುಡಿಮೆಯಿಂದ ಶ್ರೀಮಂತನಾಗಿದ್ದು, ರಚನಾಳ ನೆನಪಿನಲ್ಲಿ ಬದುಕುತ್ತಿದ್ದಾನೆ. ಕೃಷ್ಣನ ಈ ಪರಿಸ್ಥಿತಿ ನೋಡಿ ಮಗನಿಗೆ ಇನ್ನೊಂದು ಮದುವೆ ಮಾಡಬೇಕೆಂಬ ಹಂಬಲ ಹೆತ್ತವರದ್ದು.
.
ಮತ್ತೊಂದೆಡೆ ಕಥೆಗೆ ಹೊಸ ನಾಯಕಿಯಾಗಿ ಎಂಟ್ರಿ ಕೊಟ್ಟಿರೋ ರಾಧಾ, ಮಧ್ಯಮ ಕುಟುಂಬದಲ್ಲಿ ಬೆಳೆದಿರೊಳು, ತನ್ನ ಜೀವನದಲ್ಲಿ ನಡೆದಿರುವ ಒಂದು ಘಟನೆಯಿಂದಾಗಿ ನೋಡಲು ಬರುವ ಹುಡುಗರು ಈಕೆಯನ್ನು ಮದುವೆಯಾಗಲು ನಿರಾಕರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಊರ್ಮಿಳಾ ರಚಿಸುವ ತಂತ್ರಗಾರಿಕೆಯಿಂದಾಗಿ ಕೃಷ್ಣ- ರಾಧಾರ ಮದುವೆ ನಿಶ್ಚಯವಾಗುತ್ತದೆ. ಇಷ್ಟವಿಲ್ಲದಿದ್ದರು ಹೆತ್ತವರಿಗಾಗಿ ಮದುವೆಯಾಗಲು ಸಿದ್ಧನಾಗುತ್ತಾನೆ ಕೃಷ್ಣ.

ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ ‘ಗೌರಿಶಂಕರ’ ಹಾಗು ‘ಶಾರದೆ’ ಧಾರಾವಾಹಿ ಕುಟುಂಬ. ಕಥೆಯಲ್ಲಿ ರೋಚಕ ತಿರುವುಗಳಿದ್ದು ಇವರ ಆಗಮನ ಹೇಗೆ ಆಗಲಿದೆ ಎಂಬುದನ್ನು ನೀವು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಗೌರಿ-ಶಂಕರರ ಸಾರಥ್ಯದಲ್ಲಿ, ಸಿದ್ದು- ಶಾರದಾ ಆತಿಥ್ಯದಲ್ಲಿ ಅದ್ದೂರಿಯಾಗಿ ನಡೀತಿದೆ ರಾಧಾ -ಕೃಷ್ಣ ಕಲ್ಯಾಣ.

ಗೌರಿಶಂಕರ, ನೀ ಇರಲು ಜೊತೆಯಲ್ಲಿ ಹಾಗು ಶಾರದೆ “ತ್ರಿವೇಣಿ ಸಂಗಮ”.. ಇಂದಿನಿಂದ ಸಂಜೆ 6 ರಿಂದ 7.30 ರ ವರೆಗೆ, ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೆ ವೀಕ್ಷಿಸಬಹುದಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin