Love You', a film made with artificial intelligence, is ready for release

ಕೃತಕ ಬುದ್ದಿಮತ್ತೆಯಲ್ಲಿ ತೆರೆಗೆ ಸಿದ್ದವಾದ `ಲವ್ ಯು’ ಚಿತ್ರ - CineNewsKannada.com

ಕೃತಕ ಬುದ್ದಿಮತ್ತೆಯಲ್ಲಿ ತೆರೆಗೆ ಸಿದ್ದವಾದ `ಲವ್ ಯು’ ಚಿತ್ರ

ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ಮೈಲಿಗಲ್ಲಿಗೆ `ಲವ್ ಯು’ ಚಿತ್ರ ಭಾಜನವಾಗಿದೆ, ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ವಿಷಯವೇ ಕೇಳಿ ಬರುತ್ತಿದೆ.ಈ ಹಿನ್ನೆಲೆಯಲ್ಲಿ ಕೃತಕ ಬುದ್ದಿಮತ್ತೆ ಬಳಿಸಿ ಚಿತ್ರ ನಿರ್ಮಾಣ ಮಾಡಲಾಗಿದೆ.. ಈಗಾಗಲೇ ಸಿನಿಮಾಗಳ ಹಲವು ವಿಭಾಗಗಳಲ್ಲಿ, ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಎ. ಐ ಬಳಕೆ ನಿಧಾನವಾಗಿ ಹೆಚ್ಚಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಚಿತ್ರತಂಡ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಮೂಲಕವೇ ತಯಾರಾದ `ಲವ್ ಯು’ ಎಂಬ ಹೆಸರಿನ ಮೊದಲ ಸಿನಿಮಾ ತೆರೆಗೆ ತರುವ ತಯಾರಿಯಲ್ಲಿದೆ.

ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ ಎಸ್. ನರಸಿಂಹ ಮೂರ್ತಿ ಮಾಹಿತಿ ನೀಡಿ ಸಿನಿಮಾದ ನಿರ್ದೇಶಕರು, ನಿರ್ಮಾಪಕರನ್ನು ಹೊರತುಪಡಿಸಿದರೆ, ಮತ್ತೆಲ್ಲ ಕೆಲಸಗಳನ್ನೂ ಎ. ಐ ತಂತ್ರಜ್ಞಾನವೇ ಮಾಡಿರುವುದು ಇದರ ಮೊದಲ ವಿಶೇಷತೆ. ಇದು ವಿಶ್ವದಲ್ಲಿಯೇ ಸಂಪೂರ್ಣ ಎ. ಐ ನಿರ್ಮಿತ ಮೊದಲ ಸಿನಿಮಾ’. `ಲವ್ ಯು’ ಸಿನಿಮಾದಲ್ಲಿ ಬರುವ ಪ್ರತಿ ಪಾತ್ರಗಳು, ಅವುಗಳ ಸಂಭಾಷಣೆ, ಸಂಗೀತ ಸಂಯೋಜನೆ, ಛಾಯಾಗ್ರಹಣ, ಸೌಂಡ್ ಡಿಸೈನ್, ಹಿನ್ನೆಲೆಯಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂ ಎ. ಐ ತಂತ್ರಜ್ಞಾನ ಬಳಕೆ ಮಾಡಲಾಗಿದೆ.ನೂತನ್ ಎಂಬ ಎ. ಐ ಇಂಜಿನಿಯರ್ ತಮ್ಮ ತಾಂತ್ರಿಕ ನಾಯಕತ್ವ ಮತ್ತು ಸುಂದರ್ ರಾಜ್ ಗುಂಡೂರಾವ್ ಯೋಜನೆಯ ನೇತೃತ್ವದಲ್ಲಿ ಈಸಿನಿಮಾ ಸೃಜನಶೀಲವಾಗಿ ಮೂಡಿಬಂದಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

`ಇದು ಕೇವಲ ಸಿನಿಮಾ ಅಲ್ಲ, ಇದೊಂದು ಕ್ರಾಂತಿ. ಕಥೆ ಹೇಳುವಿಕೆ ಮತ್ತು ತಂತ್ರಜ್ಞಾನ ಸರಾಗವಾಗಿ ಬೆರೆಯುವ ಹೊಸ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ. ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಇಂಥದ್ದೊಂದು ಬದಲಾವಣೆಗೆ ಉದಾಹರಣೆಯಾಗಿದೆ. ಭವಿಷ್ಯದಲ್ಲಿ ಈ ಬದಲಾವಣೆಗೆ ಹೊಂದಿಕೊಂಡು ನಮ್ಮ ಚಿತ್ರರಂಗ ಉಳಿದ ಚಿತ್ರರಂಗಗಳನ್ನು ಮುನ್ನಡೆಸುತ್ತಿದೆ ಎಂಬ ನಂಬಿಕೆ ನಮಗಿದೆ. ಇಂಥದ್ದೊಂದು ಕೆಲಸ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.

ಅಂದಹಾಗೆ, 95 ನಿಮಿಷಗಳ ಲವ್ ಯು' ಎ. ಐ ಸಿನಿಮಾದಲ್ಲಿ ಬರೋಬ್ಬರಿ 12 ಹಾಡುಗಳಿವೆ. ಅವೆಲ್ಲವೂ ಮೂಲಕ ಸಂಯೋಜಿಸಲ್ಪಟ್ಟು, ಮುದ್ರಣಗೊಂಡಿವೆ.ಲವ್ ಯು’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾವನ್ನು ಇತ್ತೀಚೆಗೆ ವೀಕ್ಷಿಸಿದ ಸೆನ್ಸಾರ್ ಮಂಡಳಿ ಲವ್ ಯು' ಎ. ಐ ಸಿನಿಮಾಕ್ಕೆಯು/ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ

ಮೇ ಅಥವಾ ಜೂನ್ ವೇಳೆಗೆ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಒಟ್ಟಾರೆ ಜಗತ್ತಿನ ಮೊದಲ ಸಂಪೂರ್ಣ ಎ. ಐ ನಿರ್ಮಿತ ಸಿನಿಮಾ ಎಂಬ ಹೆಗ್ಗಳಿಕೆ ಹೆಚ್ಚುತ್ತಿರುವ `ಲವ್ ಯು’ ತೆರೆಮೇಲೆ ಹೇಗಿರಲಿದೆ ಎನ್ನುವುದು ಚಿತ್ರಮಂದಿರಕ್ಕೆ ಬಂದ ನಂತರ ತಿಳಿಯಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin