“ಲವ್ ರೆಡ್ಡಿ” ಲವರ್ಸ್ ಶೋ ನೋಡಿ ದುನಿಯಾ ವಿಜಯ್ ಎದುರು ಕಣ್ಣೀರಿಟ್ಟ ಪ್ರೇಮಿಗಳು

ಅವಿಭಜಿತ ಕೋಲಾರ ಜಿಲ್ಲೆಯ ಗ್ರಾಮೀಣ ಸೊಗಡಿನ ಮನಮಿಡಿಯುವ ಕತೆಯ ಚಿತ್ರ “ಲವ್ ರೆಡ್ಡಿ” ನಾಳೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ಅಂಜನ್ ರಾಮಚಂದ್ರ ಮತ್ತು ಶ್ರಾವಣಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿರುವ ಚಿತ್ರಕ್ಕೆ ದುನಿಯಾ ವಿಜಯ್ ಬೆಂಬಲವಾಗಿ ನಿಂತಿರುವುದು ಚಿತ್ರತಂಡಕ್ಕೆ ಆನೆಬಲ ಬಂದಿದೆ.

ಚಿತ್ರದ ಪೂರ್ವಬಾವಿ ಪ್ರದರ್ಶನದ ಹಿನ್ನೆಲೆಯಲ್ಲಿ ಲವ್ ರೆಡ್ಡಿ ಚಿತ್ರ ನೋಡಿ ನಟ ದುನಿಯಾವಿಜಯ್ ಮುಂದೆ ಯುವ ಜೋಡಿಗಳು ಕಣ್ಣೀರು ಹಾಕಿದ್ದಾರೆ. ಈ ಮೂಲಕ ಚಿತ್ರ ಮನಮುಟ್ಟಲಿದೆ ಎನ್ನುವ ಆಶಾಭಾವನೆ ಮೂಡಿಸಿದೆ
ವಿಶೇಷ ಪ್ರರ್ದನಕ್ಕೆ ಆಗಮಿಸಿದ್ದ ಪ್ರೇಮಿಗಳು ,ಫ್ಯಾಮಿಲಿಗಳು ಸಿನಿಮಾ ನೋಡಿ ಅಕ್ಷರಃ ಭಾವುಕರಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.. ಲವ್ ರೆಡ್ಡಿ ಚಿತ್ರವನ್ನ ಕನ್ನಡಕ್ಕೆ ಪ್ರೆಸೆಂಟ್ ಮಾಡ್ತಿರೋ ದುನಿಯಾ ವಿಜಯ್ ಯವರು ವೇದಿಕೆ ಬಂದಾಗ ಯುವ ಜೋಡಿಯೊಂದು ವಿಜಯ್ ರನ್ನ ತಬ್ಬಿಕೊಂಡು ಕಣ್ಣೀರಿಟ್ಟ ಘಟನೆ ನಡೆಯಿತು..
ಇಷ್ಟೇ ಅಲ್ಲದೇ ಚಿತ್ರದಲ್ಲಿ ನಾಯಕಿಯ ತಂದೆ ಪಾತ್ರದಾರಿಯ ಕಾಲಿಗೆ ಬಿದ್ದು ಹೀರೋನ ತಬ್ಬಕೊಂಡು ಭಾವುಕರಾಗಿ ಪ್ರೇಕ್ಷಕರು ಮಾತನಾಡಿದ್ದು ವಿಶೇಷವಾಗಿತ್ತು… ಈ ಮೂಲಕ ಲವ್ ರೆಡ್ಡಿ ಸಿನಿಮಾ ರಿಲೀಸ್ಗೂ ಮೊದ್ಲೇ ಗೆಲುವನ್ನ ಕಂಡಿದೆ ಅಂದ್ರೆ ತಪ್ಪಾಗಲಾರದು..

ಅಂಜನ್ ರಾಮಚಂದ್ರ, ಶ್ರಾವಣಿ ನಾಯಕ ನಾಯಕಿಯಾಗಿ, ಸ್ಮರಣ್ ರೆಡ್ಡಿ ನಿರ್ದೇಶನದ ಲವ್ ರೆಡ್ಡಿ ಈಗಾಗ್ಲೇ ಹಲವು ವಿಶೇಷ ವಿಚಾರಗಳಿಂದ ಕನ್ನಡ ಸಿನಿಪ್ರಿಯರ ಎದೆ ತಟ್ಟಿದೆ… ಹೊಂಬಾಳೆ ಫಿಲಂಸ್ ವಿತರಣೆಯಲ್ಲಿ ಲವ್ ರೆಡ್ಡಿ ನಾಳೆ ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ