"Maggiputsaka" movie in celebration of the fiftieth anniversary

ಐವತ್ತರ ಸಂಭ್ರಮದಲ್ಲಿ “ಮಗ್ಗಿಪುಸ್ತಕ” ಚಿತ್ರ - CineNewsKannada.com

ಐವತ್ತರ ಸಂಭ್ರಮದಲ್ಲಿ “ಮಗ್ಗಿಪುಸ್ತಕ” ಚಿತ್ರ

ಹರಿವರಾಸನಂ ತಾವೇ ಬರೆದ “ಅವನಿ” ಕಾದಂಬರಿಯನ್ನಾಧರಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ ಚಿತ್ರ ಮಗ್ಗಿ ಪುಸ್ತಕ ಇದೀಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನಡೆದಿದೆ, ಬಡ ಕುಟುಂಬದ ಅವನಿ ಎಂಬ ಹೆಣ್ಣು ಮಗಳ ಸುತ್ತ ನಡೆಯುವ ಘಟನೆಯ ಚಿತ್ರ ಇದು

ಚಿತ್ರದಲ್ಲಿ ಕೆಲಸ ಮಾಡಿ ಗೆಲುವಿಗೆ ಕಾರಣರಾದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಮರಣಫಲಕ ನೀಡಿ ಗೌರವಿಸಲಾಯಿತು, 4 ಆಯಾಮಗಳಲ್ಲಿ ನಡೆಯುವ ಕಥೆ ಒಳಗೊಂಡ ಈ ಚಿತ್ರದಲ್ಲಿ ಮಕ್ಕಳ ಜತೆಗೆ ಪೋಷಕರಿಗೂ ಉತ್ತಮ ಸಂದೇಶವಿದೆ.

ನಿರ್ದೇಶಕ ಹರಿವರಾಸನಂ ಪ್ರಥಮ ಚಿತ್ರವೇ 50 ದಿನಗಳನ್ನು ಪೂರೈಸಿದೆ. ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯ
ವಿದ್ಯಾರ್ಥಿಗಳು, ಪೋಷಕರು ಚಿತ್ರ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಸದ್ಯ ಚಿತ್ರ ಉತ್ತರ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿನ್ನಸ್ವಾಮಿ ಫಿಲಂಸ್ ಅಡಿ ಎತಿರಾಜ್ ಚಿತ್ರ ನಿರ್ಮಿಸಿದ್ದಾರೆ.

ಮಗ್ಗಿ ಪುಸ್ತಕವೆಂಬುದು ಬದುಕಿನ ಲೆಕ್ಕಾಚಾರವಾಗಿದ್ದು, ಜೀವನವೇ ಒಂದು ಮಗ್ಗಿ ಪುಸ್ತಕವಿದ್ದಂತೆ, ಇದರಲ್ಲಿ ಒಳ್ಳೆಯದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಅಜ್ಞಾನವನ್ನು ಗುಣಿಸಬೇಕು, ಜ್ಞಾನವನ್ನು ಭಾಗಿಸಬೇಕು ಎಂಬ ಸಂದೇಶವಿದೆ, ನಾಲ್ಕು ಆಯಾಮಗಳಲ್ಲಿ ನಡೆಯುವ ಹೈಪರ್ ಲಿಂಕ್ ಕಥೆಯಿದು.

ಹರಿವರಾಸನಂ ಮಾತನಾಡಿ ಇಡೀ ಚಿತ್ರತಂಡದ ಪರಿಶ್ರಮವೇ ಈ ಯಶಸ್ಸಿಗೆ ಕಾರಣ. ಚಿತ್ರ 100 ದಿನಗಳನ್ನೂ ಪೂರೈಸಬೇಕೆಂಬ ಆಸೆಯಿದೆ, ಚಿತ್ರವೀಗ 13 ಥೇಟರ್‍ಗಳಲ್ಲಿ ರನ್ ಆಗುತ್ತಿದೆ. ಮುಂದಿನ ವಾರದಿಂದ ರಜೆ ಪ್ರಾರಂಭವಾಗುತ್ತಿದ್ದು, ಮತ್ತಷ್ಟು ಥೇಟರ್‍ಗಳು ಸೇರ್ಪಡೆಯಾಗುತ್ತಿವೆ ಎಂದು ಹೇಳಿದರು.

ನಿರ್ಮಾಪಕ ಎತಿರಾಜ್ ಮಾತನಾಡಿ ಚಿತ್ರ 50 ದಿನ ಓಡಿದ್ದೇ ಖುಷಿಯ ವಿಚಾರ, ಈ ಯಶಸ್ಸಿಗೆ ಸಹಕರಿಸಿದ ಎಲ್ಲ
ತಂತ್ರಜ್ಞರು, ಕಲಾವಿದರಿಗೆ ನನ್ನ ಕೃತಜ್ಞತೆಗಳು ಎಂದು ಹೇಳಿದರು,

ಸಂಗೀತ ನಿರ್ದೇಶಕ ಯಶಸ್ ನಾಚಪ್ಪ ಮಾತನಾಡಿ 50 ದಿನ ಅನ್ನೋದೇ ವಿಶೇಷ. ನನ್ನ ಮೊದಲ ಚಿತ್ರವೇ 50 ದಿನ ಕಂಡಿದೆ. 7 ಹಾಡುಗಳನ್ನು 17 ಜನ ಸಿಂಗರ್ಸ್ ಹಾಡಿದ್ದಾರೆ ಎಂದು ಹೇಳಿದರು.

ಛಾಯಾಗ್ರಾಹಕ ನಂದಕುಮಾರ್ ಮಾತನಾಡಿ ಈ ಯಶಸ್ಸಿ ಕಾರಣ ನಮ್ಮ ನಿರ್ದೇಶಕರು. ಅವರು ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ಈಗಿನ ದಿನಗಳಲ್ಲಿ 50 ದಿನ ಓಡೋದು ತುಂಬಾ ಕಮ್ಮಿ, ನನ್ನ ಇಷ್ಟು ದಿನಗಳ ಜರ್ನಿಯಲ್ಲಿ 50 ದಿನ ಕಂಡ ಮೊದಲ ಚಿತ್ರವಿದು ಎಂದು ಸಂತಸ ಎಂದರು

ಕನ್ನಡ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಕಂಭದ ರಂಗಯ್ಯ, ನವೀನ್ ಸಜ್ಜು, ಇಂದು ನಾಗರಾಜ್, ಗುರುರಾಜ್ ಹೊಸಕೋಟೆ, ಸೈಂಧವಿ, ವೈಕಂ ವಿಜಯಲಕ್ಷ್ಮಿ ಹಾಗೂ ರವೀಂದ್ರ ಸೊರಗಾವಿ ಸೇರಿದಂತೆ 17 ಜನ ಹಾಡಿದ್ದಾರೆ.

ಈ ಚಿತ್ರವನ್ನು ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ರಿಲೀಸ್ ಮಾಡಿದ್ದರು. ಅವರ ಸಂಸ್ಥೆಯಿಂದ ಬಿಡುಗಡೆಯಾದ ಮೊದಲ 2 ಚಿತ್ರಗಳೂ 50 ದಿನ ಪೂರೈಸಿರುವುದು ಸಂತಸದ ವಿಷಯ, ಈ ಕುರಿತು ಮಾತನಾಡಿದ ಮುನೀಂದ್ರ ಈ ಹಿಂದೆ ನಾವೇ ರಿಲೀಸ್ ಮಾಡಿದ ಕಂಗ್ರಾಚುಲೇಶನ್ಸ್ ಬ್ರದರ್ ಕೂಡ 50 ದಿನ ಪ್ರದರ್ಶನ ಕಂಡಿತ್ತು, ಇದು ಎರಡನೇ ಚಿತ್ರ ಎಂದರು,

ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಂಜನ್ ಕಾಸರಗೋಡು, ರಾನ್ವಿ ಶೇಖರ್, ಮಹೇಶ್, ಮೋಹಿತ್, ಮೈಸೂರು ರಮಾನಂದ್, ಮೂಗು ಸುರೇಶ್, ಪಂಕಜ, ಅಗಸ್ತ್ಯ ಅಲ್ಲದೆ ಸಂಗೀತ ನಿರ್ದೇಶಕರು, ಸಂಕಲನಕಾರರು ಹಾಗೂ ಛಾಯಾಗ್ರಾಹಕರಿಗೂ ವೇದಿಕೆಯಲ್ಲಿ ಸ್ಮರಣಫಲಕ ವಿತರಿಸಿ ಗೌರವಿಸಲಾಯಿತು, ಮೇಘಶ್ರೀ, ರಕ್ಷಾ ಗೌಡಮಿಮಿಕ್ರಿ ಗೋಪಿ, ಚಂದ್ರಪ್ರಭ, ರಘು ರಾಮನಕೊಪ್ಪ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin