“ಮತ್ಸ್ಯಗಂಧ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಸಚಿವ ಮಂಕಾಳ್ ವೈದ್ಯ
ಮತ್ಸ್ಯಗಂಧ ಚಿತ್ರ ಆರಂಭದಿಂದಲೂ ಕಥೆ ಸೇರಿದಂತೆ ವಿವಿದ ವಿಷಯಗಳಿಂದ ಗಮನ ಸೆಳೆದಿದೆ. ಇದೀಗ ಚಿತ್ರದ ಟ್ರೈಲರ್ ಅನ್ನು ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿರುವುದು ಮತ್ತಷ್ಟು ಆನೆ ಬಲ ಬಂದಂತಾಗಿದೆ.
ಚಿತ್ರರಂಗದ ಖ್ಯಾತ ತಾರೆಯರಾದ ದುನಿಯಾ ವಿಜಯ್, ಸೂರಿ, ಯೋಗರಾಜ್ ಭಟ್ ತರುಣ್ ಸುಧೀರ್, ಉದಯ್ ಮೆಹ್ತಾ, ಶಶಾಂಕ್, ಕೆ.ಪಿ ಶ್ರೀಕಾಂತ್, ಚೇತನ್ ಸೇರಿದಂತೆ ಮತ್ತಿತರು ಚಿತ್ರಕ್ಕೆ ಶುಭ ಹಾರೈಸಿದ್ದಾರೆ
ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಮಂಕಾಳ್ ವೈದ್ಯ. ಫಸ್ಟ್ ಡೇ ಫಸ್ಟ್ ಶೋ ನೋಡೋ ಭರವಸೆ ನೀಡಿದ್ದಾರೆ.ತಮ್ಮದೇ ಜಿಲ್ಲೆಯ ಕಥೆ ಸಿನ್ಮಾ ಕಂಟೆಂಟ್ ನೋಡಿ ಭಾವುಕರಾಗಿದ್ದಾರೆ. ಚಿತ್ರ ಇದೇ ತಿಂಗಳ 23 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಇಂಡಸ್ಟ್ರಿಯ ದೊಡ್ಡ ಮೈಂಡ್ಸ್ ಈ ಕಂಟೆಂಟ್ ನೋಡಿ ಕೊಂಡಾಡ್ತಿದ್ದಾರೆ. ಮತ್ಸ್ಯಗಂಧ ಕಂಟೆಂಟ್ ಎಲ್ಲಾ ರೀತಿಯಲ್ಲೂ ನಿರೀಕ್ಷೆ ಹುಟ್ಟಿಸ್ತಿದೆ.
ಕನ್ನಡ ಪಿಚ್ಚರ್ ಅರ್ಪಿಸುವ ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್ ನಿರ್ಮಾಣದಲ್ಲಿ ಮತ್ಸ್ಯಗಂಧ ತಯಾರಾಗಿದೆ. ಈ ಚಿತ್ರವನ್ನ ದೇವರಾಜ್ ಪೂಜಾರಿ ನಿರ್ದೇಶಿಸಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ.
ಪ್ರವೀಣ್ ಛಾಯಾಗ್ರಹಣ ಚಿತ್ರಕ್ಕಿದ್ದು, ಪೃಥ್ವಿ ಅಂಬರ್, ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾಬಳ ಈ ಚಿತ್ರದಲ್ಲಿದೆ. ಫೆಬ್ರವರಿ 23ಕ್ಕೆ ಮತ್ಸ್ಯಗಂಧ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ. ಶಾಲಿನಿ ಆಟ್ರ್ಸ್ ಜಾಕ್ ಮಂಜು ವಿತರಣೆ ಮಾಡ್ತಿದ್ದಾರೆ.