Mohakataare Ramya-director Yogaraj Bhat combination likely to make a film again

ಮೋಹಕತಾರೆ ರಮ್ಯಾ- ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ ಮತ್ತೊಮ್ಮೆ ಸಿನಿಮಾ ಸಾಧ್ಯತೆ - CineNewsKannada.com

ಮೋಹಕತಾರೆ ರಮ್ಯಾ- ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ ಮತ್ತೊಮ್ಮೆ ಸಿನಿಮಾ ಸಾಧ್ಯತೆ

ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ಸದ್ಯ ಸಿನಿಮಾ ರಾಜಕೀಯದಿಂದ ಬಿಡುವು ಪಡೆದಿದ್ದಾರೆ. ಹಾಗೊಮ್ಮೆ ಹೀಗೊಮ್ಮೆ ಸಿನಿಮಾ ಕಾರ್ಯಕ್ರಮದ ಮೂಲಕ ಭಾಗವಹಿಸುವ ಮೂಲಕ ಮರಳಿ ಚಿತ್ರರಂಗಕ್ಕೆ ಬರುತ್ತಾರಾ ಎನ್ನುವ ಕುತೂಹಲ ಮೂಡಿಸುತ್ತಿದ್ದಾರೆ.

ಮುಂಗಾರು ಮಳೆ ಚಿತ್ರದ ಬಳಿಕ ಯೋಗರಾಜ್ ಭಟ್ ಮತ್ತು ಇ.ಕೃಷ್ಣಪ್ಪ ಕಾಂಬಿನೇಷನ್‍ನಲ್ಲಿ ಮೂಡಿ ಬಂದಿರುವ ” ಮನದ ಕಡಲು ” ಚಿತ್ರದ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಹಿಂದೆ ಕಿಚ್ಚ ಸುದೀಪ್ ಮತ್ತು ರಮ್ಯಾ ನಟಿಸಿದ್ದ ರಂಗ ಎಸ್ ಎಸ್ ಎಲ್ ಸಿ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದರು. ಮೋಹಕತಾರೆ ರಮ್ಯಾ ಮತ್ತು ಯೋಗರಾಜ ಭಟ್ ಮತ್ತೊಮ್ಮೆ ಜೊತೆಯಾಗಿರುವುದು ಸಿನಿಮಾ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ

ಮೋಹಕ ತಾರೆ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಕರುನಾಡ ಪ್ರೇಕ್ಷಕ ವಲಯದಲ್ಲಿದೆ. ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಕಂಗೋಳಿಸೋದು ಫೈನಲ್ ಆಗಿತ್ತು, ಆದ್ರೆ ಸ್ಪಷ್ಟ ಉತ್ತರ ಸಿಗ್ಲಿಲ್ಲ. ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ಮೋಹಕ ತಾರೆ ಮಿನುಗಿ ಮಿಂಚೋದು ಪಕ್ಕಾ ಆದ್ರೂ ಅಚ್ಚರಿಯಿಲ್ಲ.

ಈಗ ಮತ್ತೊಮ್ಮೆ ರಮ್ಯಾ-ಯೋಗರಾಜ್ ಭಟ್ ಕಾಂಬಿನೇಷನ್ ಒಟ್ಟಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ. ‘ಮನದ ಕಡಲು’ ನಿರ್ಮಾಪಕರುಗಳಾದ ಇ.ಕೃಷ್ಣಪ್ಪ ಮತ್ತು ಜಿ.ಗಂಗಾಧರ್ ಅವರೇ ರಮ್ಯಾ -ಯೋಗರಾಜ್ ಭಟ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲು ಆಸೆ ವ್ಯಕ್ತಪಡಿಸಿದ್ದಾರೆ.

ರಮ್ಯಾ ಒಡೆತನದ ಆಪಲ್ ಬಾಕ್ಸ್ ಸಹಯೋಗದಲ್ಲಿ ಇ.ಕೆ.ಎಂಟರ್ ಟೈನರ್ ನಡಿ ಈ ಸಿನಿಮಾ ಸಿದ್ಧವಾಗಲಿದೆ. ಈ ಬಗ್ಗೆ ರಮ್ಯಾ ಅವರೆ ಆಸಕ್ತಿದಾಯಕವಾಗಿ ಮಾತನಾಡಿದ್ದಾರೆ. ‘ಮನದ ಕಡಲು’ ಸಿನಿಮಾದ ನೀಲಿ ನೀಲಿ ಕಡಲು ಎಂಬುವ ಹಾಡನ್ನ ಬಿಡುಗಡೆ ಮಾಡುವ ಸಂದರ್ಭದಲ್ಲಿ ರಮ್ಯಾ ಈ ಮಾತನ್ನ ಆಡಿದ್ದಾರೆ.

ಮಾರ್ಚ್ 28 ರಂದು ‘ಮನದ ಕಡಲು’ ಸಿನಿಮಾ ಬಿಡುಗಡೆಯಾದ ನಂತರ ರಮ್ಯಾ- ಯೋಗರಾಜ್ ಭಟ್ ಕಾಂಬೋ ಸಿನಿಮಾದ ಆರಂಭವಾಗುವ ಸಾಧ್ಯತೆ ಇದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin