ಟಾಲಿವುಡ್ ನಿಂದ ಕಾಲಿವುಡ್‍ಗೆ ಸ್ಯಾಂಡಲ್‍ವುಡ್ ಸಲಗ ವಿಜಯ್ ಕುಮಾರ್

ಕನ್ನಡ ಚಿತ್ರರಂಗದಲ್ಲಿ ವಿಜಯ್ ಕುಮಾರ್ ನಡೆದು ಬಂದ ಹಾದಿ ಬಲು ರೋಚಕ. ಸ್ಟಂಟ್ ಮ್ಯಾನ್ ನಿಂದ ಹಿಡಿದು ನಾಯಕ, ನಿರ್ದೇಶಕ, ನಿರ್ಮಾಪಕರಾಗುವ ತನಕ ಬೆಳದು ಬಂದ ಹಾದಿ ಚಿತ್ರರಂಗದ ಹಲವು ಮಂದಿ ಮಾದರಿ.

ಟಾಲಿವುಡ್‍ನಲ್ಲಿ ಮೊದಲ ಬಾರಿ ತೆಲುಗಿನ ಹಿರಿಯ ನಟ ಸಮರಸಿಂಹ ಬಾಲಯ್ಯ ಎದುರು ಖಳನಟನಾಗಿ ಅಬ್ಬರಿಸಿದ್ದ ಸ್ಯಾಂಡಲ್‍ವುಡ್ ಸಲಗ ವಿಜಯ್ ಕುಮಾರ್, ಇದೀಗ ತಮಿಳು ಚಿತ್ರರಂಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಎದುರು ಮೊದಲ ಬಾರಿಗೆ ಖಳನಟನಾಗಿ ಅಬ್ಬರಿಸಿ ಬಬ್ಬಿರಿಯಲು ಸಜ್ಜಾಗಿದೆ
ನಯನತಾರ ಅಭಿನಯದ “ಮೂಕುತಿ ಅಮ್ಮನ್ 2” ಚಿತ್ರದಲ್ಲಿ ಸಲಗ ವಿಜಯ್ ಕುಮಾರ್ ಲೇಡಿ ಸೂಪರ್ ಸ್ಟಾರ್ ಎದುರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಬಾಲಯ್ಯನ ಎದುರು ವಿಲನ್ ಆಗಿ ಅಬ್ಬರಿಸಿ ಸೈಮಾ ಮುಡಿಗೇರಿಸಿಕೊಂಡಿದ್ದ ವಿಜಯ್ ಕುಮಾರ್ ಗೆ ಈಮೂಲಕ ಮತ್ತೊಂದು ದೊಡ್ಡ ಅವಕಾಶ ಬಂದಿದೆ.

ಕನ್ನಡದಲ್ಲಿ ಲ್ಯಾಂಡ್ ಲಾರ್ಡ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ವಿಜಯ್ ಕುಮಾರ್ ಜೊತೆಗೆ ತಮ್ಮದೇ ನಿರ್ದೇಶನದ ಸಿಟಿ ಲೈಟ್ಸ್ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಮೂಕುತಿ ಅಮ್ಮನ್ 2 ಚಿತ್ರದಲ್ಲಿ ಅಭಿನಯಿಸ್ತಿದ್ದಾರೆ. ಈ ಮೂಲಕ ಪರಭಾಷೆಗೂ ಸೈ ಎನಿಸಿಕೊಳ್ಳಲು ಮುಂದಾಗಿದ್ದಾರೆ.
