Review : “ಇಂಟರ್ ವೆಲ್” ಮೂವರು ಗಣೇಶಂದಿರ ಗಲಾಟೆ ಹೂರಣದ ಕಥನ

ಚಿತ್ರ: “ಇಂಟರ್ ವೆಲ್”
ನಿರ್ದೇಶನ: ಭರತ್
ತಾರಾಗಣ : ಶಶಿ ರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರಾ ರಾವ್, ಸಹನಾ ಆರಾಧ್ಯ, ಸಮೀಕ್ಷಾ ಮತ್ತಿತರರು
ರೇಟಿಂಗ್ : *** 3/5
ಯುವ ಜನರ ಪಾಡು ಪಡಪಾಟಲು ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ತೆರೆಗೆ ತಂದಿರುವ ಯೂಥ್ ಫುಲ್ ಚಿತ್ರ ” ಇಂಟರ್ ವೆಲ್”. ಊರಿನ ಉಂಡಾಡಿ ಗುಂಡನಂತಿರುವ ಹುಡುಗರ ಆಟ,ಪಾಟ,ಕೀಟಲೆಯನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ದೇಶಕ ಭರತ್ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಹಳ್ಳಿಯ ವಾತಾವರಣ, ತಂಟೆ, ತಕರಾರು, ಗ್ರಾಮ ಪಂಚಾಯಿತಿ ಚುನಾವಣೆ ಸೇರಿದಂತೆ ಮತ್ತಿತರ ವಿಷಯಗಳನ್ನು ಸೇರಿಸಿ ಚಿತ್ರವನ್ನು ತೆರೆಗೆ ಕಟ್ಟಿಕೊಡಲಾಗಿದೆ. ಮೂವರು ಗಣೇಶಂದಿರ ಗಲಾಟೆ, ಬದುಕು ಕಟ್ಟಿಕೊಳ್ಳಲು ಪರದಾಡುವ ವಿಷಯವನ್ನು ಮನಮುಟ್ಟುವಂತೆ ಚಿತ್ರದ ಮೂಲಕ ಪ್ರೇಕ್ಷಕರ ಮುಂದಿದಲಾಗಿದೆ.
ಚಿಕ್ಕಂದಿನಿಂದಲೇ ಬಾಲ್ಯದ ಸ್ನೇಹಿತರಾದ ಗಣೇಶ್ ಎಸ್, ಗಣೇಶ್ ಯು ಮತ್ತು ಗಣೇಶ್ ಟಿ ಅವರ ತುಂಟತನ ತರಲೆ, ಮಾಡುವ ಕಿತಾಪತಿಗಳನ್ನು ಹಾಸ್ಯದ ರೂಪದಲ್ಲಿ ಯುವ ಜನರ ಬದುಕಿನ ಕಥನವನ್ನು ಕಟ್ಟಿಕೊಡಲಾಗಿದೆ.
ಗಣೇಶ್ ಎಸ್- ಶಶಿರಾಜ್ ಮತ್ತಿಬ್ಬರು ಗೆಳೆಯರಾದ ಗಣೇಶ್ ಯು ಮತ್ತು ಗಣೇಶ್ ಟಿ, ಪ್ರಜ್ವಲ್ ಗೌಡ ಮತ್ತು ಸುಕಿ ಜೊತೆ ಅವರದೇ ಸಾಮ್ರಾಜ್ಯ ಮತ್ತು ಲೋಕ. ಈಗಿನ ಕಾಲದ ಯುವ ಜನರ ಮನಸ್ಥಿತಿಯನ್ನು ಚಿತ್ರದ ಮೂಲಕ ಕಟ್ಟಿಕೊಟ್ಟಿರುವ ಚಿತ್ರ ಇದು.
ಮೂರು ಮಂದಿ ಗೆಳೆಯರು ಮೆಕ್ಯಾನಿಕಲ್ ಇಂಜಿನಿಯರ್ ಮಾಡಿದವರು, ಶಾಲೆಯಲ್ಲಿ ಓದುವುದರಲ್ಲಿ ಹಿಂದೆ, ಆದರೆ ತರಲೆ ಮಾಡುವುದಲ್ಲಿ ನಿಸ್ಸೀಮರು. ಈ ಕಾರಣಕ್ಕಾಗಿಯೇ ಊರ ಮಂದಿಯ ಮುಂದೆ ಆಗಾಗ ಮಂಗಳಾರತಿ ಮಾಡಿಸಿಕೊಂಡವರು. ಜೊತೆ ಮನೆಯವರಿಂದಲೂ ಕೂಡ. ಊರಲ್ಲಿ ಅನುಭವಿಸಿದ ನೋವು ಮತ್ತು ಯಾತನೆಯಿಂದ ಬದುಕು ಕಟ್ಟಿಕೊಳ್ಳಲು ನಗರಕ್ಕೆ ಬರುತ್ತಾರೆ. ಅಲ್ಲಿಯ ಒದ್ದಾಟ, ಓಡಾಟ, ಓದಿಗೆ ತಕ್ಕಂತೆ ಕೆಲಸ ಸಿಗುತ್ತದೇಯಾ ಇಲ್ಲ ಮುಂದೇನು ಎನ್ನುವುದು ಚಿತ್ರದ ಕೂತೂಹಲ.
ನಿರ್ದೇಶಕ ಭರತ್ ಮೂವರು ಯುವಕರು ಮತ್ತು ಯುವತಿಯರಿಬ್ಬರ ಮದ್ಯೆ ನಡೆಯುವ ಘಟನೆಗಳನ್ನು ಚಿತ್ರ ರೂಪದಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ
ಯುವ ಕಲಾವಿದರಾದ ಶಶಿರಾಜ್, ಪ್ರಜ್ವಲ್ ಗೌಡಮ ಸುಕಿ, ಚರಿತ್ರಾ ರಾವ್, ಸಹನಾ ಆರಾಧ್ಯ , ಸಮೀಕ್ಷಾ ಸೇರಿದಂತೆ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಚಿತ್ರದ ಹಾಡುಗಳು ಇಂಪಾಗಿ ಮೂಡಿ ಬಂದಿದೆ. ಜೊತೆಗೆ ಕ್ಯಾಮರ ಕೆಲಸ ಕೂಡ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /