Muhurta for Vikramarka film in the presence of Gayatri Devi

ಗಾಯಿತ್ರಿ ದೇವಿ ಸನ್ನಿದಿಯಲ್ಲಿ ವಿಕ್ರಮಾರ್ಕ ಚಿತ್ರಕ್ಕೆ ಮುಹೂರ್ತ - CineNewsKannada.com

ಗಾಯಿತ್ರಿ ದೇವಿ ಸನ್ನಿದಿಯಲ್ಲಿ ವಿಕ್ರಮಾರ್ಕ ಚಿತ್ರಕ್ಕೆ ಮುಹೂರ್ತ

‘ಟೆಡ್ಡಿಬೇರ್’ ‘ಸುಡುಕು’ ಮತ್ತು ‘ವಿಧುರ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಲೋಕೇಶ್.ಬಿ ಈಗ ‘ವಿಕ್ರಮಾರ್ಕ’ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಶ್ವೇತ ಶ್ರೀ ಪ್ರೊಡಕ್ಷನ್ಸ್ ಅಡಿಯಲ್ಲಿ ಬಾಂಬೆ ಮೂಲದ ಉದ್ಯಮಿ ಉಮೇಶ್‍ಕುಮಾರ್ ಬಂಡವಾಳ ಹೂಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಯಶವಂತಪುರದ ಶ್ರೀ ಗಾಯಿತ್ರಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಸೆಸ್ಪನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಕಥೆಯು ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗಿ ಸಾಫ್ಟ್‍ವೇರ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು, ಮುಂದೆ ಹೇಗೆ ಜೀವನ ನಡೆಸುತ್ತಾಳೆ. ಆಕೆ ಇಲ್ಲಿಗೆ ಬರಲು ಕಾರಣವೇನು ಇದರ ಮಧ್ಯೆ ಹುಡುಗನ ಪರಿಚಯವಾಗಿ ಪ್ರೇಮಕ್ಕೆ ತಿರುಗುತ್ತದೆ. ಇಂತಿಷ್ಟು ಮಾಹಿತಿಯನ್ನು ತಂಡವು ಹಂಚಿಕೊಂಡಿದೆ.

ಚಿತ್ರದಲ್ಲಿ ಭಾರ್ಗವ್ ನಾಯಕ. ನಾಯಕಿಗಾಗಿ ಶೋಧ ನಡೆಯುತ್ತಿದೆ. ಉಳಿದಂತೆ ಅಕ್ಷರ ಮುಂತಾದವರಿಗೆ ಅವಕಾಶ ಮಾಡಿಕೊಡಲಾಗಿದೆ. ನಾಲ್ಕು ಗೀತೆಗಳಿಗೆ ವಿವೇಕ್‍ಜಂಗ್ಲಿ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ದೀಪು, ಸಂಕಲನ ಸಂತೋಷ್ ಅವರದಾಗಿದೆ.

ಬೆಂಗಳೂರು, ಚಿಂತಾಮಣಿ, ಉಡುಪಿ, ಕೋಲಾರ ಹಾಗೂ ಹಾಡುಗಳನ್ನು ಸೆರೆ ಹಿಡಿಯಲು ಮಲೇಶಿಯಾ, ಶ್ರೀಲಂಕ, ನೇಪಾಳ ಕಡೆಗೆ ಹೋಗುವ ಇರಾದೆ ಇದೆ. ಅಂದುಕೊಂಡಂತೆ ಆದರೆ ಡಿಸೆಂಬರ್ 1ರಿಂದ ಚಿತ್ರೀಕರಣ ಶುರು ಮಾಡಲು ಯೋಜನೆ ರೂಪಿಸಲಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin