Multilingual actor Atul Kulkarni, who appeared in the film “Balaramana Dindigul”

“ಬಲರಾಮನ ದಿನಗಳು” ಚಿತ್ರಕ್ಕೆ ಬಂದ ಬಹುಭಾಷಾ ನಟ ಅತುಲ್ ಕುಲಕರ್ಣಿ - CineNewsKannada.com

“ಬಲರಾಮನ ದಿನಗಳು” ಚಿತ್ರಕ್ಕೆ ಬಂದ ಬಹುಭಾಷಾ ನಟ ಅತುಲ್ ಕುಲಕರ್ಣಿ

“ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ “ಬಲರಾಮನ ದಿನಗಳು” ಚಿತ್ರಕ್ಕೆ ಬಹುಭಾಷ ನಟ ಅತುಲ್ ಕುಲಕರ್ಣಿ ರಂಗ ಪ್ರವೇಶವಾಗಿದೆ

ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಿಸುತ್ತಿರುವ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಬಿರುಸಿನಿಂದ ನಡೆಯುತ್ತಿದೆ.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಅತುಲ್ ಕುಲಕರ್ಣಿ, ಅಮೋಘ ಅಭಿನಯದಿಂದ ಜನಪ್ರಿಯರಾಗಿದ್ದಾರೆ. ಪ್ರಸ್ತುತ ಅತುಲ್ ಕುಲಕರ್ಣಿ ಅವರು “ಬಲರಾಮನ ದಿನಗಳು” ಚಿತ್ರದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೆÇೀಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅತುಲ್ ಕುಲಕರ್ಣಿ ಅವರಿಗೆ ಸ್ವಾಗತ ಕೋರಿದೆ.

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ “ಬಲರಾಮನ ದಿನಗಳು” ಚಿತ್ರದ ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸುತ್ತಿದ್ದಾರೆ. “ಬಲರಾಮನ ದಿನಗಳು” 1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ ಸಂಗೀತ ನೀಡುತ್ತರುವ 50 ನೇ ಚಿತ್ರ ಹಾಗೂ ಕನ್ನಡದಲ್ಲಿ ಮೊದಲ ಚಿತ್ರವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin