ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ದಿನಚರಿ : ಅಭಿಮಾನಿಗಳಿಗೆ ವಿಶೇಷ ಉಡುಗೊರೆ
ತೆಲುಗಿನ “ಪುಷ್ಪ” ಚಿತ್ರಕ್ಕೆ ಈ ಬಾರಿ ನಟ ಅಲ್ಲು ಅರ್ಜುನ್ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ
ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಮತ್ತೊಮ್ಮೆ ಬಾಕ್ಸಾಫೀಸ್ ಉಡೀಸ್ ಮಾಡಲು ಸಜ್ಜಾಗಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಡಬಲ್ ಸಂಭ್ರಮದಲ್ಲಿ ತೇಲಾಡ್ತಿದೆ.
2 ರಾಷ್ಟ್ರಪ್ರಶಸ್ತಿಗಳು ಪುಷ್ಪ-ದಿ ರೈಸ್ ಸಿನಿಮಾಗೆ ಒಲಿದು ಬಂದಿವೆ. ಸೂರ್ಯ, ಧನುಷ್ ನಂತಹ ಸ್ಟಾರ್ಸ್ ಹಿಂದಿಕ್ಕೆ ಮಿಸ್ಟರ್ ಅಲ್ಲು ಅತ್ಯುತ್ತಮ ನಟ ಗರಿ ತಮ್ಮದಾಗಿಸಿಕೊಂಡ್ರೆ, ಅತ್ಯುತ್ತಮ ಸಂಗೀತ ನಿರ್ದೇಶಕನ ಪ್ರಶಸ್ತಿ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಪಾಲಾಗಿದೆ. ಈ ಖುಷಿ ಕ್ಷಣವನ್ನು ಪುಷ್ಪ ಟೀಂ ಸಂಭ್ರಮಿಸಿ ಕ್ಯಾಕಿ ಹಾಕ್ತಿದೆ.
ರಾಷ್ಟ್ರಪ್ರಶಸ್ತಿ ತಮ್ಮ ಮಡಿಲು ಸೇರುವ ಆನಂದದಲ್ಲಿರುವ ಅಲ್ಲು ಅರ್ಜುನ್ ಫ್ಯಾನ್ಸ್ ಗೆ ಸರ್ ಪ್ರೈಸ್ ಗಿಫ್ಟ್ ಗಿಫ್ಟ್ ಕೊಟ್ಟಿದ್ದಾರೆ. ಸೀಕ್ವೆಲ್ ಶೂಟಿಂಗ್ ಎಲ್ಲಿಗೆ ಬಂತು ಅನ್ನುತ್ತಿದ್ದವರಿಗೆ ಸ್ಟೈಲೀಶ್ ಡೈರೆಕ್ಟ್ ಆಗಿ ಪುಷ್ಪ-2 ಕೋಟೆ ಒಳಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲುಗಾರು ಹುಟ್ಟುಹಬ್ಬಕ್ಕೆ ಅನಾವರಣ ಪುಷ್ಪ-2 ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿತ್ತು. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ. ಪುಷ್ಪ ಸೀಕ್ವೆಲ್ ಎಂಟ್ರಿ ತುಣುಕು ಬಾಲಿವುಡ್ ಮಂದಿಯನ್ನು ಕಂಗೆಡಿಸಿತ್ತು. ಈಗ ರಿವೀಲ್ ಆಗಿರುವ ಪುಷ್ಪ-2 ಮೇಕಿಂಗ್ ಫ್ಯಾನ್ಸ್ ಎಕ್ಸೈಟ್ ಆಗುವಂತೆ ಮಾಡಿದೆ.
ಅಲ್ಲು ಅರ್ಜುನ್ ಪುಷ್ಪ-2 ಮೇಕಿಂಗ್ ಝಲಕ್ ಮಾತ್ರ ಹಂಚಿಕೊಂಡಿಲ್ಲ..ತಮ್ಮ ದೈನಂದಿನ ದಿನ ದಿನಚರಿ ಹೇಗಿ ಇರುತ್ತೇ ಅನ್ನೋದನ್ನು 2 ನಿಮಿಷ 20 ಸೆಕೆಂಡ್ ವಿಡಿಯೋ ತುಣುಕಿನಲ್ಲಿ ರಿವೀಲ್ ಮಾಡಿದ್ದಾರೆ. ಒಬ್ಬ ಸೆಲೆಬ್ರಿಟಿ ಲೈಫ್ ಸ್ಟೈಲ್ ಹೇಗಿರುತ್ತದೆ ಅವ್ರ ಮನೆ ಕಾರು, ಗಾರ್ಡನ್, ಕ್ಯಾರವಾನ್ ಬಗ್ಗೆ ತಿಳಿದುಕೊಳ್ಳುವ ಕ್ಯೂರಿಯಾಸಿಟಿಯಂತೂ ಪ್ರತಿಯೊಬ್ಬ ಕಲಾಭಿಮಾನಿಗೂ ಇದ್ದೇ ಇರುತ್ತದೆ. ಆ ಕ್ಯೂರಿಯಾಸಿಟಿಯನ್ನ ತಣಿಸುವ ಕೆಲಸ ಮಾಡಿದ್ದಾರೆ ಮಿಸ್ಟರ್ ಬನ್ನಿಗಾರು.
ಈ ಸ್ಪೆಷಲ್ ವಿಡಿಯೋ ಇನ್ ಸ್ಟಾಗ್ರಾಂ ಸಾಥ್ ಕೊಟ್ಟಿದೆ. ಇನ್ ಸ್ಟಾಗ್ರಾಂ ತಂಡ ಅಲ್ಲು ಅರ್ಜುನ್ ಮನೆಗೆ ಭೇಟಿ ಕೊಟ್ಟು ಅವ್ರ ದಿನ ನಿತ್ಯದ ಅಪ್ ಡೇಟ್ ಗಳನ್ನು ಶೂಟ್ ಮಾಡಿ ಫ್ಯಾನ್ಸ್ ಎದುರು ತಂದಿದೆ. ಸ್ವತಃ ಇನ್ ಸ್ಟಾಗ್ರಾಂ ತಂಡವೇ ಅಲ್ಲು ಅರ್ಜುನ್ ಮನೆಗೆ ಭೇಟಿ ಕೊಟ್ಟು ವಿಡಿಯೋ ಮಾಡಿದೆ. ಈ ವಿಶೇಷ ಗೌರವಕ್ಕೆ ಪಾತ್ರವಾಗಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಹೆಗ್ಗಳಿಕೆ ಕೂಡ ಅಲ್ಲು ಮಡಿಲು ಸೇರಿದೆ.
ಪುಷ್ಪರಾಜ ಬೆಳಗ್ಗೆ ಎದ್ದ ತಕ್ಷಣ ತಮ್ಮ ಮನೆಯ ಅಲ್ಲು ಗಾರ್ಡನ್ ನಲ್ಲಿ ಧಾನ್ಯ ಮಾಡಿ ಚಿಲ್ ಆಗ್ತಾರೆ. ಗಾರ್ಡನ್ ಒಂದು ರೌಂಡ್ ಆಗಿ ಕಾಫಿ ಕುಡಿತು ತಮ್ಮ ಕಾಸ್ಟ್ಲೀ ಕಾರ್ ಹತ್ತಿಕೊಂಡು ತಮ್ಮ ಮುದ್ದಿನ ಮಕ್ಕಳಿಗೆ ವಿಡಿಯೋ ಕಾಲ್ ಮಾಡ್ತಾರೆ. ಎಲ್ಲಿ ಇರಲಿ ಎಷ್ಟೇಬ್ಯುಸಿ ಇರಲಿ ಅಲ್ಲು ಮಿಸ್ ಮಾಡದೇ ಮಧ್ಯಾಹ್ನ 1 ಗಂಟೆ ಮಕ್ಕಳಿಗೆ ವಿಡಿಯೋ ಕಾಲ್ ಮಾಡೋದನ್ನ ಮಾತ್ರ ಮರೆಯೋದಿಲ್ಲ. ವಿಡಿಯೋ ಕಾಲ್ ಮಾಡ್ತಾ ಹೈದ್ರಾಬಾದ್ ರಾಮೋಜಿಸಿಟಿ ಫಿಲ್ಮ ಸಿಟಿ ತಲುಪ್ತಾರೆ. ಅಲ್ಲಿ ನೆರೆದಿದ್ದ ಫ್ಯಾನ್ಸ್ ಭೇಟಿ ಮಾಡಿ ಶೂಟಿಂಗ್ ಸೆಟ್ ಗೆ ಹಾಜರಾಗ್ತಾರೆ.
ಶೂಟಿಂಗ್ ಸೆಟ್ ಗೆ ಎಂಟ್ರಿ ಕೊಡ್ತಿದ್ದಂತೆ ಸಿನಿಮಾಗೆ ಸಂಬಂಧಿಸಿದ ಕಾಸ್ಟ್ಯೂಮ್, ಪ್ರಾಪರ್ಟಿಸ್ ಆಯ್ಕೆ ಮಾಡಿಕೊಂಡ ನಂತ್ರ ಪುಷ್ಪರಾಜ್ ತಮ್ಮ ಕ್ಯಾರವಾನ್ ಗೆ ಪ್ರವೇಶಿಸ್ತಾರೆ. ಅಲ್ಲು ಕ್ಯಾರವಾನ್ ತಲುಪ್ತಿದ್ದಂತೆ ನಿರ್ದೇಶಕ ಸುಕುಮಾರ್ ನೆಚ್ಚಿನ ಡಾರ್ಲಿಂಗ್ ಮೀಟ್ ಮಾಡಿ ಹಗ್ ಮಾಡಿ ಆ ದಿನ ಸೀನ್ಸ್ ಬಗ್ಗೆ ಎಕ್ಸ್ ಪ್ಲೈನ್ ಮಾಡ್ತಾರೆ. ನಂತ್ರ ಮೇಕಪ್ ಹಚ್ಚಿಕೊಂಡು ಕ್ಯಾಮೆರಾ ಎದುರು ಪ್ರತ್ಯಕ್ಷರಾಗ್ತಾರೆ.
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ನಡುವೆ ಅದ್ಭುತವಾದ ಬಾಂಡಿಂಗ್ ಇದೆ. ಸುಕುಮಾರ್ ಸಿನಿಮಾ ಜರ್ನಿ ಶುರುವಾಗಿದ್ದು ಅಲ್ಲು ಜೊತೆನೇ..ಆರ್ಯ ಸಿನಿಮಾದ ಮೂಲಕ ಹಿಟ್ ಜೋಡಿಯಾದ ಸ್ಟೈಲೀಶ್ ಸ್ಟಾರ್ ಸುಕುಮಾರ್ ಆರ್ಯ-2 ನಂತ್ರ ಪುಷ್ಪ-1 ಈಗ ಪುಷ್ಪ-2 ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ನನ್ನ ಮೊದಲ ಹೀರೋ ಎಂದಿರುವ ಸುಕುಮಾರ್,ನನ್ನ ಗೆಳೆಯ ಅಂತಾನೂ ಹೇಳಿಕೊಂಡಿದ್ದಾರೆ.
ಪುಷ್ಪ 2 ದಿ ರೂಲ್ಸ್ ಶೂಟಿಂಗ್ ಹೈದ್ರಾಬಾದ್ ನ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಭರದಿಂದ ಸಾಗ್ತಿದೆ. ಈ ನಡುವೆಯೇ ಸೀಕ್ವೆಲ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿರುವ ಖಬರ್ ಹೊರಬಿದ್ದಿದೆ. ಹಿಂದಿ ಬೆಲ್ಟ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಪುಷ್ಪ ಮೊದಲ ಭಾಗ ಬಾಲಿವುಡ್ ಅಂಗಳದಲ್ಲಿ ಬಡಾ ಹಿಟ್ ಕಂಡಿತ್ತು. ಅಲ್ಲು ಆಕ್ಟಿಂಗ್ , ಸುಕುಮಾರ್ ಟೇಕಿಂಗ್ ಗೆ ಹಿಂದಿ ಮಂದಿ ಫಿದಾ ಆಗಿದ್ದರು. ಬಾಲಿವುಡ್ ಚಿತ್ರಗಳಿಗೆ ಟಕ್ಕರ್ ಕೊಟ್ಟಿದ್ದ ಪುಷ್ಪ 2ಗೀಗಾ ಬಂಗಾರದ ಬೇಡಿಕೆ ಬಂದಿದೆ. 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಸಿನಿ ಜಜಾರ್ ನಲ್ಲಿ ಹೊಸ ಬಜ್ ಓಡಾಡ್ತಿದೆ. ಹಾಗಿದ್ರೆ ಪುಷ್ಪ-2 ವರ್ಷ ತೆರೆಗೆ ಬರೋದಂತು ಡೌಟ್,,ಮುಂದಿನ ವರ್ಷ ಮಾರ್ಚ್ 22ಕ್ಕೆ ಪುಷ್ಪರಾಜನ ಫೈಯರ್ ತೆರೆಯಲ್ಲಿ ಶುರುವಾಗಲಿದೆ ಎನ್ನಲಾಗ್ತಿದೆ.