"Neene Neene Nodalli" song from the movie "Life Today" released

” ಲೈಫ್ ಟುಡೇ” ಚಿತ್ರದ ನೀನೇ ನೀನೇ ನೋಡಲ್ಲಿ.. ಹಾಡು ಬಿಡುಗಡೆ - CineNewsKannada.com

” ಲೈಫ್ ಟುಡೇ” ಚಿತ್ರದ ನೀನೇ ನೀನೇ ನೋಡಲ್ಲಿ.. ಹಾಡು ಬಿಡುಗಡೆ

ಲೈಫ್ ಟುಡೇ” ಚಿತ್ರದ ನೀನೇ ನೀನೇ ನೋಡಲ್ಲಿ ಹಾಡು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದ್ದು ಎಲ್ಲೆಲ್ಲೂ ಹುಡುಗ ಕಾಣಿಸುವ ಕುರಿತ ಗೀತೆ ಇದಾಗಿದ್ದು ಹಾಡು ಗಮನ ಸೆಳೆದಿದೆ

ಶ್ರೀಧರ್ ವಿ ಸಂಭ್ರಮ್ ಸಂಗೀತದಲ್ಲಿ ಮೂಡಿ ಬಂದಿರುವ ಈ ಗೀತೆಗೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಇರುವ ಚಿತ್ರಕ್ಕೆ ಕನ್ನಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ‌. ಗೀತೆಯಲ್ಲಿ ನಾಯಕ ಕಿರಣ್ ಆದಿತ್ಯ, ನಾಯಕಿ ಲೇಖಾ ಚಂದ್ರ ನಟಿಸಿದ್ದಾರೆ.ಶ್ವೇತಾ ಮೋಹನ್ ಹಾಡಿದ್ದಾರೆ

ಕನ್ನಡದ ಹಾಡನ್ನು ನಿರ್ಮಾಪಕ ಪ್ರದೀಪ್ ಹಾಗು ತಮಿಳು ಭಾಷೆಯ ಹಾಡನ್ನು ಲಹರಿ ಸಂಸ್ಥೆಯ ವೇಲು ಬಿಡುಗಡೆ ಮಾಡಿ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಲಹರಿ ವೇಲು, ಚಿತ್ರದಲ್ಲಿ ಐದು ಹಾಡುಗಳಿವೆ.‌ ಬಿಡುಗಡೆಯಾದ ಎರಡು ಹಾಡುಗಳು ಯಶಸ್ವಿಯಾಗಿವೆ.‌ ನಮ‌್ಮ ಸಂಸ್ಥೆಯಿಂದ ಎ.ಆರ್ ರೆಹಮಾನ್, ಹಂಸಲೇಖ ಅವರ ಮೊದಲ ಹಾಡು ನಾವೇ ಬಿಡುಗಡೆ ಮಾಡಿದ್ದೆವು. ಜೊತೆಗೆ ಶ್ರೀಧರ್ ಸಂಭಮ್ ಅವರ ಮೊದಲ ಹಾಡು ಬಿಡುಗಡೆ ಮಾಡಿದ್ದೇವೆ . ಕನ್ನಡದಲ್ಲಿ ಮಾತ್ರವಲ್ಲ ತೆಲುಗು,ತಮಿಳು ಭಾಷೆಯಲ್ಲಿ ಚಿತ್ರ ನೋಡಲು ಜನ ಬರ್ತಾ ಇಲ್ಲ.. ಪರಿಸ್ಥಿತಿ ಉತ್ತಮವಾಗಿಲ್ಲ.. ಅದಕ್ಕೆ ಕಾರಣ ಕೃತಕ ಬುದ್ದಿಮತ್ತೆ. ಒಳ್ಳೆಯ ಕಂಟೆಂಟು ಕೊಟ್ಟರೆ ಜನ ಕಂಡಿತಾ ನೋಡ್ತಾರೆ. ಎಐ ಬಂದಿದ್ದರೂ ಚಿತ್ರರಂಗ ಭಯ ಪಡಯವ ಅಗತ್ಯವಿಲ್ಲ. ತುಸು ಸಮಯ ತೆಗೆದುಕೊಳ್ಳಲಿದೆ ಎಂದು ಮಾಹಿತಿ ಹಂಚಿಕೊಂಡರು

ನಿರ್ಮಾಪಕ ಪ್ರದೀಪ್ ಮಾತನಾಡಿ , ಕಥೆ ಹೇಳಿದ ನಂತರ ನಟ ಕಿರಣ್ ಅವರನ್ನು ಒಂದು ವರ್ಷ ಕಾಯಿಸಿದ್ದೆ.‌ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಕಲಾವಿದರೆ ಅಭಿನಯ ಉತ್ತಮವಾಗಿದೆ ಸಹಕಾರ ಹೀಗೆ ಇರಲಿ ಎಂದು ಕೇಳಿಕೊಂಡರು.

ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ ಕಥೆ ಹೇಳಿದ ನಂತರ ನಟ ಕಿರಣ್ ಅವರನ್ನು ಒಂದು ವರ್ಷ ಕಾಯಿಸಿದ್ದೆ.‌ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಕಲಾವಿದರೆ ಅಭಿನಯ ಉತ್ತಮವಾಗಿದೆ ಸಹಕಾರ ಹೀಗೆ ಇರಲಿ ಎಂದು ಕೇಳಿಕೊಂಡರು.

ನಟ ಕಿರಣ್ ಆದಿತ್ಯ ಮಾತನಾಡಿ ಹೊಸಬರ ಸಿನಿಮಾ ತೆಲುಗು, ತಮಿಳು ಭಾಷೆ ಮಟ್ಟಕ್ಕೆ ಬರುವಂತೆ ಒತ್ತಡ ಹೇರಿ ಹಾಡು ಮಾಡಿಕೊಂಡಿದ್ದೇವೆ. ನಟಿ ಲೇಖಾ ಚಂದ್ರ ಉತ್ತಮವಾಗಿ ನಟಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರ. ಇಡೀ ಚಿತ್ರದಲ್ಲಿ ನಾಯಕಿ ಆವರಿಸಿಕೊಂಡಿದ್ದಾರೆ. ಪರಭಾಷೆಯವರು ನಮ್ಮಲ್ಲಿ ದುಡ್ಡು ಮಾಡ್ತಾರೆ. ನಾವು ಈಗ ಪರಭಾಷೆಯಲ್ಲಿ ದುಡ್ಡು ಮಾಡೋಣ ಎಂದರು

ನಟಿ ಲೇಖಾ ಚಂದ್ರ ಮಾತನಾಡಿ ತುಂಬಾ ಸಮಯದ ನಂತರ ನನ್ನ ಸಿನಿಮಾದ ಪತ್ರಿಕಾಗೋಷ್ಟಿಯಲ್ಲಿ ಕಾಣಿಸಿಕೊಂಡಿದ್ದೇನೆ. ಹಾಡಿನ ಬಗ್ಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.ಇದಕ್ಕೆ ಕಾರಣ ನಿರ್ದೇಶಕರು ನೀಡಿದ ಸಹಕಾರ ಕಾರಣ‌ ನಾಯಕಿ ಪ್ರದಾನ ಚಿತ್ರಗಳು ಕಡಿಮೆಯಾಗಿವೆ. ಈ ಚಿತ್ರದಲ್ಲಿ ಸಮಾಜಕ್ಕೆ ಸಂದೇಶ ಕೊಡುವ ಪಾತ್ರ. ಚೆನ್ನಾಗಿ ಮೂಡಿ ಬಂದಿದೆ. ದೊಡ್ಡ ಮಟ್ಟದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ನಿರ್ಮಾಪಕರದ್ದು ಎಲ್ಲರ ಸಹಕಾರ ಬೇಕು ಎಂದು ಹೇಳಿದರು.

ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಮಾತನಾಡಿ ಎರಡು ಭಾಷೆಯಲ್ಲಿ ಹಾಡು ಬಿಡುಗಡೆಯಾಗಿದೆ. ಸಾಹಿತ್ಯ ಬರೆದುಕೊಟ್ಟ ಕವಿರಾಜ್ ಅವರಿಗೆ ಧನ್ಯವಾದ. ನಾಯಕ,ನಾಯಕಿ ಇಬ್ಬರೂ ನಾಯಕಿಯೇ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಟ ಕಿರಣ್ ಕಾರ್ಯಕಾರಿ ನಿರ್ಮಾಪಕರಾಗಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಒಳ್ಳೆಯದಾಗಲಿ ಎಂದು ಹೇಳಿದರು.

ಗೀತರಚನೆಕಾರ ಕವಿರಾಜ್ ಮಾತನಾಡಿ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಟ್ಯೂನ್ ಕಳುಹಿಸಿ ಏನಾದರೂ ಹೊಳೆಯುತ್ತಾ ನೋಡಿ ಎಂದರು. ಚಿತ್ರದುರ್ಗದಿಂದ ದಾವಣಗೆರೆ ಹೋಗುವ ಮಾರ್ಗ ಮದ್ಯೆ ಹಾಡು ಹುಟ್ಟಿತ್ತು. ನನ್ನ 6 ವರ್ಷದ ಮಗಳು ನೀನೇ ನೀನೇ ಹಾಡು ಗುನುಗುತ್ತಿದ್ದಳು.. ಹಾಡು ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ . ಶ್ರೀಧರ್ ಉತ್ತಮ ಸಾಹಿತ್ಯ ರಚನೆಕಾರು. ಅವರಿಗೆ ಹಾಡು ಬರೆಯುವಾಗ ಎಚ್ಚರಿಕೆ ವಹಿಸಿ ಗೀತೆ ಬರೆಯುತ್ತೇನೆ ಎಂದರು

ಚಿತ್ರದಲ್ಲಿ ನಟಿಸಿರುವ ಯುಕ್ತ ಮಾತನಾಡಿ ಕತೆ ಕೇಳಿದ ತ್ರಿಕೋನ ಪ್ರೇಮಕಥೆ ಚಿತ್ರ ಅಂದುಕೊಂಡಿದೆ. ಅದು ಅಲ್ಲ. ಅನಿವಾಸಿ ಭಾರತೀಯಳ‌ ಪಾತ್ರ ಮಾಡಿದ್ದೇನೆ. ಸ್ವಲ್ಪ ದಿನ ಊರಿಗೆ ಬಂದಾಗ ಏನೆಲ್ಲಾ ಆಗಲಿದೆ ಎನ್ನುವುದು ನನ್ನ ಪಾತ್ರ ಎಂದು ಹೇಳಿದರು

ಛಾಯಾಗ್ರಾಹಕ ಗುರು ಪ್ರಸಾದ್ ಮಾತನಾಡಿ ದೃಶ್ಯ ಕಟ್ಟಿಕೊಡಲು ಚಿಕ್ಕಮಗಳೂರಿನಲ್ಲಿ ಸವಾಲಾಗಿತ್ತು ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು

ನಟ ಕಾಕ್ರೋಚ್ ಸುಧಿ ಮಾತನಾಡಿ ಹಾಡುಗಳು ಚೆನ್ನಾಗಿ ಮೂಡಿಬಂದಿದೆ.ನಟಿ ಲೇಖಾ ಚಂದ್ರ ಇಡೀ ಹಾಡಿನಲ್ಲಿ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin