ಪುನೀತ್ ರಾಜ್ ಕುಮಾರ್ ನೆನಪು ಮಾಡಿಕೊಂಡು ಭಾವುಕರಾದ ನವನಟ ದಕ್ಷ
ಚಿತ್ರರಂಗಕ್ಕೆ ನಾಯಕ ನಟನಾಗಿ ಯುವ ನಟ ದಕ್ಷ “ನೇತ್ರಂ” ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು 17ಕ್ಕೆ ಚಿತ್ರ ತೆರೆಗೆ ಬರಲಿದೆ.
ಚಿತ್ರವನ್ನು ಮಕ್ ದುಮ್ ಪಟೇಲ್,ಶೇಕ್ ಸಬೀರ್ ನಿರ್ಮಾಣ ಮಾಡಿದ್ದಾರೆ. ನೇತ್ರಂ ಚಿತ್ರದ ಬಿಡುಗಡೆಯ ದಿನಾಂಕದ ಘೋಷಣೆ ಪ್ರಕಟಿಸಿದ್ದಾರೆ. ಚಿತ್ರಕ್ಕೆ ಬಿಲ್ಲೂರು ಸುರೇಶ್ ಆಕ್ಷನ್ ಕಟ್ ಹೇಳಿದ್ದಾರೆ
ಚಿತ್ರದ ನಾಯಕ ನಟ ದಕ್ಷ ಮಾತನಾಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವ್ರನ್ನ ನೆನೆದು,ಅವರಿದ್ದರೆ ಖಂಡಿತಾ ಪ್ರೆಸ್ಸ್ ಮೀಟ್‍ಗೆ ಬರ್ತಾ ಇದ್ರು, ನಮಗೆ ಆ ಅದೃಷ್ಟ ಇಲ್ಲ ಎನ್ನುವುದರ ಮೂಲಕ ಭಾವುಕರಾದರು..ಅಪ್ಪು ಬಾಸ್‍ನ ಭೇಟಿಯಾಗೆ ಬಂದು,ಚಿತ್ರದ ಬಿಡುಗಡೆಯ ಪತ್ರಿಕಾ ಗೋಷ್ಠಿ ಮಾಡ್ತಾ ಇದೀವಿ ಎನ್ನುವುದರ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದರು..
ಸಿನಿಮಾ ಮೇಲಿನ ಅತಿಯಾದ ಪ್ರೀತಿ ಮತ್ತು ಆಸಕ್ತಿಯಿಂದ ಸಿನ್ಮಾ ಮಾಡಿದ್ದು,ಬೇರೆ ಯಾರೋ ಮಾಡಬೇಕಿದ್ದ ಚಿತ್ರಕ್ಕೆ ನಾವೇ ಇಬ್ಬರು ಸೇರಿ ಬಂಡವಾಳ ಹೂಡಿದ್ದೇವೆ ಎಂದು ನಿರ್ಮಾಪಕರು
ನಿರ್ದೇಶಕ ಬಿಲ್ಲೂರು ಸುರೇಶ್ ಮಾತನಾಡಿ,ಕಣ್ಣುಗಳ ಮಹತ್ವ ಸಾರುವಂತಹ,ಸಪ್ಸನ್ಸ್ ಥ್ರಿಲ್ಲರ್ ಜಾನರ್ ಲೈನ್ ಇದಾಗಿದ್ದು, ತುಂಬಾ ಕುತೂಹಲ ಭರಿತವಾದ ಕಥೆ ಟ್ರಾವೆಲ್ ಆಗತ್ತೆ,ನಾಯಕ ದಕ್ಷ ನೂರಕ್ಕೆ ನೂರು ಅಂಕ ಪಡೆದು ಪಾಸಾಗಿದ್ದಾನೆ ಎಂದರು
ಚಿತ್ರ ಬೇಗನೆ ಸಿದ್ಧವಾಗಿತ್ತು ಕೋರೋನ ಬಂದಿದ್ದರಿಂದ ಸ್ವಲ್ಪ ತಡವಾಯಿತು,ನೇತ್ರಂ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬರ್ತಾ ಇದೆ, ಒಟ್ಟು ಮೂರು ಹಾಡುಗಳು ಹಾಗೂ ಭರ್ಜರಿ ಫೈಟ್ಸ್ ಗಳು ಆಡಿಯನ್ಸ್ ಗೆ ಗುಡ್ ಫೀಲ್ ಕೊಡತ್ತೆ,ನಮ್ ನೇತ್ರo ಕ್ಕೆ ಸೆನ್ಸಾರ್ ಎ ಸರ್ಟಿಫಿಕೇಟ್ ಸಿಕ್ಕಿದೆ, ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದರು.