ಸೆಟ್ಟೇರಿದ ಹೊಸ ಚಿತ್ರ ಸುವ್ವಾಲಿ: ಅನಾಥ ಮಕ್ಕಳು ಸುತ್ತ ಮನಮಿಡಿಯುವ ಕಥನ
‘ಸುವ್ವಾಲಿ’ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರು ಅನ್ನಪೂರ್ಣೇಶ್ವರಿ ನಗರದಲ್ಲಿರುವ ‘ಶ್ರೀ ವಿನಾಯಕ ವೆಂಕಟೇಶ್ವರ ದೇವಸ್ಥಾನ’ದಲ್ಲಿ ಅದ್ದೂರಿಯಾಗಿ ನಡೆಯಿತು.
ಮೊದಲ ದೃಶ್ಯಕ್ಕೆ ಮಕ್ಕಳು ಕ್ಲಾಪ್ ಮಾಡಿದ್ದು ವಿಶೇಷ. ಬೆಂಗಳೂರಿನ ಎಂ.ಮಹೇಶ್ ಅವರು ಶ್ರೀ ಶೈಲಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ರಚನೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದು ಎಂ.ಮಹೇಶ್‍ಬಾಬು. ಬಿಡುಗಡೆಯಾದ ಪೋಸ್ಟರ್ ನಲ್ಲಿ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ.
ಸಿನಿಮಾ ಅನಾಥ ಮಕ್ಕಳ ಸುತ್ತ ಸಾಗುತ್ತದೆ. ಇಂತಹ ಮಕ್ಕಳು ಸಮಾಜದಲ್ಲಿ ಏನಾಗುತ್ತಾರೆ. ಅವರ ಭವಿಷ್ಯ ಯಾವ ರೀತಿ ತೆಗೆದುಕೊಂಡು ಹೋಗತ್ತೆ. ಅಪ್ಪ ಅಮ್ಮ ರೂಪಿಸಿದ್ದ ಭವಿಷ್ಯವೇ ಕೆಲವೊಮ್ಮೆ ಸರಿ ದಾರಿಗೆ ಹೋಗುವುದಿಲ್ಲ. ಏನು ಇಲ್ಲದವರ ಪರಿಸ್ಥಿತಿ ಏನಾಗುತ್ತದೆ. ಇಂತಹ ಮುಗ್ದ ಮಕ್ಕಳಿಗೆ ಹೆಣ್ಣು ಮಗುವೊಂದು ಸಿಗುತ್ತದೆ. ಇದರಿಂದ ಏನೇನು ಕಷ್ಟಗಳನ್ನು ಎದುರಿಸುತ್ತಾರೆ. ಇದರ ಮಧ್ಯೆ ಪ್ರೀತಿಯ ಉಪಕಥೆ ತೆರೆದುಕೊಳ್ಳುತ್ತದೆ.
ತಾರಾಗಣದಲ್ಲಿ ಅಂಜನ್, ಸಚ್ಚಿನ್‍ಪುರೋಹಿತ್, ಅಂಜನಾ, ಲಯಾಕೋಕಿಲ, ರಘು ಚಿಣ್ಣರುಗಳಾದ ಅಂಕಿತಮೂರ್ತಿ, ಮಾನ್ಯ ಮುಂತಾದವರು ನಟಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಗೀತ ವಿ.ಮನೋಹರ್, ಛಾಯಾಗ್ರಹಣ ಮನುವಿಜಯ್‍ಕುಮಾರ್, ಸಂಕಲನ ಮಲ್ಲು, ಸಾಹಸ ಕೌರವವೆಂಕಟೇಶ್, ನೃತ್ಯ ಗಣೇಶ್ ಅವರದಾಗಿದೆ.
ಚಿತ್ರವನ್ನು ಬೆಂಗಳೂರು ಹಾಗೂ ಮೈಸೂರು ಸುಂದರ ತಾಣಗಳಲ್ಲಿ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಗಣೇಶ ಹಬ್ಬದ ನಂತರ ಚಿತ್ರಕ್ಕೆ ಚಾಲನೆ ಸಿಗಲಿದೆ.