Not Nice Road Now Night Road : Instead of the title

ನೈಸ್ ರೋಡ್ ಅಲ್ಲ ಈಗ ನೈಟ್ ರೋಡ್ : ಶೀರ್ಷಿಕೆ ಬದಲು - CineNewsKannada.com

ನೈಸ್ ರೋಡ್ ಅಲ್ಲ ಈಗ ನೈಟ್ ರೋಡ್ : ಶೀರ್ಷಿಕೆ ಬದಲು

ನೈಸ್ ರೋಡ್ ಎಂದು ಸಿನಿಮಾಕ್ಕೆ ಹೆಸರಿಟ್ಟುಕೊಂಡು ಬಿಡುಗಡೆಗೆ ಸಿದ್ಧವಾಗಿದ್ದಾಗಲೇ ನೈಸ್ ರೋಡ್ ಕಂಪನಿಯವರಿಂದ ಟೈಟಲ್ ಬದಲಾಯಿಸಿ ಎಂದು ನೋಟೀಸ್ ಬಂದಿದ್ದರಿಂದ ಈಗ ನೈಸ್ ರೋಡ್ ಬದಲಾಗಿ ನೈಟ್ ರೋಡ್ ಎಂದು ಚಿತ್ರಕ್ಕೆ ಮರು ನಾಮಕರಣ ಮಾಡಿ ಈಗ ಬಿಡುಗಡೆಗೆ ಸಿದ್ದತೆ ನಡೆದಿದೆ.

ಈ ಹಿಂದೆ ನೈಸ್ ರೋಡ್ ಎಂದು ಸಿನಿಮಾ ಬಿಡುಗಡೆಗೆ ಸಿದ್ದವಾಗಿತ್ತು ಈ ಸಂದರ್ಭದಲ್ಲಿ ನೈಸ್ ರೋಡ್ ಕಂಪನಿಯವರು ಸಿನಿಮಾ ಟೈಟಲ್ ಬದಲಿಸುವಂತೆ ನೋಟೀಸ್ ನೀಡಿದ್ದರು, ಸಿನಿಮಾ ತಂಡದವರು ಈ ಸಿನಿಮಾಗೂ ನೈಸ್ ರೋಡ್ ಗು ಯಾವುದೇ ಸಂಬಂಧವಿಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಕೊನೆಗೆ ಸಿನಿಮಾ ಟೈಟಲ್ ಬದಲಿಸಲು ನಿರ್ಧರಿಸಿ ಈಗ ನೈಟ್ ರೋಡ್ ಇಟ್ಟಿದ್ದಾರೆ.

ಈ ನೈಟ್ ರೋಡ್ ಚಿತ್ರವನ್ನು ಪುನರ್ ಗೀತಾ ಸಿನಿಮಾಸ್ ಎಂಬ ಬ್ಯಾನರಿನಲ್ಲಿ ಗೋಪಾಲ್ ಹಳೆಪಾಳ್ಯ ಅವರು ನಿರ್ಮಿಸಿ ತಾವೇ ನಿರ್ದೇಶನವನ್ನು ಮಾಡಿದ್ದಾರೆ,

ಈ ಚಿತ್ರವನ್ನು ಎನ್ ರಾಜು ಗೌಡರು ಅರ್ಪಿಸಿದ್ದಾರೆ, ಸಂಗೀತ ಸತೀಶ್ ಆರ್ಯನ್, ಛಾಯಾಗ್ರಾಹಣ ಪ್ರವೀಣ್ ಶೆಟ್ಟಿ,
ಜೀವನ್ ಪ್ರಕಾಶ್ ಸಂಕಲನ ಮಾಡಿದ್ದು,

ಧರ್ಮ, ಜ್ಯೌತಿ ರೈ, ಗಿರಿಜಲೋಕೇಶ್ ಗೋವಿಂದೇಗೌಡ, ರವಿಕಿಶೋರ್, ಮಂಜು ರಂಗಾಯಣ, ಪ್ರಭು, ಸಚ್ಚಿ,ಮಂಜು ಕೃಷ್, ರೇಣು ಶಿಕಾರಿ, ಸುನೇತ್ರ, ಚಂದ್ರ ಮೂರ್ತಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ನೈಟ್ ರೋಡ್ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿದ್ದು, ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂತುಕೊಂಡು ನೋಡುವಂತೆ ಮಾಡುತ್ತದೆ ಸಿನಿಮಾದ ಕೊನೆವರೆಗೂ ತನ್ನ ಸಸ್ಪೆನ್ಸ್ ಅನ್ನು ಬಿಟ್ಟು ಕೊಡದೆ ನೋಡುಗರ ಎದೆ ಬಡಿತವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದು ಚಿತ್ರ ತಂಡದವರ ಅಭಿಪ್ರಾಯ.

ಸಿನಿಮಾ ಇದೆ ತಿಂಗಳು ಕೊನೆ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin