“ಪೆಪೆ” ಕಥೆಯಾದ ಪಾತ್ರಗಳೊಂದಿಗೆ : ಚಿತ್ರ ಆಗಸ್ಟ್ 30 ರಂದು ಬಿಡುಗಡೆ

ದೊಡ್ಮನೆ ಕುಟುಂಬದ ಕುಡಿ,ವಿನಯ್ ರಾಜ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ” ಪೆಪೆ” ಚಿತ್ರ ಇದೇ ಆಗಸ್ಟ್ 30 ರಂದು ತೆರೆಗೆ ಬರಲಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ತರದ ಸಿನಿಮಾ ಎನ್ನುವ ಹೆಗ್ಗಳಿಕೆ ಪಡೆದಿದ್ದು ಚಿತ್ರ ಕುತುಹಲ ಹೆಚ್ಚು ಮಾಡಿದೆ.

ಟ್ರೈಲರ್ ಮೂಲಕ ಈಗಾಗಲೇ ಗಮನ ಸೆಳೆದಿರುವ “ಪೆಪೆ” ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಆಹ್ವಾನ ನೀಡಿದೆ. ಜೊತೆಗೆ ಕಿಚ್ಚ ಸುದೀಪ್ ಟ್ರೈಲರ್ ನೋಡಿ ನಟ ವಿನಯ್ ರಾಜ್ ಕುಮಾರ್ ನಟನೆಯನ್ನು ಮನಸಾರೆ ಮೆಚ್ಚಿಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.
ನಟ ವಿನಯ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. “ಪೆಪೆ” ಚಿತ್ರ ಈಗಾಗಲೇ ಗಾಂಧಿನಗರದಲ್ಲಿ ಸಿನಿಮಾ ಅದ್ಬುತ ಸಿನಿಮಾವಾಗಲಿದೆ ಎನ್ನುವ ನಿರೀಕ್ಷೆ ಹುಟ್ಟುಹಾಕಿದೆ.ಇದು ನಿರ್ಮಾಪಕರು ಸೇರಿದಂತೆ ಚಿತ್ರತಂಡದ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿಸಿದೆ.

” ಪೆಪೆ” ಸಿನಿಮಾ ಇದೇ 30ನೇ ತಾರೀಖು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ.. ಈ ನಡುವೆ ಭರದಿಂದ ಪ್ರಚಾರ ಕಾರ್ಯ ಮಾಡ್ತಿರೋ ಚಿತ್ರತಂಡ.. ಕಥೆಯಾದ ಪಾತ್ರಗಳೊಂದಿಗೆ…ಅನ್ನೋ ಪೆಪೆ ಫ್ಯಾಮಿಲಿ ಟ್ರೀ ಪೋಸ್ಟರ್ ನ ಬಿಡುಗಡೆ ಮಾಡಿದೆ.. ಈ ಮೂಲಕ ಪೆಪೆ ಸಿನಿಮಾದ ಸ್ಕ್ರೀನ್ ಪ್ಲೇ ಹಾಗೂ ನಿರೂಪಣೆ ವಿಶಿಷ್ಠವಾಗಿದ್ದು, ಪ್ರೇಕ್ಷಕರು ಈ ಕನೆಕ್ಷನ್ ನ ಅರ್ಥ ಮಾಡಿಕೊಂಡರೆ ಸಿನಿಮಾ ತುಂಬಾ ಚೆನ್ನಾಗಿ ಕನೆಕ್ಟ್ ಆಗುತ್ತೆ ಅನ್ನೋದು ಚಿತ್ರತಂಡದ ಐಡಿಯಾ..

ಹಾಗಾಗಿ ಸಿನಿಮಾ ರಿಲೀಸ್ ಆಗೋ ವಾರದ ಮೊದ್ಲೇ ಈ ಫ್ಯಾಮಿಲಿ ಟ್ರೀ ಅನ್ನೋ ಪೋಸ್ಟರ್ ನ ರಿಲೀಸ್ ಮಾಡಿದೆ.. ಇದು ಸಿನಿಮಾದ ಮೇಲಿನ ಕುತೂಹಲವನ್ನ ದುಪ್ಪಟ್ಟು ಹೆಚ್ಚಿಸಿದೆ.

ಪೆಪೆ ಸಿನಿಮಾ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಸಿನಿಮಾ. ಪೂರ್ಣ ಚಂದ್ರ ತೇಜಸ್ವಿ ಸಂಗೀತ, ಉದಯ್ ಶಂಕರ್ ಹಾಗೂ ಶ್ರೀರಾಮ್ ಬಿ ಕೋಲಾರ್ ನಿರ್ಮಾಣದ ಸಿನಿಮಾ. ಮೊದಲ ಪೋಸ್ಟರ್ ನಿಂದ್ಲೇ ಉದ್ಯಮದಲ್ಲಿ ವಿಶೇಷ ಛಾಪನ್ನೊತ್ತಿರೋ ಪೆಪೆ ಎಲ್ಲಾ ಆಂಗಲ್ ನಿಂದ್ಲೂ ಸ್ಪೆಷಲ್ ಆಗಿದೆ.

ಸಿನಿಮಾದ ಒಂದೊಂದು ವಿಚಾರವನ್ನ ಪ್ರೇಕ್ಷಕರ ಕಣ್ಣರಳಿಸ್ತಿದೆ.. ಆಗಸ್ಟ್ 30ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿರುವ ಪೆಪೆ ಸಿನಿಮಾ ನೋಡೋದಕ್ಕೂ ಮೂದ್ಲೂ ನೀವು ಈ ವಿಷ್ಯ ತಿಳ್ಕೊಂಡು ಥಿಯೇಟರಿಗೆ ಹೋಗಿ.. ನಿಮಗೂ ಆ ಕಿಕ್ ಸಿಗಬಹುದು…

ಪೆಪೆಯಲ್ಲಿ ಬರುವಂತಹ ಈ ಪಾತ್ರಗಳು ನಿಮಗೆ ತಿಳಿದಿದ್ದಲ್ಲಿ, ನೀವು ಪೆಪೆಗೆ – ಪೆಪೆಯಲ್ಲಿ ಬರುವ ಸನ್ನಿವೇಶಗಳಿಗೆ – ವಿಡಂಬನೆಗಳಿಗೆ – ನೋವಿಗೆ – ನಲಿವಿಗೆ – ಹೆಚ್ಚಾಗಿ ಪಾತ್ರಗಳ ಮನಸ್ಥಿತಿಗೆ ಮತ್ತಷ್ಟು ಹತ್ತಿರವಾಗುತ್ತೀರಿ ಎನ್ನುವ ವಿಶ್ವಾಸ ಚಿತ್ರತಂಡದ್ದು. ಇದೇ ತಿಂಗಳ 30 ರಂದು ಚಿತ್ರ ತೆರೆಗೆ ಬರಲಿದ್ದು ಅಭಿಮಾನಿಗಳು ಕಾತುರದಿಂದ ಎದುರು ನೋಡುವಂತಾಗಿದೆ.
